ಪುಟ:ಸ್ವಾಮಿ ಅಪರಂಪಾರ.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ೧೬೯

 ಇದೇ ಅಥವಾ ಇಂಥದೇ ಮಾತುಕತೆ.
 ಕೊಡಗಿನೊಳಗೆ ಮಾತ್ರವಲ್ಲ ಕನ್ನಡ ಜಿಲ್ಲೆಯಲ್ಲೂ ತನ್ನವರಿಗೆ ಸೋಲಾಯಿತೆಂದು ಅಪರಂಪಾರ ತಿಳಿದುದು ಆ ಅಧಿಕಾರಿಯಿಂದ.
"ಸೋತೆ ಅಂತ ಈಗಲಾದರೂ ಒಪ್ಪಿಕೊಳ್ಳುತೀಯಾ?"
"ಕೆಲವರನ್ನು ಕೊಂದ ಮಾತ್ರಕ್ಕೆ ಸ್ವಾತಂತ್ರದ ಹಂಬಲ ಸಾಯುತದಾ?"
"ನೀನೊಬ್ಬ ಹುಚ್ಚ"
"ನಿಜವಪ್ಪ, ನನಗೆ ಸ್ವಾತಂತ್ರ್ಯದ ಹುಚ್ಚು."
ಇನ್ನೊಂದು ದಿನ ಅಧಿಕಾರಿ ಕೇಲಳಿದ:
"ದಿವಾನ ಲಕ್ಷ್ಮಿನಾರಾಯಣನನ್ನು ಬಲ್ಲೆಯಾ ?" 
"ನಿಮ್ಮ ಕಿಂಕರ, ಹುಲಿ ಹಿಡಿಯಿತಾ ಅವನನ್ನು ?"
"ಹುಲಿಯಲ್ಲ ಸಿಂಹ, ನಮ್ಮ ಅತಿಥಿಯಾಗಿ ಇಲ್ಲಿಗೇ ಬಂದಿದ್ದಾನೆ. ಮುಂದುಗಡೆ ಸಾಲಿನಲ್ಲಿ ಇರಿಸಿದೇವೆ.'
"ಓ! ನಿಮ್ಮ ಚಾಕರರ ಮೇಲೂ ಸಂಶಯ ತಳೆಯುವ ದುರ್ಗತಿ ಒದಗಿತೆ ನಿಮಗೆ?” "ನಿಮ್ಮವರಿಗೆ ಅವನು ಸಹಾಯ ಮಾಡಿಲ್ಲ ಅನ್ನುತೀಯಾ?" 
"ದ್ರೋಹಿಗಳ ನೆರವ ನಂಬಿ ಸ್ವಾತಂತ್ರ್ಯವೀರರು ಹೋರಾಟದ ಕಣಕ್ಕೆ ಇಳಿಯುವು ದಿಲ್ಲವಪ್ಪ..."

–ಅಪರಂಪಾರ ಯೋಚಿಸಿದ, ಲಕ್ಷ್ಮಿನಾರಾಯಣನ ಬಂಧನದ ಅರ್ಥವೇನು? ಜ್ಯೋತಿ ಆರಿಲ್ಲ ಎಂದಾಯಿತು ಹಾಗಾದರೆ. ಅವರಿಗೆ ಅಲ್ಲಿ ಪ್ರತಿಭಟನೆ ಹೆಚ್ಚುತ್ತಿರಬೇಕು. ಅಥವಾ ಎಲ್ಲವೂ ಮುಗಿದೇಹೋಯಿತೋ? ಸಂತೆಯ ಗದ್ದಲದ ಅನಂತರ ನೆಲ ಗುಡಿಸಿ ಕಸ ಕಡ್ಡಿಗಳನ್ನೆಲ್ಲ ಎತ್ತಿಹಾಕುತ್ತಿರುವರೋ?

ಅವನ ಮನಸ್ಸು ರೋಧಿಸಿತು.
"ಶಂಕರಾ! ನೀನೆನ್ನ ಪರಿಭವದ ಬಾಧೆಯನು ನೋಡು.”
                *  *  * 
ಕೊಡಗನ್ನು ಇಂಗ್ಲಿಷರು ವಶಪಡಿಸಿಕೊಂಡಾಗ ರಾಜ್ಯದ ಬೊಕ್ಕಸದಲ್ಲಿ ಒಂದೂವರೆ 

ಲಕ್ಷ ಪವನು ನಿಧಿಯಿತ್ತು. ಅದರಿಂದ ತೃಪ್ತರಾದ ಆಂಗ್ಲರು ಅರಮನೆಯ ಭಂಡಾರವನ್ನು ಚಿಕವೀರರಾಜ ಒಯ್ದಾಗ ಅಡ್ಡಿಮಾಡಲಿಲ್ಲ. ಅಲ್ಲದೆ, ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಎಂಬತು ಸಾವಿರ ಪವನು ಹಣವನ್ನು ದೊಡ್ಡವೀರರಾಜೇಂದ್ರ ಇರಿಸಿದ್ದ. ಶೇಕಡ ಹನ್ನೆರಡೂವರೆಯ ಬಡ್ಡಿ ಅದಕ್ಕೆ. ಕಂಪೆನಿ ಲಿಂಗರಾಜನಿಗೆ ಬಡ್ಡಿಯನ್ನೂ ಕೊಟ್ಟಿರಲಿಲ್ಲ. ಮೂಲ ನಿಧಿಯನ್ನೂ ಹಿಂದಿರುಗಿಸಿರಲಿಲ್ಲ. ಚಿಕವೀರರಾಜೇಂದ್ರ ಅರಸನಾದಾಗಲೂ ಅಷ್ಟೆ, ಕೊಡಗು ತಮ್ಮ ಅಧೀನವಾದಾಗ ಆ ಹಣವೂ ತಮ್ಮದಾಯಿತು ಎಂದು ಇಂಗ್ಲಿಷರು ಸಾರಿದರು.

ವೇಲೂರಿನ ಕಲೆಕ್ಟರನೆಂದ:
"ಕಲಕತ್ತೆಗೋ ? ಕಾಶಿಗೋ ? ನಿಮ್ಮ ನಿರ್ಧಾರ ತಿಳಿಸಿಬಿಡಿ.”
ರಾಣಿಯೊಡನೆಯೂ ಸೋಮಯ್ಯ-ತಿಮ್ಮಣ್ಣಗೌಡರೊಡನೆಯೂ ಆ ಮೊದಲೇ ಸಮಾಲೋಚನೆ ನಡೆಸಿದ್ದ ಚಿಕವೀರರಾಜನೆಂದ :