ಪುಟ:ಸ್ವಾಮಿ ಅಪರಂಪಾರ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೧೭೧

“ಸಿಂಹಾಸನಕ್ಕೆ ನಮಗಿರುವ ಹಕ್ಕಿನ ವಿಷಯ ಖಾವಂದರನ್ನು ಕೇಳೋಣ ಅಂತ
ಬಂದೆವು.”
“ನಿಮಗೆ ತಿಳಿಯದ್ದಲ್ಲ. ನಿಮ್ಮ ರಾಜ್ಯದ ಪ್ರಜಾಪ್ರಮುಖರು ಸೇರಿ, ಸರ್ವಾನುಮತ
ದಿಂದ, ಹಾವೇರಿವಂಶದ ಯಾರಿಗೂ ತಮ್ಮನ್ನು ಒಪ್ಪಿಸಬಾರದೂಂತ ವಿನಂತಿ ಮಾಡಿ
ಕೋಂಡರಲ್ಲ? ಪ್ರಜೆಗಳ ಅಪೇಕ್ಷೆಗೆ ವಿರುದ್ದವಾಗಿ ಯಾವತ್ತೂ ನಾವು ವರ್ತಿಸುವವರಲ್ಲ.”
ಹಿಂದೆಯಾಗಿದ್ದರೆ 'ಈ ಠಕ್ಕು ಮಾತು ನಿಲ್ಲಿಸು!' ಎಂದು ಚನ್ನಬಸಪ್ಪ ಗದರುತ್ತಿದ್ದ.
ಈಗ ಏನನ್ನೂ ಹೇಳಲಿಲ್ಲ.
ಕೆಲ ನಿಮಿಷ ಮೌನವಾಗಿದ್ದು ಚನ್ನಬಸಪ್ಪನೆಂದ :
“ಇದು ತಮ್ಮ ಆಖೈರು ತೀರ್ಮಾನ ಅನ್ನಿ.”
“ಹೌದು.”
ಆಗ ದೇವಮಾಜಿ ಅಂದಳು :
“ಊರಿಗೆ ಹೋಗಿ ಸಾಯಬೇಕೂಂತ ನನಗೊಂದು ಆಸೆ ಅದೆ.”
ಮಾತಿನ ನಡುನಡುವೆ ಆ ದೊರೆ ಮಗಳನ್ನು ಅಧಿಕಾರಿ ನೋಡುತ್ತಲಿದ್ದ. ಹಾಗೆ ಆತ
ನೋಡಿದಾಗಲೆಲ್ಲ ಚನ್ನಬಸಪ್ಪನ ಮೈ ಉರಿಯುತ್ತಿತ್ತು.
ಅಧಿಕಾರಿಯೆಂದ:
“ಸಾಯೋದು ? ನಿಮಗಿನ್ನೂ ಚಿಕ್ಕ ವಯಸ್ಸು. ಅಲ್ಲದೆ__”
ಮಾತನ್ನು ಪೂರ್ತಿಗೊಳಿಸಲು ಅವನಿಗೆ ಅವಕಾಶವೀಯದೆ ಚನ್ನಬಸಪ್ಪನೆಂದ :
“ನಮ್ಮ ಪತ್ನಿ ಬಹಳ ಕಾಲದ ನಂತರ ಬಸಿರಾಗಿದ್ದಾರೆ. ಹೆರಿಗೆಗೆ ಅಪ್ಪಂಗಳಕ್ಕೆ ಹೋಗ
ಬೇಕೂಂತ ಅವರ ಆಸೆ.”
ಹೆಣ್ಣಿನ ಬಗೆಗೆ ಕನಿಕರ ತೋರಿ ಅವಳ ಮೆಚ್ಚುಗೆ ಗಳಿಸಬೇಕೆಂಬ ಅಪೇಕ್ಷೆ ಅಧಿಕಾರಿಗೆ.
ಅದರ ಜತೆಗೆ, ಇವಳಿಗೆ ಗಂಡು ಹುಟ್ಟಿದರೆ ಮುಂದೆ ತೊಂದರೆಯಾಗುವುದೇನೋ ಎಂಬ
ಶಂಕೆ
. ಅವನೆಂದುಕೊಂಡ: ಹೋಗಲಿ. ಇವರಿಂದೇನಾದೀತು ? ಜನರಂತೂ ತಮ್ಮ ರಾಜ
ನಿಗೆ ದ್ರೋಹ ಬಗೆದ ಚನ್ನಬಸಪ್ಪನನ್ನು ಇಷ್ಟಪಡುವುದಿಲ್ಲ. ಅಣ್ಣನಿಗೆ ಕೇಡೆಣಿಸಿದ
ತಂಗಿಯ ವಿಷಯದಲ್ಲೂ ಅವರು ಗೌರವ ತೋರುವುದಿಲ್ಲ. ಇಷ್ಟರ ಮೇಲೂ ಕಿರುಕುಳ
ವಾಯಿತೆಂದರೆ ಇವರನ್ನು ಹಿಡಿದು ಗಡೀಪಾರು ಮಾಡಿಸುವುದು ಎಷ್ಟರ ಕೆಲಸ ? ಅಲ್ಲದೆ.
ಹೊರಗೇ ಉಳಿದರೆ ಅಲ್ಲಿ ಇಲ್ಲಿ ಸಂಚರಿಸಿ ತಮಗೆ ಅನ್ಯಾಯವಾಯಿತೆಂದು ಪ್ರಚಾರ
ಮಾಡುತ್ತಾರೆ. ಈ ಅಂಶವನ್ನು ವರದಿಯಲ್ಲಿ ಗವರ್ನರರಿಗೆ ಮನಗಾಣಿಸಿಕೊಟ್ಟರಾಯಿತು.
ಅಪ್ಪಂಗಳಕ್ಕೆ ಇವರನ್ನು ಕಳುಹಿಸಿದ ತನ್ನ ತೀರ್ಮಾನ ಸರಿಯೆಂದು ಅವರು ನಿಸ್ಸಂದೇಹ
ವಾಗಿ ಒಪ್ಪುವರು.
ದೇವಮ್ಮಾಜಿಯ ಕಡೆ ನೋಡಿ ಕಂಠವನ್ನು ಆದಷ್ಟು ಮೃದುಗೊಳಿಸಿ ಅಧಿಕಾರಿಯಿಂದ :
“ಆಗಲಿ ರಾಜಕುಮಾರಿ, ಅಪ್ಪಂಗಳಕ್ಕೆ ಹೋಗುವಿರಂತ.”
...ಪ್ರಯಾಣದ ವೇಳೆಯಲ್ಲಿ ದೇವಮಾಜಿ ಗಂಡನೊಡನೆ ಅಂದಳು :
“ಒಳ್ಳವನು, ಇಗ್ರೇಜಿಯವರೆಲ್ಲಾ ಹೀಗೆ ಇದ್ದಿದ್ದರೆ ನಮಗೆ ಈ ಗತಿಯಾಗ್ತಿರ್ಲಲ್ಲ.”
ಚನ್ನಬಸಪ್ಪ ಸಿಟ್ಟಿನಿಂದ ನುಡಿದ: