ಪುಟ:ಸ್ವಾಮಿ ಅಪರಂಪಾರ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ ಅಪರಂಪಾರ לנeל) ರಾಜಮಾಜಿ ಅನ್ನುತ್ತಿದ್ದಳು : "ಅಕಾ, ದುಃಖಿಸಬೇಡ, ಯಾವುದಕ್ಕೂ ಕಾಲ ಬರಬೇಕು, ಅಲ್ಲವಾ?" ಕಾಲನ ಕರೆ ಹಳ್ಳಿಯಲ್ಲಿ ಗಂಗಮ್ಮನಿಗೆ ಬಂದಿತು, ಅವಳ ಒಡಹುಟ್ಟಿದವನು, ಅಪ್ಪಂಗಳದ ಹಾದಿಯಾಗಿ ಹೋಗುತ್ತಿದ್ದ ಒಬ್ಬನೊಡನೆ ಸುದ್ದಿ ಕಳುಹಿದ್ದ: ಅಪ್ಪಂಗಳದಿಂದ ಹಿಂತಿರುಗಿದ್ದಾಗಿನಿಂದಲೂ ಗಂಗಮ್ಮನಿಗೆ ಆಗಾಗ್ಗೆ ಮತಿಭ್ರಮಣೆ ಯಾಗುತ್ತಿತ್ತಂತೆ. ಕಳೆದ ತಿಂಗಳಲ್ಲಿ ಆ ಕಾಹಿಲೆ ಪ್ರಕೋಪಕ್ಕೆ ಹೋಯಿತಂತೆ. ಕೆಲ ದಿನಗಳ ಹಿಂದೆ ಒಮ್ಮೆ ಮೂರ್ಛೆ ತಪ್ಪಿದವಳು ಪುನಃ ಚೇತರಿಸಿಕೊಳ್ಳಲಿಲ್ಲವಂತೆ. ಅದನ್ನು ಕೇಳಿದ ರಾಜಮಾಜಿ ರೋದಿಸಲಿಲ್ಲ, ಎರಡು ದಿನ ಮಂಕು ಕವಿದವಳಂತೆ ವರ್ತಿಸಿದಳು.ನಿಂತಲ್ಲೆ ನಿಂತುಬಿಡುತ್ತಿದ್ದಳು. ಕುಳಿತಲ್ಲೆ ಕುಳಿತುಬಿಡುತ್ತಿದ್ದಳು. ಮೂರನೆಯ ದಿನನಿತ್ಯದಂತೆ ಮನೆಗೆಲಸದಲ್ಲಿ ನಿರತಳಾದಳು. ದೇವಮಾಜಿಯೊಡನೆ ಅವಳೆಂದಳು : "ನಮ್ಮಮ್ಮ ಏನೇನೋ ಆಸೆ ಕಟ್ಟೊಂಡಿದು, ಒಂದು ದಿನವಾದರೂ ಸುಖವಾಗಿರಲಿಲ್ಲ. ಪಾಪ! ಪಡೆದು ಬಂದಿದ್ದರಲ್ಲವಾ ಅದೆಲ್ಲ ?" &筑 ಕುಳಿತು ತಿನ್ನಲು ಕುಡಿಕೆ ಹೊನ್ನು ಸಾಲದು. ಚಿಕವೀರರಾಜನ ಬಳಿ ಹೊನ್ನು ತುಂಬಿದ ಹಲವು ಕುಡಿಕೆಗಳಿದ್ದುವು. ಆದರೂ ಆ ನಿಧಿ ಬರಬರುತ್ತ ಸ್ವಾಭಾವಿಕವಾಗಿಯೇ ಕರಗಿತು. ಅರಸೊತ್ತಿಗೆಯನ್ನು ಮರಳಿ ಪಡೆಯುವ ಅವನ ನಿರೀಕ್ಷೆ ಈಗ ಬರಿಯ ಕನಸಾಯಿತು. ಕಂಪೆನಿ ಸರಕಾರ ಕೊಡಲೊಪ್ಪಿದ ಆರು ಸಾವಿರ ಪವನುಗಳ ವರ್ಷಾಶನವನ್ನು ಚಿಕವೀರ ರಾಜೇಂದ್ರ ಸ್ವೀಕರಿಸಿದ. “ನಮಗೋಸ್ಕರ ಅಲ್ಲ, ಇದು ನಮ್ಮ ಪರಿವಾರದ ಅಲ್ಪಸ್ವಲ್ಪ ವೆಚ್ಚಕ್ಕೆ" ಎಂದ ಆತ. ಮಾಸಗಳು ವರ್ಷಗಳಾದುವು. "ಅರಸ ಊರಿಗೆ ಹಿಂತಿರುಗುವ ಮಾತೇ ಇಲ್ಲ, ನಾವು ಇನ್ನೆಷ್ಟು ವರ್ಷ ಅಂತ ಇಲ್ಲಿ ಇರೋಣ ?” ಎಂದು ಪರಿವಾರದ ಕೆಲವರು ತಮ್ಮ ತಮ್ಮೊಳಗೇ ಆಡಿಕೊಂಡರು. ಆದಷ್ಟು ಜನರನ್ನು ಕೊಡಗಿಗೆ ಕಳುಹಿಬಿಡಬೇಕೆಂದು ಚಿಕವೀರರಾಜನಿಗೂ ಅನಿಸಿತು. ಆದರೆ, ಅದು ನಿಷ್ಟುರದ ವರ್ತನೆಯಾಗುತ್ತದೆಂದು ಅವನು ಹಿಂಜರಿದಿದ್ದ, ಈಗ ಪರಿವಾರದ ಜನರಿಂದಲೇ ಆ ಪ್ರಸಾಪ ಬಂದಾಗ ಅವನು ಕ್ಷಿಪ್ರ ತೀರ್ಮಾನವನ್ನು ಕೈಕೊಂಡ. ಹಲವು ಕುಟುಂಬಗಳು ಸನಾನಿತವಾಗಿ ಹುಟ್ಟೂರಿಗೆ ಮರಳಿದುವು. ರಾಜ್ಯ-ಅಧಿಕಾರಗಳಿಲ್ಲದೆ ಹೋದರೂ ಚಿಕವೀರರಾಜ ಅರಸನಂತೆ ಬಾಳ್ವೆ ನಡೆಸಿದ. ರಾಣಿಯನ್ನೂ ರಾಜಕುಮಾರಿಯನ್ನೂ ಓಲೈಸಲು ದಾಸದಾಸಿಯರು, ನಿವಾಸಕ್ಕೆ ದಾರ ಪಾಲಕರು, ಅಂಗರಕ್ಷಕರು, ಕುದುರೆಗಳು, ಸಾರೋಟು, ಇಬ್ಬರು ಮೂವರು ಉಪಪತ್ನಿ ಯರು–ಸಣ್ಣ ಪ್ರಮಾಣದ್ದೇ ಆದರೂ ಅರಮನೆಯ ಶೋಭೆಯಿತು ಚಿಕವೀರರಾಜನ ವಸತಿಗೆ. ಉಪಪತ್ನಿಯರಲ್ಲಿ ಅರಸನಿಗೆ ಗಂಡುಮಕ್ಕಳೂ ಹುಟ್ಟಿದರು.