ಪುಟ:ಸ್ವಾಮಿ ಅಪರಂಪಾರ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ

"ಮಹಾಸ್ವಾಮಿ, ಹೀಗಾಗಬಾರದಿತು, ನನಗೆ ನಿಜವಾಗಿಯೂ ಖೇದವಾಗಿದೆ: ನಿಜ ವಾಗಿಯೂ ಖೇದವಾಗಿದೆ."

"ಮರೆತುಬಿಡಿ ಅದನ್ನು" ಎಂದು ಅರಸ ನುಡಿದು, ದಾಸಿಯೊಬ್ಬಳನ್ನು ಕರೆದು ಆಜ್ಞಾಪಿ ಸಿದ:

"ಮೇಘಲಿಂಗರು ಬಂದಿದಾರೆ ಅಂತ ರಾಣಿಯವರಿಗೆ ತಿಳಿಸು."

...ಹಲವು ಮಾತುಗಳನಾಡಿದ ಬಳಿಕ ಮೇಗ್ಲಿಂಗ್ ಅಂದ:

"ಮಹಾಸ್ವಾಮಿ, ತಾವು ಇಂಗ್ಲೆಂಡಿಗೆ ಬರುವ ಯೋಚನೆ ಮಾಡಬೇಕು. ಮಹಾರಾಣಿ ಯವರನ್ನೂ ರಾಜಕುಮಾರಿಯನ್ನೂ ಕರೆದುಕೊಂಡು ಬರಬೇಕು. ಅಲ್ಲಿ ನನ್ನ ಅತಿಥಿಗಳಾಗಿರ ಬೇಕು-ನಿಮಗೆ ನಾಯ ದೊರಕಿಸಿಕೊಡುತೇನೆ. ಒಲ್ಲೆ ಅನ್ನಬೇಡಿ."

"ವಿಲಾಯತಿಯೆಲ್ಲಿ-ಕಾಶಿಯೆಲ್ಲಿ..." ಎಂದು ತಲೆಯಲ್ಲಾಡಿಸಿದಳು ಗೌರಮ್ಮ, ಅರಸ ಪ್ರತಿಕ್ರಿಯೆ ವ್ಯಕ್ತಪಡಿಸುವುದಕ್ಕೂ ಮುನ್ನ.

"ವಿಚಾರಮಾಡಿ, ಮಹಾರಾಣಿಯವರೆ, ಇದರಿಂದ ತಮಗೆ ಪ್ರಯೋಜನವಾಗುತದೆ. ನಾನು ಮುದುಕನಾದೆ. ಈಗ ಯಾರ ನೌಕರಿಯಲ್ಲಾ ಇಲ್ಲ, ಸ್ವತಂತ್ರ, ಕೊಡಗಿನ ರಾಜ್ಯ ತಮಗೆ ಮರಳಿ ಸಿಗುವಂತೆ ಮಾಡಿ ನಾನು ಕಣ್ಣು ಮುಚ್ಚುತೇನೆ. ಆಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ದೊರೆತೀತು."

ಚಿಕವೀರರಾಜನೆಂದ :

"ಮೇಘಲಿಂಗರೆ, ನಿಮ್ಮ ವಿಶ್ವಾಸ ದೊಡ್ಡದು. ಇರಲಿ, ಮುಂದೆ ಈ :ವಿಷಯವಾಗಿ ನಾವು ನಿಮಗೆ ಬರೆಯುತೇವೆ."

...ಮೇಗ್ಲಿಂಗ್ ಸ್ವದೇಶಕ್ಕೆ ತೆರಳಿದ, ಅವನು ಬಿತ್ತಿಹೋಗಿದ್ದ ಬೀಜ ಚಿಕವೀರರಾಜನ ಮನಸಿನಲ್ಲಿ ಮೊಳೆತಿತು. ಇಂಗ್ಲೆಂಡಿಗೆ ಹೋಗಿ ರಾಜ್ಯಪಾಪ್ತಿಗಾಗಿ ಯತ್ನಿಸುವುದು ಸಮಂಜಸ: ಅಷ್ಟೇ ಅಲ್ಲ, ಈಗ ಉಳಿದಿರುವುದು ಅದೊಂದೇ ಮಾರ್ಗ-ಎಂಬುದು ಅವನಿಗೆ ಮನದಟಾಯಿತು.

ಇದ್ದುದೊಂದೇ ತೊಂದರೆ–ರಾಣಿ ಗೌರಮ್ಮನ ಶರೀರಸ್ಥಿತಿ."

ಆವಳೆಂದಳು :

"ಸಮುದ್ರ ಪಯಣ.. ಈ ಜೀವ ಅದನ್ನು ತಡಕೋತದಾ ? ಹಡಗಿನಲ್ಲೇ ಶಿವ ಅಂತ ಕಣ್ಣ ಮುಚ್ಚತೀನಿ, ಕಡಲಿಗೆ ಎಸೀತೀರಾ? ವಿಶ್ವೇಶ್ವರನ ಸಾನ್ನಿಧ್ಯದಲ್ಲೇ ನಾನು ಸತ್ತ ರಾಗುತ್ತಿತ್ತು."

ಗೌರಮ್ಮನ ಕಳೆಗುಂದಿದ ಮುಖವನ್ನು ನೋಡಿ, ವಿದೇಶ ಪ್ರವಾಸದ ತನ್ನ ವಿಚಾರ ವನ್ನು ಚಿಕವೀರರಾಜ ದೂರ ತಳ್ಳಿದ.

ಆದರೆ ಸ್ವಲ್ಪ ಸಮಯದೊಳಗಾಗಿಯೇ ಪರಿಸ್ಥಿತಿ ಬದಲಾಯಿಸಿತು.

ರಾಣಿ ಗೌರಮ್ಮ ವಿಷಮಶೀತಜ್ವರದಿಂದ ನರಳಿದಳು. ಮೊದಲೇ ಸೊರಗಿದ್ದ ಜೀವ ಆ ಆಘಾತದಿಂದ ಚೇತರಿಸಿಕೊಳ್ಳಲಾರದೇ ಹೋಯಿತು. ಯಾವ ಔಷಧೋಪಚಾರಕ್ಕೂ ಕಾಹಿಲೆ ಜಗ್ಗలిల్లి.

ಒಂದು ಸಂಜೆ ಜ್ವರ ಇಳಿಯಿತು, ಮುಖದಲ್ಲಿ ಗೆಲುವು ಮೂಡಿತು. ಹೊರಗೆ ಒಬ್ಬನೇ ಕುಳಿತಿದ್ದ ಅರಸನೆಡೆಗೆ ಮಗಳು ಓಡಿ ಬಂದಳು.