ಪುಟ:ಸ್ವಾಮಿ ಅಪರಂಪಾರ.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

"ಅಪ್ಪಾಜಿ! ಅಪ್ಪಾಜಿ! ಅಮ್ಮನಿಗೆ ಜ್ವರ ಕಮ್ಮಿಯಾಗಿದೆ. ಕರೀತಾಳೆ. ನೀವು ಬರ ಬೇಕಂತೆ."

ಗೌರಮ್ಮನ ಪಾಲಿಗೆ ಸಾವು ಬದುಕಿನ ಎಲ್ಲ ಯಾತನೆಗಳಿಂದ ಬಿಡುಗಡೆ, ತಾನು ದುಃಖಿಸ ಬಾರದು-ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದ ಚಿಕವೀರರಾಜ, ಮಗಳ ಧ್ವನಿಯಲ್ಲಿ ಒಡಮೂಡಿದ್ದ ಹರ್ಷವನ್ನು ಕಂಡವನೇ ಲಗುಬಗೆಯಿಂದ ಎದು, ಆಕೆಯನ್ನು ಹಿಂಬಾಲಿ ಸಿದ.

ಅರಸ ಹತ್ತಿರ ಬಂದಾಗ ಗೌರಮ ಅಂದಳು.:

"ಕೂತ್ಕೋಳ್ಳಿ..ತೊಡೆಯ ಮೇಲೆ ತಲೆ–ಇರಿಸಿಕೊಳ್ಳಿ.."

ಹಾಗೆ ಮಿಸುಕಾಡಬಾರದು, ಬೇಡ-ಎನ್ನಲು ಹೊರಟಿದ್ದ ಚಿಕವೀರರಾಜ-ಆದರೆ, ಮಡದಿಯ ಗುಳಿ ಬಿದ್ದಿದ್ದ ಕಣ್ಣಗಳಲ್ಲಿ ಆಸೆಯ ಕುಡಿಗಳು ತೂರಾಡುತ್ತಿದ್ದುದನ್ನು ಆತ ಕಂಡ.

ತಾನು ಪಲ್ಲಂಗದ ಮೇಲೆ ಆಕೆಯ ಶಿರಸ್ಸಿನ ಬಳಿ ಕುಳಿತು, ಮೃದುವಾಗಿ ತನ್ನ ತೊಡೆಯ ಮೇಲೆ ಆಕೆಯ ತಲೆಯನ್ನಿರಿಸಿದ.

ದಾಸಿ ಬ೦ದು ಪಿಸುನುಡಿದಳು :

"ವೈದ್ಯರು ಒಳಕ್ಕೆ ಬರಲೇ ಅಂತ ಕೇಳುತಿದ್ದಾರೆ."

"ಬೇಡ-ಅನ್ನಿ" ಎಂದಳು ಗೌರಮ್ಮ, ಗಂಡನೊಡನೆ. ಅವಳ ತುಟಿಗಳ ಮೇಲೆ .


ಗೌರಮ್ಮನೆಂದಳು.:

"ದೀಪ ತರಿಸಿ, ಕಾಣಿಸತಾ ಇಲ್ಲ, ನಿಮ್ಮನ್ನ ನೋಡಬೇಕು."

ಸೂರ್ಯ ಮುಳುಗಲು ಮತ್ತೂ ಒಂದು ಘಳಿಗೆಯಿತು, ಆದರೂ ತಾಯಿಯ ಅಪೇಕ್ಷೆಯಂತೆ ರಾಜಕುಮಾರಿ ನೀಲಾಂಜನವನ್ನು ಹಚ್ಚಿಸಿದಳು.

ಗೌರಮ್ಮ ಕೆಲ ನಿಮಿಷ ಗಂಡನ ಮುಖವನ್ನೇ ಎವೆಯಿಕ್ಕದೆ ದಿಟ್ಟಿಸಿದಳು.

ಕಣ್ಣಿನ ರೆಪ್ಪೆಗಳಿಗೆ ಮುಚ್ಚಿಕೊಳ್ಳುವ ಶಕ್ತಿಯೇ ಇದ್ದಂತಿಲ್ಲ–ಎನಿಸಿತು ಚಿಕವೀರರಾಜ నిಗ.

ಗೌರಮ್ಮ ನಿಧಾನವಾಗಿ ಅಂದಳು :

“ಇಲ್ಲಿ ಬಾ ಮಗಳೇ, ಕೂತುಕೊ."

ರಾಜಕುಮಾರಿ ಸಮಿಾಪಿಸಿ ಪಲ್ಲಂಗದ ಅಂಚಿನ ಮೇಲೆ ಕುಳಿತಳು.

"ದೊರೆ, ನಾ ಇನ್ನು ಹೋಗತೀನಿ...ಕಂದಮ್ಮ ತಾಯಿ ಇಲ್ಲದ ತಬ್ಬಲಿಯಾಗುತ್ತಾಳೆ. ನೋಡಿಕೊಳ್ಳಿ...ಇವಳ ಮೇಲಿನ ಮಮಕಾರದಿಂದ ಬೇರೆ ಆ ಮಕ್ಕಳನ್ನ ಕಡೆಗಣಿಸಬೇಡಿ. ಮಗಳ ಕರಕೊಂಡು ವಿಲಾಯತಿಗೆ ಹೋಗಿ ಬನ್ನಿ.ರಾಜ್ಯ ಸಿಕಾತು..ಇವಳ ರಾಣಿ ಮಾಡಿ...ಒಳ್ಳೆ ವರ ನೋಡಿ ಮದುವೆ ಮಾಡಿಸಿ."

ಅರಸನೆoದ :

"ನೀವು ಚಿಂತಿಸಬಾರದು. ಹೆಚ್ಚು ಮಾತಾಡಬೇಡಿ. ಆಯಾಸವಾಗತದೆ." ಗೌರಮ್ಮ ನುಡಿದಳು :