ಪುಟ:ಸ್ವಾಮಿ ಅಪರಂಪಾರ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಸ್ವಾಮಿ ಅಪರ೦ಪಾರ

○&

ದಾಸಿಯ ಕಡೆ ತಿರುಗಿ ಅವಳೆಂದಳು : "ಇವತು ರಾಜಸಭೆ ನಡೀತದೆ, ಬೇಟೆಯಿಂದ ವಾಪಸಾಗುವ ಹೊತ್ತಿಗೆ ರಾಜಧಾನಿಗೆ ಬರಬೇಕೂಂತ ಮುಖ್ಯರಿಗೆಲಾ ಮೊದಲೇ ರಾಯಸ ಹೋಗಿತ್ತು." ‘అంగా) ?" ఎందాము దాన్ని రాగాచేణిదాళు, ಸೂರರಶ್ಮಿ ರಾಣಿಯ ಮುಖದ ಮೇಲೆ ನರ್ತಿಸುತ್ತಿತು, ಬೇಟೆಯಿಂದ ಮರಳಿದ. ಅರಸನೊಡನೆ ಇರುಳನ್ನು ಕಳೆದು ಈಕೆ ಸುಖಿಯಾಗಿದ್ದಾಳೆ-ಎಂದುಕೊಂಡಳು ದಾಸಿ. ಮರುಕ್ಷಣವೇ 'ನಾಚಿಕೆ ಇಲ್ಲದವಳು ನಾನು : ಎಂಥ ಯೋಚ್ನ ಮಾಡ್ರಿದೇನೆ' ಎಂದು ತನ್ನನ್ನೇ ಹಳಿದಳು. 'ರತಿದೇವಿಯಂಥ ರೂಪ. ಇನ್ನು ಸ್ತ್ರೀ ವಾಟಿಕೆಯವರನ್ನು ಯಾರು ಕೇಳ್ತಾರೆ? ಎನಿಸಿತು. ರಾಣಿಗೆ ತನ್ನ ದೃಷ್ಟಿ ತಾಕಬಾರದೆಂದು ಮಡಚಿದ ಬೆರಳುಗಳನ್ನು శైలగె నేJణ్వండి, ఆశ నఱికే వాయురిడాళు. "ಅದೇನು ಮಾಡ್ರಿದೀಯಾ?" ಎಂದು ಕೇಳಿದಳು ರಾಣಿ. "ಏನಿಲ್ಲ ನಮ್ಮವ್ವ !! ಸಿಕು ನಾ ಬಿಡಿಸಲಾ ?" ರಾಣಿ ನಕು ನುಡಿದಳು : - “ಬೇಡ. ನೀನು ಹೋಗಿ ಮಹಾಸಾಮಿಯವರು ಸಿದ್ದರಾಗ್ರಿದಾರೇನೋ ನೋಡು.. ರಾಜಸಭೆಗೆ ಸವಾರಿ ಹೊರಡೋಕುಂಚೆ ನನಗೆ ಬಂದು ಹೇಳು. "లVణన్సెచ్మాణ." ದಾಸಿ ತೆರಳಿದೊಡನೆ ರಾಣಿ, ಬಿಸಿಲು ಮಂಟಪದಿಂದ ಇಳಿದು, ಮುಂಭಾಗದ ಜಾಲಂದ್ರ ದತ್ತ ಬಂದಳು. ಗೋಡೆಯನ್ನು ಕೊರೆದು ಮಾಡಿದ ಆ ತೂತಿನಿಂದ ಆಕೆ ಹೊರಕ್ಕೆ ದೃಷ್ಟಿ ಹಾಯಿಸಿದಳು. ಮೇಲಣ ಜಾಲಂದ್ರದಿಂದ ಊರು ಕಾಣಿಸುತ್ತಿತು. ಹಳ್ಳತಿಟ್ಟಗಳಲ್ಲಿ ಮನೆಗಳು ತುಂಬಿದ ಜೇನುತೊಟ್ಟಿ ಮಡಕೇರಿ, ಅದರ ಮೂಡು ಭಾಗ ಅಲ್ಲಿಂದ ಕಾಣಿಸು ತ್ರಿತು, ಊರ ಹೊರವಲಯದಲ್ಲಿ ದಟ್ಟನೆಯ ಹಸಿರು : ಅರಣ್ಯ, ಅದರಾಚೆಗೆ ನೀಲಿ ಬೆಟ್ಟ, ಆ ಬೆಟ್ಟದ ಹಿಂಬದಿಯಲ್ಲಿ ಇನ್ನೊಂದು ಬೆಟ್ಟ ಸಾಲು, ಮಂಜಿನ ಪರದೆ ನೀಲ ಗಗನದಿಂದ ಇಳಿದು ಬೆಟ್ಟದ ಕೋಡುಗಳನ್ನು ಮುಟ್ಟಿದಂತಿತು, ಐದು ಯೋಜನ ಉದ್ದ ಮೂರು ಯೋಜನ ಅಗಲದ ಫಲವತಾದ ಭೂಮಿ ಕೊಡಗು. ಅದಕ್ಕೆ ತಾನು ರಾಣಿ... ಗೌರಮ್ಮ ತುಸು ಬಾಗಿ ಕೆಳಗಿನ ಜಾಲಂದ್ರದಿಂದ ನೋಡಿದಳು. ಪಲ್ಲಕ್ಕಿಗಳಲ್ಲಿ ಬಂದು ಇಳಿಯುತ್ತಿದ್ದವರು శలవారా), ఆలిణರೂಢರಾಗಿ ఒురోుత్తిడ్గా ವರು ಕೆಲವರು. ಕಾಲ್ನಡಿಗೆ ಯಿಂದ ಕಡಿದು ದಾರಿಯಲ್ಲಿ ಏರಿ ಬರುತ್ತಿದ್ದವರು ಕೆಲವರು. ಗೌರಮ್ಮ ಅಂದುಕೊಂಡಳು : 'ಇವರೆಲ್ಲ ಸ್ವಾಮಿನಿಷ್ಕರಾದ ಪ್ರಜಾ ಪ್ರಮುಖರು. ಇಂಥವರ ಬೆಂಬಲ ಇರೋದ ರಿಂದಲೇ ರಾಜಶ್ರೀ ಇಲ್ಲಿ ಸುರಕ್ಷಿತವಾಗಿ ನೆಲೆಸಿದಾಳೆ.' ಅಷ್ಟರಲ್ಲಿ ಕೊಂಬು ತಮಟೆಗಳು ಮೊಳಗಿದುವು. ಗೌರಮ್ಮ ಅತ್ತ ನೋಡಿದಳು. జాణవాడిశారాయణ అంచెుసాయ లuళిగాదాచారణ నేలరిశJండా), బవేJంబుగా నేరావినిందా ನೇರವಾಗಿ ನಿಲ್ಲಿಸಿದ್ದ ನಾಲ್ಕು ಹೆಬ್ಬಲಿಗಳನ್ನು ಹೊತ್ತು ತರುತ್ತಿದ್ದರು. ರಾಣಿ ಉತ್ಸುಕತೆ ಯಿಂದ ಅವುಗಳನ್ನು ದಿಟ್ಟಿಸಿ ನೋಡಿದಳು. ಹಿಂದಿನ ರಾತ್ರೆ ತನ್ನನ್ನು ತೋಳ ತೆಕ್ಕೆಯಲ್ಲಿ ಬಿಗಿದಪ್ಪಿ, ಆ ಹುಲಿಗಳನ್ನು ತಾನು ಗುಂಡಿಕ್ಕಿ ಕೊಂದ ಬಗೆಯನ್ನು ಅರಸ ಬಣ್ಣಿಸಿದ್ದ... 2