ಪುಟ:ಸ್ವಾಮಿ ಅಪರಂಪಾರ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

©ej ಸಾಮಿ ಅಸರಂಪಾರ ಮಹಾದಾರದೆದುರು ಒಂದೊಂದು ಬದಿಗೆ ಎರಡೆರಡರಂತೆ ಹೆಬ್ಬಲಿಗಳನ್ನು ನಿಲ್ಲಿಸಿ ದರು. "ದಾರಪಾಲಕರು !" ಎ೦ದು, :ে2 ತನಗೆ ಕೇಳಿಸುವಂತೆ ಅಂದು, ರಾಣಿ ನಸು ನಕ್ಕಳು. ಕೆಳಗೆ ನೆರೆದಿದ್ದ ಜನಸಂದಣಿ ಹೆಬ್ಬಲಿಗಳನ್ನು ನೋಡಿ ಹರ್ಷಧခွံ့ီပဲ ಮಾಡಿತು. "ಕೊಡಗು ಸಿಂಹಾಸನಾಧೀಶ್ವರ ಚಿಕವೀರರಾಜೇಂದ್ರ ಒಡೆಯ ಭೂಪಾಲರಿಗೆ–ಜಯ চতলণ্ড) !” ಪ್ರಜೆಗಳ ಧನಿಗೆ ತನ್ನದನ್ನೂ ಸೇರಿಸಬೇಕೆಂದು ಬಯಕೆಯಾಯಿತು ಗೌರಮ್ಮನಿಗೆ. ಆದರೆ ನಕ್ಕು, ತಾನು ಹುಚ್ಚು ಹುಡುಗಿ–ರಾಣಿ ಅನ್ನೋದನ್ನು ಮರೆಯೋದೇ ? ಗೌರವ ಸಲ್ಲುತ್ತಿರುವುದು ತನಗೇ ಅಲ್ಲವೆ?–ಎಂದುಕೊಂಡಳು. బావిగిల బుళి ಕೆಮ್ಮಿದ ಸದಾಯಿತು. *)。 "ಏನು ?” ಎಂದು ರಾಣಿ ಕೇಳುತ್ತಿದ್ದಂತೆಯೇ, ದಾಸಿ ಬಿನ್ನವಿಸಿದಳು : "ರಾಣಿಯವರೆಲ್ಲಿ ಅಂತ ಮಹಾಸಾಮಿಯವರು ಕೇಳತಾ ಅವರೆ.” “ჯადგ$.” ಅವಸರವಾಗಿ, ತಲೆಗೂದಲ ತುದಿ ಗಂಟಿಕ್ಕಿ, ಗೌರಮ್ಮ ದಾಸಿಯನ್ನು ಹಿಂಬಾಲಿಸಿದಳು. ಓಡುತ್ತ ಹೋಗೋಣವೆನಿಸಿತು. ಆದರೆ ಅರಸನ ಆಣತಿ ನೆನಪಾಯಿತು : "ನೀವು ರಾಣಿಗೆ ತಕ್ಕ ಗಾಂಭೀರ್ಯದಿಂದ ನಡೀಬೇಕು." ತವರಿನಲ್ಲಿ ಗಂಡನಿಗೆ ಸಮನಾದ ದಿಟ್ಟತನದಿಂದ ಓಡಿ ಆಡಿದವಳಿಗೆ ಗಂಭೀರ ನೋಟ ನಿಲುವು ಕಷ್ಟವಾಗಿರಲಿಲ್ಲ. ಆದರೆ ಚಿಗರೆಯ ನೆಗೆತವನ್ನು ಬಿಟ್ಟುಕೊಟ್ಟು ಮಂದಗಮನೆ ಯಾಗುವುದು ಸ್ವಲ್ಪ ಪ್ರಯಾಸದಾಗಿತು. ಎಲಾ, ಈ ದಾಸಿ ಮಾಯವಾದಳಲ್ಲ! ಖಾಸಾ ಸನ್ನಿಧಿಯ ಕೊಠಡಿ, ಅಲ್ಲಿ ಚಾಕರರ ಸುಳಿವಿಲ್ಲ. "బన్ని." ಒಡೆಯನ ಯುವಕ ಕಂಠ, ಕಿವಿಗೆ ಇ೦ಪು. ಗೌರಮ್ಮ ಒಳಕ್ಕೆ ಕಾಲಿರಿಸಿದಳು. ಅರಸ ಅವಳನ್ನು ಬರಸೆಳೆದುಕೊಂಡ. ನೋಟ ಕಣ್ಣು ಕೋರೈಸುವಂತಿತು, ಕಾಲು ತೊಡೆಗಳಿಗೆ ಅಂಟಿಕೊಂಡ ಬಿಳಿ ಷರಾ ಯಿಯ ಮೇಲೆ ಹಳದಿ ಬಣ್ಣದ ನಿಲುವಂಗಿ, ಸ್ವರ್ಣದ ಕಟಿಬಂಧ, ಅದರಲ್ಲಿ ತೂಗುತ್ತಿದ್ದ ರತ್ನಖಚಿತ ಹಿಡಿಯ ಕರವಾಳ, ಕಿವಿಯಲ್ಲಿ ಹರಳೋಲೆಗಳು. ಹಿಂದಕ್ಕೆ ಬಾಚಿದ್ದ ತಲೆ ಗೂದಲನ್ನು ಭದ್ರವಾಗಿ ಅದುಮಿ ಹಿಡಿದಿದ್ದ, ವಜ್ರವೈಢತೂರಗಳ ಪ್ರಭೆಯಿಂದ ಬೆಳಗು ತ್ತಿದ್ದ ಬಂಗಾರದ ಕಿರೀಟ, ಪಾದಗಳಿಗೆ, ರಜಪುತಾನದ ಮೋಚಿಗಳು ಅನರ್ಘ ರತ್ನಗಳ ನಿರಿಸಿ ಹೊಲಿದಿದ್ದ ಪಾದರಕ್ಷೆಗಳು. రాజసాంది : - "ನಾವು ಖುಷಿಯಲ್ಲಿದೇವೆ." ರಾಣಿ, ಸಂಕೋಚಪಟ್ಟುಕೊಳ್ಳುತ್ತ, ಅರಸನ ಹಿಡಿತದಿಂದ ಬಿಡಿಸಿಕೊಳ್ಳುತ್ತ ಅಂದಳು : "ತಮ್ಮ ಸಂತೋಷವೇ ನನ್ನ ಸಂತೋಷ, ರಾಜಸಭೆಗೆ ತಡವಾಗ್ಲಿದೆ.” "ಒಳ್ಳೆದು.. ನಿಮ್ಮ ಅಪ್ಪಣೆಗಾಗಿ ಕಾದಿದ್ವಿ."