ಪುಟ:ಸ್ವಾಮಿ ಅಪರಂಪಾರ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಸ್ವಾಮಿ ಅಪರಂಪಾರ

೧೯

“ಇಂಥ ಮಾತು ಕೇಳಿದರೆ ನನಗೆ ನಾಚಿಕೆಯಾಗುತ್ತೆ."
"ಒಂದು ಸುದ್ದಿ ತಿಳಿಸಿ ಹೋಗೋಣಾಂತ__"
"ಹೇಳೋಣಾಗಲಿ."
“ನಮ್ಮ ದಾಯಾದಿಗಳು ಕಳೆದ ರಾತ್ರೆ ತೀರಿಕೊಂಡು.” - ಸಿಡಿಲ ಸದ್ದು ಕೇಳಿಸಿದಂತಾಗಿ ಗೌರಮ್ಮ "ಹಾ!” ಎಂದು ಬಾಯಿ ತೆರೆದಳು. ಅರಸನ
ಕೈ ಅಡ್ಡಿಮಾಡಿತು.
ರಾಜನೆ೦ದ :
"ಶೋಕಿಸುವುದಲ್ಲ. ಇದು ಸಂತೋಷಪಡುವ ಸಮಯ. ಇನ್ನು ನಮ್ಮ ಅರಸೊತ್ತಿಗೆಗೆ
ಕಂಟಕವಿಲ್ಲ."
ರಾಣಿಗೆ ಇದು ಸುಲಭವಾಗಿ ಅರ್ಥವಾಗದ ಮಾತು.
"ಇಲ್ಲೇ ಕೋಟೆಮನೆಯಲ್ಲಿ ಇದ್ದರು, ಅಲ್ಲವಾ?”
"ಹ್ಮ, ಮಾರಿ ಬೇನೆ ಬಡೀತು" ಎಂದು ನುಡಿದು, ಅರಸ ನಕ್ಕ.
ಗಾಬರಿಗೊಂಡು ಗೌರಮ್ಮನೆಂದಳು:
“ಮಾರಿ ಬೇನೆ?” ತುಸು ಅಸಮಾಧಾನ ಬೆರೆತ ಧ್ವನಿಯಲ್ಲಿ ರಾಜನೆಂದ:
"ಹೌದು. ನಮ್ಮ ವಿರೋಧಿಗಳೆಲ್ಲಾ ಮಾರಿ ಬೇನೆ ಬಡಿದೇ ಸಾಯುತಾರೆ."
"ಪಾಪ, ರಾಜಮಾಜಿ ಇನ್ನು ವಿಧವೆ."
"ರಾಜಮಾಜಿ ? ವೀರಪ್ಪಾಜಿಯ ಹೆಂಡತೀನಾ? ಅದಕ್ಕೇನು ಗೊತು ಸಂಸಾರದ
ಸುಖ ? ಎಂಟು ವರ್ಷದ ಹಸುಳೆ. ಗಂಡನ ಮೈ ಸೋಂಕಿದ್ದರೆ ತಾನೆ?” "ತಾಯಿ ಮನೆಯಿಂದ ಇಲ್ಲಿಗೆ ಕರೆಸಿಬಿಡೋಣವಾ? ಎಷ್ಟೆಂದರೂ ನಾದಿನಿ...”
ಅಸಹನೆಯಿಂದ ಅರಸನ ಹುಬ್ಬಗಳು ಕೊಂಚ ಮೇಲಕ್ಕೇರಿದುವು, ಪದಗಳನ್ನು
ನಿಧಾನವಾಗಿ ಉಚ್ಚರಿಸುತ್ತ ಅವನೆಂದ:
“ಅರಮನೆಯಲ್ಲಿ ಆಕೆ ಇರೋದು ಬೇಡ. ಅಪ್ಪಂಗಳದಲ್ಲಿ ನಮ್ಮ ತಂಗಿಯ ಜತೆ ಇರಲಿ.
ದೊಡೊಳ್ಳೋಳಾದ ಮೇಲೆ ಯಾರನಾದರೂ ಕಟ್ಟಿಕೋತಾಳೆ."
“ಛೀ ! ಛೀ!" ತನ್ನ ಪರಿಹಾಸ್ಯದ ಮಾತು ಕೇಳಿ ರಾಣಿ ಹೇಸಿದುದನ್ನು ಕಂಡು, ಅರಸ ನಕ್ಕು, ಹೊರ ಹೋಗಲೆಂದು ನಾಲ್ಕು ಹೆಜ್ಜೆಗಳನ್ನಿರಿಸಿ, ಅಲ್ಲಿಂದಲೆ ಕತು ಹೊರಳಿಸಿ ರಾಣಿಯ ಕಡೆ ನೋಡಿ, ಅಂದ:
"ನಿಮ್ಮ ಮೇಲೆ ನನಗೆ ಬೇಸರವಾಗಿದೆ.”
ಕಕಾವಿಕ್ಕಿಯಾದ ರಾಣಿ ತಲೆ ಎತ್ತಿ ಪತಿಯನ್ನು ನೋಡಿದಳು; ಆತನ ಮುಖದಲ್ಲಿ
ಬೇಸರದ ಛಾಯೆಯಿರಲಿಲ್ಲ. ತುಟಿಗಳಲ್ಲಿ ತುಂಟತನದ ನಗೆಯಿತು.
ಧೈರ್ಯ ತಳೆಯುತ್ತ ಆಕೆ ಕೇಳಿದಳು:
“○3y○密」○ ?" "ನಮಗೊಬ್ಬ ವಂಶೋದ್ವಾರಕನನ್ನು ತಂದೊಪ್ಪಿಸುವ ವಿಷಯ ನೀವು ಯೋಚಿಸ গু3352.”