ಪುಟ:ಸ್ವಾಮಿ ಅಪರಂಪಾರ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೧೯೫

                                                      ನಿಜವಲ್ಲ.ಅವರು ತಲೆಬಾಗಿದರು ಎಂಬುದನ್ನು ನಾನೊಪ್ಪುತ್ತೇನೆ.ಆದರೆ   ಯಾವ ಕಾರಣ ದಿಂದ? ತಮ್ಮ ಅರಸನನ್ನು ಅವರು ಕಳೆದುಕೊಂಡಿದ್ದರು. ಬಲಗುಂದಿದರಾದುದರಿಂದ ಹಾಗೂ ತಮ್ಮನ್ನು ಮುನ್ನಡೆಸಲು ನಾಯಕನಿಲ್ಲದುದರಿಂದ,ತಮ್ಮ ಭಾವನೆಗಳೇನೇ ಇದ್ದರೂ,ಬಲಶಾಲಿಯಾದ ಎದುರಾಳಿಗೆ ಆವರು ಶರಣಾಗಬೇಕಾಯಿತು...ನಾವು ನಿರ್ವಾ ಸಿತರಾಗಿದ್ದಾಗ, ಆಂಗ್ಲರ ಗೌರವಕ್ಕಾಗಲೀ ಸಹಾನುಭೂತಿಗಾಗಲೀ ಪಾತ್ರನಲ್ಲದ ವ್ಯಕ್ತಿಯೆಂದು ನಮ್ಮನ್ನು ಚಿತ್ರಿಸಲಾಯಿತು. ಆದರೆ, ಸಂಪಾದಕರೇ, ಯಾವ ಪಾತಕವನ್ನೂ ಮಾಡದ ಮನಸ್ಸಾಕ್ಷಿಯಿಂದೊಡಗೂಡಿ ನಾವಿಲ್ಲಿ ನಿಂತಿದ್ದೇವೆ...ನಮ್ಮ ರಾಜ್ಯವನ್ನು  ನಮ್ಮಿಂದ ಕಸಿದುಕೊಳ್ಳಲಾಯಿತು. ನಮ್ಮ ಸಹಸ್ರಾರು ಪ್ರಜೆಗಳು ನಮ್ಮ ಅಸಹಾಯ ಸ್ಥಿತಿಗಾಗಿ ರೋದಿಸುತ್ತಲಿದ್ದಂತೆ, ಅವಸರ ಅವಸರವಾಗಿ ನಮ್ಮನ್ನು ರಾಜಕೈದಿಯಂತೆ ನಮ್ಮ ರಾಜ್ಯದ ಹೊರಕ್ಕೆ ಕರೆದೊಯ್ಯಲಾಯಿತು." 
 ಪಾರ್ಲಿಮೆಂಟಿನ ಕೆಲ ಸದಸ್ಯರು ಈಸ್ಟ್ ಇಂಡಿಯಾ ಕಂಪೆನಿಯ ದುರ್ವರ್ತನೆಯನ್ನು ಪ್ರಸ್ತಾಪಿಸಿದರು.
 ಛಾನ್ಸರಿ, ಇಂಗ್ಲೆಂಡಿನ ಉಚ್ಚ ನ್ಯಾಯಸ್ಥಾನದ ಒಂದು ವಿಭಾಗ. ಅಲ್ಲಿಗೆ ಚಿಕವೀರರಾಜ ದೂರುಕೊಟ್ಟ.
 [ಪದಚ್ಯುತನಾಗಿ ಇಪ್ಪತ್ತೈದು ವರ್ಷಗಳಿಗೂ ಮೇಲಾಗಿದ್ದರೂ ಮೈಸೂರಿನ ಕೃಷ್ಣರಾಜ ಒಡೆಯನ ಪರವಾಗಿ ವಕೀಲರು ಲಂಡನ್ನಿನಲ್ಲಿ ಆಗ ವಾದ ನಡೆಸಿದ್ದರು!]
 ಚಿಕವೀರರಾಜನ ದೂರಿನ ವಿಚಾರಣೆ ಇಂಗ್ಲೆಂಡಿನ ಜನತೆಯ ಗಮನವನ್ನು ಸೆಳೆಯಿತು.                                                                  ಈಸ್ಟ್ ಇಂಡಿಯಾ ಕಂಪೆನಿ ಕೊಡಗಿನ ಪದಚ್ಯುತ ರಾಜನಿಗೆ ತಾನು ಸಲ್ಲಿಸುತ್ತಿದ್ದ ವಿಶ್ರಾಂತಿವೇತನವನ್ನು ನಿಲ್ಲಿಸಿತು. ಆತ ತಕ್ಷಣವೇ ಹಿಂದೂಸ್ಥಾನಕ್ಕೆ ಹಿಂತಿರುಗಿ ಪುನಃ ಕಾಶಿ ಯಲ್ಲಿ ನೆಲೆಸಬೇಕು; ಆಗ ವೇತನ ಕೊಡಲಾಗುವುದು_ಎಂದಿತು.

ಚಿಕವೀರರಾಜ ಕಂಪೆನಿಯ ನಿರ್ದೆಶಕರ ಆಸ್ಥಾನಕ್ಕೆ ಪ್ರತಿಭಟನೆ ಸಲ್ಲಿಸಿದ: "ಇನ್ನೂ ಸ್ವಲ್ಪ ಕಾಲ ಈ ದೇಶದಲ್ಲಿ ನಾವಿದ್ದರೆ ಘನತೆವೆತ್ತ ಕಂಪೆನಿಗೆ ಯಾವ ರೀತಿ ಯಲ್ಲಿ ಅಪಾಯ ತಟ್ಟುವುದೋ ನಮಗೆ ತಿಳಿಯದಾಗಿದೆ.

 "ನಾವು ಹಿಂದೂಸ್ಥಾನಕ್ಕೆ ಈಗಲೇ ಸ್ಥಳಾಂತರ ಹೊಂದುವುದರಿಂದ ಛಾನ್ಸರಿಯಲ್ಲಿರುವ ಖಟ್ಲೆಯ ವ್ಯವಹರಣೆಗೆ ಧಕ್ಕೆಯುಂಟಾಗುವುದು.
 "ಶ್ರೀಮನ್ಮಹಾರಾಜ ದುಲೀಪಸಿಂಗರಿಗೆ ನಮ್ಮದಕ್ಕಿಂತಲೂ ನಾಲ್ವತ್ತು ಪಟ್ಟು ದೊಡ್ಡ ದಾದ ವಿಶ್ರಾಂತಿವೇತನ ಕೊಡುತ್ತಿದ್ದೀರಿ. ಅಷ್ಟನ್ನೂ ಇಂಗ್ಲೆಂಡಿನಲ್ಲೇ ವ್ಯಯ ಮಾಡಲು ಅವಕಾಶವಿತ್ತಿದ್ದೀರಿ. ಅವರ ಇಲ್ಲಿನ ವಾಸ್ತವ್ಯದ ಬಗೆಗೆ ಯಾವ ನಿರ್ಬಂಧವನ್ನೂ ಹೊರಿ ಸಿಲ್ಲ. ನಮ್ಮೊಬ್ಬರ ವಿಷಯದಲ್ಲೇ ಹೀಗೆ ಯಾಕೆ ಎಂದು ಕೇಳಬಹುದೆ?
 "ನಮ್ಮ ಪ್ರಕರಣವನ್ನು ಶಾಂತವಾಗಿ ಪರಿಶೀಲಿಸಿದ ಮೇಲೆ,ತಾವುಗಳು ಒಬ್ಬೊಬ್ಬರೂ ಎದೆಯ ಮೇಲೆ ಕೈ ಇರಿಸಿ,'ಕೊಡಗಿನ ವೃದ್ದರಾಜನ ವಿಶ್ರಾಂತಿವೇತನವನ್ನು ತಡೆಹಿಡಿಯಲು ಅನುಮೋದನೆ ಕೊಡುತ್ತೇನೆ'–'ನನಗೆಂದೂ ಯಾವ ಕೆಡುಕನ್ನೂ ಮಾಡದ ಈ ಮುದುಕ ನನ್ನು ಭಾರತಕ್ಕೆ ಹಿಂತೆರಳುವಂತೆ ಬಲಾತ್ಕರಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_'ಆತನ ಪ್ರೀತಿಯ ಮಗಳಿಂದ ಆತನನ್ನು ಬೇರ್ಪಡಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_ "ಆತನಿಗೂ ಆತನ ವಕೀಲರಿಗೂ ನಡುವೆ ಸಾಗರಗಳ ಅಂತರ ಕಲ್ಪಿಸಿ ನ್ಯಾಯವಾದುದೆಂದು