ಪುಟ:ಸ್ವಾಮಿ ಅಪರಂಪಾರ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2NE్నవి) ఆవరించొరె ,yy ಕೊಂಬು ಕಹಳೆಗಳು ರಾಜನ ಆಗಮನವನ್ನು ಸಾರಿದುವು. ಚಿಕವೀರರಾಜೇಂದ್ರ ಅಲಂಕೃತ ಸಿಂಹಾಸನವನ್ನು ಏರಿ ಕುಳಿತಂತೆ, ಎದು ನಿಂತಿದ್ದ ಸಭಾಸದರು ಕರತಾಡನ ಮಾಡುತ್ತಲಿದ್ದಂತೆ, ಉಘೇ ಉಘೇ ಎಂಬ ಜಯಘೋಷ ಧ್ವనిసి ಪ್ರತಿಧ್ವನಿಸುತ್ತಿದ್ದಂತೆ, ಆರಾಧ್ಯನೊಬ್ಬ ಸ್ವಸ್ತಿಪದವನಾರಂಭಿಸಿದ. ಆತನ ಕಂಚಿನ ಕಂಠ ಕೇಳಿಸಿದೊಡನೆಯೇ ಸಭೆ ನೀರವವಾಯಿತು. "ನಮಸ್ಸುಂಗ ಶಿರಶ್ಯುಂಬಿ ಚಂದ್ರಚಾಮರ ಚಾರವೇ ! ತ್ರೈಲೋಕ್ಕ ನಗರಾರಂಭ ಮೂಲಸ್ತಂಭಾಯ ಶಂಭವೇ ||" ಆರಾಧ್ಯ ತಲೆಯ ಮೇಲ್ಬಡೆ ಅಂಗೈಗಳನ್ನು ಜೋಡಿಸಿ ವಂದಿಸುತ್ರ ವರ್ತುಲಾಕಾರ ವಾಗಿ ತಿರುಗಿ, ಸ್ವಸ್ಥಾನದಲ್ಲಿ ಆಸೀನನಾದ. .ಸಿಂಹಾಸನದ ಮೇಲೆ ಕುಳಿತ ಚಿಕವೀರರಾಜೇಂದ್ರ ಸುತ್ತಲೂ ದೃಷ್ಟಿಯನ್ನೋಡಿಸಿದ. ಅವನ ಎಡ ಮಗುಲ ಸಾಲಿನ ಮೊದಲಲ್ಲಿ ದಿವಾನದ್ವಯರು ಕುಳಿತಿದ್ದರು. ಲಿಂಗರಾಜನ ಕಾಲದಲ್ಲಿ ರಾಜಮಂತ್ರಿಗಳಲ್ಲಿ ಒಬ್ಬನಾಗಿದ್ದು ಮುಂದೆ ಆ ಸ್ಥಾನದಲ್ಲಿರಲು ನಿರಾಕರಿಸಿದ್ದ ಚೆಪುಡೀರ ಪೊನ್ನಪ್ಪ ಅವರ ಹಿಂದೆ ತುಸು ದೂರದಲ್ಲಿದ್ದ, ಬೋಪುದಿವಾನನ ಎಡಕ್ಕೆ ಬಸವನಿದ್ದ, ಅವನ ಪಕ್ಕದಲ್ಲಿ ಅರಸನ ಆಪ್ತಕೋಟಿಯಲ್ಲೊಬ್ಬನಾದ ಅಬ್ಯಾಸ್ ಅಲಿಯಿದ್ದ. ಅವರಾಚೆಗೆ ವೈಶ್ಯ ಪ್ರಮುಖರ ಸಂದಣಿ ನೆರೆದಿತು, ಎದುರು ಮಗುಲು ಕೊಡಗು ಸೇನೆಯ ನಾಲ್ವರು ಸರ್ವಕಾರಕಾರರಿಂದ ಆರಂಭವಾಗಿತು, ಬಂಗಾರದ ಅಂಚಿನ ಕಡು గించేు ಬಣ್ಣದ ಶಿರಸಾಣವಾದ ಕೊಂಬುಟೊಪ್ಪಿಯನ್ನು ಅವರು ಧರಿಸಿದ್ದರು, ಷರಾಯಿಯ ಮೇಲಣ ಅಂಗಿಗೆ ಕುಪ್ಪಸದ ಕವಚವಿತು, ಕೆಂಪು ರೇಶ್ಯೆಯ ನಡುಕಟ್ಟನ್ನು ಬಿಗಿದಿದ್ದರು. ಆ ಕಟ್ಟಿನಿಂದ ಬೆಳ್ಳಿಯ ಸರಪಣಿಯ ಪೀಚೆಕತ್ತಿ ತೂಗಾಡುತ್ತಿತು, ಅಧಿಕಾರಲಾಂಛನದ ಖಡ್ಗಗಳು ಇನ್ನೊಂದು ಪಾರ್ಶ್ವದಿಂದ ನೆಲವನ್ನು ಸೋಂಕುತ್ತಿದುವು. ಅವರ ಬಲಕ್ಕೆ ಹಲವಾರು ಕಾರಕಾರರಿದ್ದರು: ಕೊಡಗರು, ಶಿವಾಚಾರದವರು, ಬಯಲು ಸೀಮೆಯಿಂದ ಬಂದು ಅರಸನ ದಂಡಿನಲ್ಲಿ ಉದ್ಯೋಗಿಗಳಾದ ಗೌಡರು ಹಾಗೂ ಇಬ್ಬರು ಮಾಪಿಳ್ಳೆಯರು. అవారా &ంంది స్పెలాగి జప్పాలదారాయణ జపాటeదారారా &ుందో నJణర్చారు జనా జావాడి ಕಾರರೂ ನಿಂತಿದ್ದರು. ಈ ಸೇನಾ ವಿಭಾಗದ ಬಲ ಪಾರ್ಶ್ವ, ನಾಡ ಪ್ರಮುಖರಾದ ತಕ್ಕರಿಂದ-ಕೊಡವರಿಂದ-ತುಂಬಿತು. ಈ ಎರಡೂ ಸಾಲುಗಳ ಕೊನೆಯಿಂದ ಮಹಾದ್ವಾರದವರೆಗೆ ಒಳಬರಲು ಶಕ್ತರಾಗಿದ್ದ ರಾಜಧಾನಿಯ ಪ್ರಜೆಗಳೂ ಅವರನ್ನು ಬಳಸಿ ಪಡಿವಳರೂ ದಟ್ಟವಾಗಿ ನಿಂತಿದ್ದರು. ಮಹಾದ್ವಾರದ ಹೊರಗೆ ಅಪಾರ ಜನಸಂದಣಿ ಯಿತು, ನೆರೆದ ಪ್ರಮುಖರಲ್ಲಿ ಹೆಚ್ಚಿನವರನ್ನು ಮುಖಪರಿಚಯದಿಂದ ಅರಸ ಬಲ್ಲ. ಪಟಾಭಿಷೇಕದ ಸಮಯದಲ್ಲಿ ಮುಜುರೆಯೊಪ್ಪಿಸಿದಾಗ ಅವರನ್ನೆಲ್ಲ ಆತ ಕಂಡಿದ್ದ 彝 ಎಲ್ಲರ ದೃಷ್ಟಿಯೂ ಅರಸನ ಮೇಲೆ ನೆಟ್ಟಿತು, ಯಾವುದೋ ಮಹತ್ವದ ಕಾರಣ ಕಾಗಿ ಈ ರಾಜಸಭೆಯನ್ನು ಕರೆದಿರಬೇಕು ಎಂದು ತರ್ಕಿಸಿದ್ದರು ಕೆಲವರು. ರಾಜ್ಯದ ವಿವಿಧ ಭಾಗಗಳ ಮುಖ್ಯಸ್ಥ రేJణడాసా నిశ3 సంబేశF యేJపందాలు బయసి విలేలవా ದರಬಾರನ್ನು ಅರಸ ನಡೆಸಿದ್ದಾನೆ, ಎಂದು ಊಹಿಸಿದ್ದರು ಬೇರೆ ಕೆಲವರು. ಲಿಂಗರಾಜನ ದಕ್ಷತೆ ದರ್ಪಗಳ ಅರಿವಿದ್ದ, ಆತನ ಆಡಳಿತವನ್ನು ಮೆಚ್ಚಿಕೊಂಡಿದ್ದ ಪ್ರಜಾಕೋಟಿ.ಆ ಅರಸನ ಪುತ್ರನಲ್ಲನೂ ಅವೇ ಗುಣಗಳನ್ನು ಕಾಣಲು ಉತ್ಸುಕವಾಗಿತು.