ಪುಟ:ಸ್ವಾಮಿ ಅಪರಂಪಾರ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3.9 ಸ್ವಾಮಿ ಅಪರ೦ಪಾರ ರಾಜನ ಸಂಜ್ಞೆಯಂತೆ ಬೋಪಣ್ಣ ಸಿಂಹಾಸನದ ಬಳಿಗೆ ಸಾಗಿದ ತಗ್ಗಿದ ದನಿಯಲ್ಲಿ ಆತನೇನನ್ನೊ ನುಡಿದಂತೆ ಕಂಡಿತು. ಸಮ್ಮತಿಸೂಚಕವಾಗಿ ಬೋಪಣ್ಣ ತಲೆಯಾಡಿಸಿ ದಂತೆಯನೂ ತೋರಿತು. ಬೋಪಣ್ಣ ಸ್ವಸ್ಥಾನಕ್ಕೆ ಮರಳಿ ಅಲ್ಲಿ ನಿಂತ. ಅವನ ಅಂಗೈಗಳೆರಡೂ ಒಂದನ್ನೊಂದು ಆತುವು ಮಧ್ಯವಯಸ್ಸಿಗೆ ಅದೇ ಆಗ ಪದಾರ್ಪಣಮಾಡುತ್ತಲಿದ್ದ ಆತನ ನಿಲುವು ಭವ್ಯ ವಾಗಿತು. ಮಾತನಾಡುವುದಕ್ಕೆ ಪೂರ್ವಭಾವಿಯಾಗಿ ಅವನ ದೃಷ್ಟಿ ಸಭೆಯನ್ನೊಮ್ಮೆ ಈಕ್ಷಿಸಿತು. ಮಹಾದ್ವಾರದ ಬಳಿ ಇನ್ನೂ ಗುಸುಗುಸು ಮಾತು ನಡೆದಿತು, ಚಾವಡಿಕಾರರು ಕೆಲವರು, "ಶ್ ! ಸದು—ಸದು!" ಎಂದು ಗದರಿದರು. ಸಾಸಿವೆಕಾಳು ಬಿದ್ದರೂ ಸಪ್ಪಳವಾಗುವಂಥ ನೀರವತೆ ನೆಲೆಸಿತು. ಬೋಪಣ್ಣ ನಿಂತಲ್ಲಿಂದ ತಲೆಯನ್ನು ತುಸು ಬಾಗಿಸಿ ಅರಸನಿಗೆ ನಮಿಸಿದ, ಸಭಿಕರನ್ನು ಉದ್ದೇಶಿಸಿ ಮಾತು ಆರಂಭಿಸಿದ: "ಕೊಡಗಿನ ಹತು ಸಮಸ್ತರೇ, ಮಹಾಸಾಮಿಯವರ ಆದೇಶದಂತೆ ನಾನು ಈಗ ಮಾತನಾಡತಾ ಇದ್ದೇನೆ. ಎಡೆನಾಡು, ಗಡಿನಾಡು, ಏಳುಸಾವಿರ ಸೀಮೆ, ಉಮ್ಮತ್ತ ನಾಡು, ತಾವುನಾಡು, ನಾಲುನಾಡು, ಬೈಂಗುನಾಡು, ಬೆಪ್ಪನಾಡು, ಕಿಗ್ಗತ್ತನಾಡು ಮುಂತಾದ ಮೂವತ್ತೈದು ನಾಡುಗಳ ತಕ್ಕರು ಇಲ್ಲಿ ನೆರೆದಿದ್ದೀರಿ. ನಮ್ಮ ಸೈನ್ಯದ ಸರ್ವಕಾರಕಾರರು, ಕಾಠ್ಯಕಾರರು, ವರ್ತಕ ಪ್ರಮುಖರು ಇಲ್ಲಿ ಕೂಡಿದ್ದೀರಿ. ಇದರಿಂದ ಮಹಾಸಾಮಿಯವರಿಗೆ ಸಂತೋಷವಾಗಿದೆ, ನನಗೂ ಸಂತೋಷವಾಗಿದೆ. ಆಳಿದ ಮಹಾ ಸ್ವಾಮಿ ಲಿಂಗರಾಜ ಒಡೆಯರು ಕಾಲವಾದ ಮೇಲೆ ನಮ್ಮ ರಾಜ್ಯ ಚುಕಾಣಿ ಇಲ್ಲದ ಹಡಗಾಗ್ರದೆ ಅಂತ ಭಾವಿಸಿದವರಿದ್ದರು. ಅವರ ಸುಪುತ್ರರಾದ ಚಿಕವೀರರಾಜೇಂದ್ರ ಒಡೆಯರ್ ಬಹದ್ದೂರರು ಪಟ್ಟವೇರಿ, ಪ್ರಜೆಗಳು ನಿರ್ಭಯವಾಗಿರಬಹುದು ಅಂತಲೂ ರಾಜ್ಯದಲ್ಲಿ ಶಾಂತಿ ಸುಭಿಕ್ಷ ನೆಲೆಸ್ತದೆ ಅಂತಲೂ ನಂಬಿಕೆ ಹುಟ್ಟಿಸಿದ್ದಾರೆ. ಮೊನ್ನೆ ಪಟಾಭಿ ಷೇಕವಾದಾಗ ಸನ್ನಿಧಾನದಲ್ಲಿ ತಾವೆಲ್ಲ ನಿಷ್ಟೆಯನ್ನು ಪ್ರಕಟಿಸಿದ್ದೀರಿ. ಇದೇ ರೀತಿಯ ರಾಜಭಕ್ತಿ ಮುಂದೆಯೂ ಇರತದೆ ಅನ್ನೋದರಲ್ಲಿ ಸಂಶಯವಿಲ್ಲ, ಹೆಚ್ಚಿಗೆ ಹೇಳೋ ದಾದರೂ ಏನುಂಟು ? ಅಂಥದೇನಿದ್ದರೂ ಮಹಾಸ್ವಾಮಿಗಳೇ ಅಪ್ಪಣೆಕೊಡಿಸಬೇಕೂಂತ ತಮ್ಮ ಪರವಾಗಿ ನಾನು ಅರಿಕೆಮಾಡಿಕೊಳ್ಳುತಾ ಇದೇನೆ." ಸಭೆ ಕರತಾಡನ ಮಾಡಿತು, ಜಯಘೋಷ ಕೇಳಿಸಿತು ; "ಕೊಡಗು ಸಿಂಹಾಸನಾಧೀಶ್ವರ ಚಿಕವೀರರಾಜೇಂದ್ರ ಉಘೇ, ಉಘೇ!" ಪ್ರಜಾ ಪ್ರಮುಖರ ಮುಂದೆ ತಾನು ಆಡಬೇಕಾದ ಮಾತುಗಳ ಬಗೆಗೆ ಬಹಳ ದಿನ ಗಳಿಂದ ಚಿಕವೀರರಾಜ ಯೋಚಿಸಿದ್ದ, ಮನಸ್ಸಿನಲ್ಲೇ ಅದೆಷ್ಟೋ ಬಾರಿ ಅಂಥ ಮಾತು ಗಳನ್ನು ಆತ ಆಡಿಯನೂ ಇದ್ದ, ಆದರೆ ಈಗ, ದಿವಾವ ತನ್ನ ಸ್ಥಾನದಲ್ಲಿ ಕುಳಿತಾಗ, ಸಭಿಕರ ಕರತಾಡನ ಜಯಘೋಷಗಳ ಭೋರ್ಗರೆತದ ಮುಂದೆ, ತನ್ನ ಎಲ್ಲ ವಿಚಾರಗಳೂ ತೇಲಿಹೋದಂತೆ ಅವನಿಗೆ ಅನಿಸಿತು. ಏನೂ ತೋಚುತ್ತಿಲ್ಲವಲ್ಲ-ಎಂದುಕೊಂಡ ಆತ. ಎಷ್ಟು ನಿಶ್ಯಬ್ದ ' ಸಹಸ್ರ ಕಣ್ಣಗಳು ತನ್ನನ್ನೆ ದಿಟ್ಟಿಸುತ್ತಿರುವುವಲ್ಲ! ತನ್ನ ಮಾತುಗಳ ನಿರೀಕ್ಷೆಯಲ್ಲೇ ಇವರು ಕುಳಿತಿರುವರಲ್ಲ! ಎಂದು ಚಿಕವೀರರಾಜ ಕಕಾವಿಕ್ಕಿಯಾದ, ನಿಟುಸಿ