ಪುಟ:ಸ್ವಾಮಿ ಅಪರಂಪಾರ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾಮಿ ఆ:రం రారా به وم ತ್ತಿದ್ದ ಹಾಗೆ ನಾವಾದರೂ ಪರಿಹಾರ ಕೊಡುತ್ತೇವೆ. ಅಲ್ಲದೆ, ಅವರ ಕಾಲದ ಧರ್ಮ ಕಾರ್ಯಗಳೆಲ್ಲ ಯಾವ ಚುತಿಯೂ ಇಲ್ಲದೆ ಮುಂದೆಯೂ ನಡೀತವೆ. [ಸಭಿಕರಿಗೆ ಇದರಿಂದ ಸಂತೋಷ: ಅದಕ್ಕಾಗಿ ಜಯಕಾರ.] "ನಾಡುಗಳ ಶಾಂತಿ ಸಮೃದ್ಧಿ ತಕ್ಕರಿಗೆ ಸೇರಿದೆ. [ತಕ್ಕರು ಗೋಣಾಡಿಸುತ್ತಿದ್ದಾರೆ.] "ಗಡಿ ಬಂದೋಬಸ್ಸು ಕಾರಕಾರರ ಜವಾಬುದಾರಿಯಾಗಿದೆ. [ಕಾರಕಾರರು, ಹೌದು-ಹೌದು ಎಂದು ತಲೆ ಆಡಿಸುತ್ತಿದ್ದಾರೆ.] "ನಮ್ಮ ರಾಜ್ಯದ ಗಡಿಯಲ್ಲೆಲ್ಲ ನಿಶಾನಿ ಕಲ್ಲುಗಳನ್ನು ನಾವು ನೆಡಿಸುತ್ತೇವೆ, ಕೊಡಗು ಭದ್ರ ಮುಚ್ಚಳದ ಪೆಟ್ಟಿಗೆಯ ಹಾಗಿರಬೇಕು. ಹೊರಗಿನ ಮಂದಿ ಬಂದು ಛದಿ ಸಂಧಾನ ವನ್ನೋ ಫಿತೂರಿಯನ್ನೋ ನಡೆಸೋದಕ್ಕೆ ಇನ್ನು ಯಾವ ಅವಕಾಶವೂ ಇರುವುದಿಲ್ಲ. ವೈರಿಗಳು ದಂಡೆತ್ತಿ ಬಂದದ್ದೇ ಆದರೆ ನಾವು ಶೂರರಂತೆ ಹೋರಾಡತೇವೆ. [Rnుఫ్వా ! లుఫోల !] "ಕೊಡವರಲ್ಲಿರುವ ಒಂದು ಗಾದೆಯುಂಟಲ್ಲ, ಆಣ್ ಪೊತ್ತಿತ್ ಚಾವಂಡು. ["ವಾ!ವಾ!"] "ಯುದ್ಧದಲ್ಲಿ ಸಾಯುವುದು ಗಂಡಸಾದವನಿಗೆ ತಕ್ಕಂಥಾದು, [ಸಾವು ಎಂದೆನೆ? ಇಲ್ಲಿ ಅದರ ಪ್ರಸ್ತಾಪ ಮಾಡಿಬಿಡಬೇಕು. ಧ್ವನಿಯಲ್ಲಿ ವ್ಯಥೆ ತೋರಿಸಬೇಕು.] - “ಈ ಸಂದರ್ಭದಲ್ಲಿ ಒಂದು ದುಃಖದ ಸಂಗತಿ ನಾವು ತಿಳಿಸಬೇಕಾಗಿದೆ. ನಮ್ಮ ದೊಡ್ಡ ತಂದೆ ಕೈಲಾಸವಾಸಿ ಅಪಾಜಿ ಅರಸರ ಇಬ್ಬರು ಮಕ್ಕಳು ಮಾರಿಬೇನೆ ಬಡಿದು తిరిజేనిండాప్చై. ["ಹಾ ! ನಮೂರಾರು ಕಂಠಗಳಿಂದ ಏಕಕಾಲದ ಶೋಕಧခွံ့ပဲ- ನಂಬದವರೂ ಇರ ಬಹುದು. ಯೋಚಿಸುವುದಕ್ಕೆ ಅವರಿಗೆ ಎಡೆಯನ್ನೇ ಕೊಡಬಾರದು. ಮತ್ತಷ್ಟು ಧ್ವನಿ ಏರಿಸಬೇಕು.} - "ಈ ಸಂಕಟವನ್ನೂ ನಾವು ಸಹಿಸುತ್ತೇವೆ. ಚಿಕ್ಕ ವಯಸ್ನಲ್ಲೆ ತಂದೆಯನ್ನೂ ಹೆತ್ತ ತಾಯಿಯನ್ನೂ ನಾವು ಕಳಕೊಂಡೆವು. ದೊಡ್ಡ ಹೊರೆಯನ್ನು ನಮ್ಮ ತಲೆಯ ಮೇಲಿಟ್ಟ ಅವರು ಶಿವಾಧೀನರಾಗಿದ್ದಾರೆ. ಆದರೆ ನಮ್ಮ ಪ್ರಜೆಗಳ ಪ್ರೀತಿ ವಿಶ್ವಾಸ ನಿಷ್ಟೆ ಆ ಹೊರೆ ಯನ್ನು ಹೂವಿಗಿಂತಲೂ ಹಗುರ ಮಾಡತದೆ ಅಂತ ನಾವು ನಂಬಿದೇವೆ. ಕಡೆಯದಾಗಿ, ನಮ್ಮ ಪ್ರಜೆಗಳಿಗೆ ನಾವು ಹೇಳತೇವೆ: ನಿರ್ಭಯದಿಂದ ನಿಮ್ಮ ಮನೆಯಲ್ಲಿ ಒಕ್ಕಲಾಗಿ ಬಾಳುತಾ ಇರಿ. ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ನಾವು ಸಿಂಹವಾಗಿ ನಿಮ್ಮನ್ನು ಕಾಪಾಡು శ్రీశ్రాపా." [ಮುಗಿದೇ ಹೋಯಿತಲ್ಲ! ದೀರ್ಘ ಕರತಾಡನ, ಜಯಕಾರ.] ಚಿಕವೀರರಾಜ ತನ್ನ ಬಗೆಗೆ ತಾನು ಸಂತುಷ್ಟನಾದ. ಸಿಂಹಾಸನದ ಕೈಗಳನ್ನು ಹಿಡಿದಿದ್ದ ಅವನ ಅಂಗೈಗಳೀಗ ಸಡಿಲಗೊಂಡುವು: ಮಿಸುಕಿದುವು, ಚಾಮರಗಳು ಬೀಸಿ ತರುತ್ತಿದ್ದ గాళి &ంēరావానిగి లేండిలేు. ಅರಸನ ಮಾತುಗಳನ್ನು ಅತ್ಯಂತ ಎಚ್ಚರದಿಂದ ಕೇಳಿದ ಬೋಪಣ್ಣ ವಿಸ್ಮಿತನಾಗಿದ್ದ.