ಪುಟ:ಸ್ವಾಮಿ ಅಪರಂಪಾರ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪

ಸ್ವಾಮಿ ಅಪರಂಪಾರ

"ಹಂಗೆಲ್ಲ ಮಾತಾಡ್ಬಾರದು ಸೋಮಿಯೋರು."
"ನಂಜುಂಡ ಶಿವಪಾದ ಸೇರಿದ, ಅಲ್ಲವಾ ?”
"ಎಲ್ಲಾ ಅವನ ಚಿತ್ತ. ನಮ್ಮ ಕೈಯಾಗೇನೈತೆ?"
"ನೀವು–ನೀವು ಯಾರು ?"
"ನೀವು ಅನಬೇಡಿ, ಒಡೆಯ. ನಾನು ಮಲ್ಲಪ್ಪ-ಜಮ್ಮ ಕೊಡವ."
"ಹೂಂ...ಎಲ್ಲಿಯ ಒಡೆಯ? ಎಲ್ಲಿಯ ಸೇವಕ ? ಯಾವ ಜನ್ಮದ...ಋಣಾನು
ಬಂಧವೊ ಇದು ?"
ವೀರಪ್ಪನ ಕಣ್ಣುಗಳಿಂದ ಕಂಬನಿ ಸುರಿಯಿತು; ಎರಡೂ ಬದಿಗಳಲ್ಲಿ ಹರಿದು ಕಿವಿ
ಗಳನ್ನು ತೋಯಿಸಿತು. ಮಲ್ಲಪ್ಪ ತನ್ನ ಉತ್ತರೀಯದಿಂದ ಕಣ್ಣೀರನ್ನು ಒರೆಸಿದ.
"ಸೋಮಿಯೋರು ಅಳಬಾರದು, ಜೀವಕ್ಕೆ ತಾಸ ಆಗತದೆ..."
ತನ್ನ ಕಣ್ಣಗಳೂ ಹನಿಗೂಡಿದುದನ್ನು ಮಾತ್ರ ಮಲ್ಲಪ್ಪ ಗಮನಿಸಲಿಲ್ಲ.
ವೀರಪ್ಪ ಅಳು ನಿಲ್ಲಿಸಿದ. ಆದರೆ ಆಹಾರ ಸೇವಿಸಲೊಪ್ಪಲಿಲ್ಲ. ಒಂದಿಷ್ಟ ದ್ರವ
ಆಹಾರವಾದರೂ ಹೊಟ್ಟೆಯನ್ನು ಸೇರದಿದ್ದರೆ, ಆ ದೇಹಕ್ಕೆ ತಾಣಬರುವ ಬಗೆ ಹೇಗೆ?
ಮಲ್ಲಪ್ಪನೂ ಅಕ್ಕವ್ವನೂ ಪರಿಪರಿಯಾಗಿ ಕೇಳಿಕೊಂಡರು. ಆತ ನೀಡಿದುದೊಂದೇ
ಉತ್ತರವನ್ನು:
"ನನಗೇನೂ ಬೇಡ.. ನಾನು ಶಿವಪಾದ ಸೇರಬೇಕು."
ರಾಜಛಲ, ಇದೊಳ್ಳೆಯ ಆಪತು ಬಂತೆಂದು ಮಲ್ಲಪ್ಪ ದಂಪತಿ ಕಳವಳಗೊಂಡರು.
ಕಡೆಯಲ್ಲಿ ಕಣ್ಣಲ್ಲಿ ನೀರು ತಂದುಕೊಂಡು ಅಕ್ಕವ್ವ ಅಂದಳು :
"ಹಂಗಾರೆ ನಾವೂ ಅನ್ನ ನೀರು ಬಿಡತೀವು."
"ಅದೇ ಸರಿ" ಎಂದ ಮಲ್ಲಪ್ಪ.
ಗೋಡೆಗೊರಗಿ ಕುಳಿತ ಮಲ್ಲಪ್ಪ ಅಕ್ಕವ್ವರನ್ನು ವೀರಪ್ಪ ಒಂದೇ ಸಮನೆ ದಿಟ್ಟಿಸಿದ.
ಇವರನ್ನು ಸಂಕಟಕ್ಕೆ ಗುರಿಮಾಡಲು ಯಾವ ಅಧಿಕಾರ ತನಗೆ ?
ವೀರಪ್ಪ ತನ್ನ ನಿರ್ಧಾರವನ್ನು ಬಿಟ್ಟುಕೊಟ್ಟ.
ಸಂಜೆಯ ವೇಳೆಗೆ, ತಾನು ಬದುಕಿ ಉಳಿದ ಬಗೆಯನ್ನು ತಿಳಿಯುವ ಕುತೂಹಲ
ವೀರಪ್ಪನಿಗೆ ಉಂಟಾಯಿತು.
"ನಂಜುಂಡ ಸತ್ತಾಗ ನನಗೆ ಪ್ರಜ್ಞೆ ಇರಲಿಲಾಂತ ಕಾಣತದೆ."
"ಹ್ಞ, ಸೋಮಿಯೋರೆ."
"ರಾತ್ರೆ ಹೊತ್ತು."
"ಹ್ಞ, ಇಬ್ಬರನ್ನೂ ಮಹಾದೇವ ಕರಕೊಂಡ ಅಂತ ಕಾಡಿಗೆ ಸಾಗಿಸಿದ್ರು.”
"ಅಲ್ಲಿ ನೀನು ನನ್ನ ಕಂಡೆಯಾ ?"
"ಇಲ್ಲ, ಕಾಡಿಗೆ ಕೊಂಡುಹೋದವರಲ್ಲಿ ಒಬ್ಬ ನನ್ನ ಬಂಧು, ಶಂಕರಪ್ಪ ಅಂತ. ಚಾವಡಿ
ಕಾರ. ಅವ ನಿಮ್ಮನ್ನ ಇಲ್ಲಿಗೆ ತಂದು ಬಿಟ್ಟ."
ಕಾಡುಮೃಗಗಳಿಗೆ ತುತಾಗುವುದು ತಪ್ಪಿತು.
ಆಯುಸ್ಸು ಮುಗಿದಿರಲಿಲ್ಲವೇನೊ ಪಾಪಿಯಾದ ತನಗೆ...ತಲೆದಂಡ ತೆರಬೇಕಾದ
ಸಂಭವವಿದ್ದರೂ ಈ ಸಾಮಾನ್ಯ ಜನ ತನ್ನ ನೆರವಿಗೆ ಬಂದರಲ್ಲ?