ಪುಟ:ಸ್ವಾಮಿ ಅಪರಂಪಾರ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೩೫

ಅಷ್ಟು ಸ್ವಲ್ಪ ಸಂಭಾಷಣೆಯೂ ವೀರಪ್ಪನಿಗೆ ಆಯಾಸವನ್ನುಂಟುಮಾಡಿತು.ಆತ
ನಿದ್ದೆಗೆ ಶರಣುಹೋದ.

"ಅಕಟಕಟ! ಶಿವ ನಿನಗಿನಿತು ಕರುಣವಿಲ್ಲ, ಅಕಟಕಟ! ಶಿವ ನಿನಗಿನಿತು ಕೃಪೆಯಿಲ್ಲ.
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕ ದೂರನ? ಏಕೆ ಹುಟ್ಟಿಸಿದೆ?”
---ನರಳಾಟದ ಹಿನ್ನೆಲೆಯಲ್ಲೆ ಬಿಡಿ ಬಿಡಿಯಾಗಿ ಬರುತ್ತಲಿದ್ದ ಪದಗಳು.
ನಿದ್ದೆಯ ಪರದೆ ಹರಿಯತೊಡಗಿದಾಗ, ತನ್ನ ಪತ್ನಿ ಹಾಡುತ್ತಿರಬೇಕು---ಎಂದು
ಕೊಂಡ ಮಲ್ಲಪ್ಪ. ತಕ್ಷಣವೆ, ಅಲ್ಲ--ಕ್ಷೀಣವಾಗಿದ್ದರೂ ಇದು ಗಂಡಸಿನ ಗಂಟಲು ಎನ್ನಿ
ಸಿತು. ಆತ ಕಂಬಳಿಯನ್ನು ಸರಿಸಿ ಎದು ಕುಳಿತು ಕಣ್ಣು ಹೊಸಕಿಕೊಂಡ.
ವಚನದ ಧ್ವನಿ ಬರುತ್ತಲಿದ್ದುದು ತನ್ನ ಕೊಠಡಿಯಿಂದಲೇ. ನುಡಿಯುತ್ತಿದ್ದವನು
ವೀರಪ್ಪ.
ಒಳಗಿನ ಅಳಲೆಲ್ಲ ಬಿಸಿಯುಸಿರಿನೊಡನೆ ತುಣುಕು ತುಣುಕಾಗಿ ಹೊರಬೀಳುತ್ತಿತ್ತು.
"ಎಚ್ಚರವಾಯ್ತಾ ಮಲ್ಲಪ್ಪ ?"
"ಹೂಂ, ಸೋಮಿಯೋರೆ."
ಏಳಲೆತ್ನಿಸಿದ ವೀರಪ್ಪ ಶಕ್ತಿ ಸಾಲದೆ, ದಿಂಬನ್ನು ಗೋಡೆಗೆ ಸರಿಸಿ, ಒರಗಿಕುಳಿತಿದ್ದ.
ಅದನ್ನು ಕಂಡು ಮಲ್ಲಪ್ಪನೆಂದ:
"ಇನ್ನೆರಡು ದಿವಸ ಸೋಮಿಯೋರು ಶ್ರಮಪಡಬಾರದು. ಜೀವ ಹಣ್ಣಾಗದೆ.”
"ಹ್ಞ. ಮಲ್ಲಪ್ಪ ಹಣ್ಣಾಗದೆ; ಹೀಚುಗಾಯಿಯೇ ಹಣಾಗಿದೆ. ಆದರೆ ಉದುರ
ಲೊಲ್ಲದು, ಉದುರಲೊಲ್ಲದು."
"ಸೋಮಿಯೋರು ಸಂತೋಸ್ವಾಗಿರಬೇಕು."
"ಯಾಕಾಗಿ ಸಂತೋಷ, ಮಲ್ಲಪ್ಪ ? ಭೂಮಿಯ ಮೇಲಿನ ನನಾಟ ಇನ್ನೂ ಮುಗೀ
ವಲ್ಲದು ಎಂದೆ ?"
"......"
"ಒರಗಿ ಕೂತಿದ್ದೆ, ಎಳಮೆಯಲ್ಲಿ ಅಯ್ಯನವರು ಹೇಳಿಕೊಟ್ಟಿದ್ದ ವಚನಗಳು
ನೆನಪಾದುವು. ಅನ್ನುತ್ತಾ ಇದ್ದೆ. ಇದರಿಂದಲೇ ಜೀವದ ಸಂಕಟ ಶಮನವಾಗಬೇಕು,
ಮಲ್ಲಪ್ಪ."
"ನಾನು ಪಾಮರ, ಸೋಮಿಯೋರೆ, ನನಗೆ ಇದೇನು ಅರ್ಥವಾಗತದೆ ?"
"ಅರಿದೆವು, ಅರಿದೆವು---ಎಂಬಿರಿ. ಅರಿದ ಪರಿ ಎಂತು ಹೇಳಿರೆ? ಅರಿದವರು ಅರಿದೆ
ವೆಂಬರೆ ?---ಇದೂ ಒಂದು ವಚನ, ಮಲ್ಲಪ್ಪ. ಮಹಾದೇವನ ಮಹಿಮೆಯನ್ನು ಪೂರ್ತಿ
ಯಾಗಿ ತಿಳಿದ ಮಾನವರುಂಟೆ ?"
ಮಲ್ಲಪ್ಪ ಎದ್ದು ನಿಂತ. ಯೋಚಿಸುವುದಕ್ಕೆ ಮುನ್ನವೇ ಆತ ಬಾಗಿ ವೀರಪ್ಪನಿಗೆ
ನಮಸ್ಕರಿಸಿದ.
"ಯಾಕೆ ? ಯಾಕೆ ?"
"ನಾನು ಚಾಕರ. ಒಡೆಯರ ಅಡಿಮುಟ್ಟೋದು ನನ್ನ ಧರ್ಮ."