ಪುಟ:ಸ್ವಾಮಿ ಅಪರಂಪಾರ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

శి& ಸಾಮಿ ಅಪರಂ ಪಾ ರ "ಒಡೆಯ-ಚಾಕರ, ಅದೇ ಮಾತು, ಮತ್ತೆ, ನಾವಿಬ್ಬರೂ ಮೇಲಿರುವ ಶಿವನ ಅಡಿ ಮುಟ್ಟಬೇಕು ಕಂಡೆಯಾ, ಮಲ್ಲಪ್ಪ ?" - ಅಕ್ಕವ್ವ, ಈ ಮಾತುಕತೆಗೆ ಕಿವಿಗೊಡುತ್ತ ಹೊರಗೆ ನಿಂತಿದ್ದಳು. ಮುಂಜಾವದಲ್ಲಿ ತಾನೆದ್ದ ಸ್ವಲ್ಪ ಹೊತ್ತಿನಿಂದ ವೀರಪ್ಪ ನುಡಿಯುತ್ತಿದ್ದ ವಚನಗಳನ್ನು ಆಕೆ ಆಲಿಸಿದ್ದಳು. ದೊರೆಮಗನ ವರ್ತನೆ ಅವಳಿಗೆ ವಿಚಿತ್ರವೆನಿಸಿತು. ಅವಳು ಮೆಲ್ಲನೆ ಅಂದಳು : “స్వింు శాందిది. 35లా ?” చిలరాజ్చెనేందా : "ಬಚ್ಚಲತನಕ ಹೋಗುವ ಆಸೆ, ಸ್ವಲ್ಪ ಕೈ ಹಿಡಿಯಬೇಕಲ್ಲ, ಮಲ್ಲಪ್ಪ." “ఎత్తి రేణoడాు యేూళిగక్విని, సిణ్వచిుయJణలరే." "ಬೇಡ, ಭುಜದ ಆಸರೆ ಕೊಟ್ಟರಾಯಿತು." ವೀರಪ್ಪ ನಾಲ್ಕು ಹೆಜ್ಜೆಗಳನ್ನಿಡಲು ಮಲ್ಲಪ್ಪನೊಬ್ಬನದೇ ಅಲ್ಲ, ಅಕ್ಕವ್ವನ ಸಹಾ ಯವೂ ಬೇಕಾಯಿತು. ಬಾಧೆ ಕಳೆದು, ಮುಖ ತೊಳೆಸಿಕೊಂಡು, ಮೈಗಿಷ್ಟು ನೀರನ್ನೂ ಹನಿಯಿಸಿ ವೀರಪ್ಪ ಕೊಠಡಿಗೆ ಮರಳಿದ. ಅಕ್ಕವ್ವನನ್ನು ಕುರಿತು ಅವನೆಂದ: "ಅವಾ, ನನ್ನ ಪಾಲಿಗೆ ತಾಯಿಯಾಗಿ ನೀನು ಬಂದೆ. ಭೂಮಿಗೆ ಭಾರವಾದವನು ನಿನಗೆ ಹೊರೆಯಾಗಲಿಲ್ಲ, ಅಲ್ಲವಾ ?" - ಕಂಠ ಬಿಗಿದಂತಾಗಿ ಪ್ರತಿ ಮಾತೇನನ್ನೂ ಅಕ್ಕವ್ವ ಹೇಳದೇ ಹೋದಳು... ಅಂದು ಮಲ್ಲಪ್ಪ ಆಳುಗಳೊಡನೆ ತಾನೂ ತೋಟದ ಕೆಲಸಕ್ಕೆ ಹೋದ. ಹುಡುಗರೋ ಆಳುಗಳೋ ಯಾರೋ ನುಡಿದು, ಮಲ್ಲಪ್ಪನ ಮನೆಗೆ ನೆಂಟರು ಬಂದಿರುವರೆಂಬ ಸುದ್ದಿ ಹಬ್ಬಿತು, ಸಂಧಿಸಿದ ಒಬ್ಬಿಬ್ಬರು.ಕೇಳಿಯೂ ಕೇಳಿದರು : "ಯಾರು ಬಂದವರೇ, ಮಲ್ಲಪ್ಪ ?". "ಮೈಸೂರು ಸೀಮೆಯೋನು.. ದೂರದ ಸಂಬಂಧ." “ಮೈ ಉಸಾರಾಗಿಲ್ವಂತೆ?" “ಜರ ಕಣಪ್ಪ." 'ಅವುಸದಿ ಪಂಡಿತರು ಕೊಡತವರಾ ?" “ಜರಕ್ಕೆಲ್ಲ ಏನವಸದಿ? ಯಾಡು ದಿನ ಇದು ಹೋತದೆ." .ಮುಚ್ಚಂಜೆಯ ವೇಳೆಗೆ ವೀರಪ್ಪನಿದ್ದ ಕೊಠಡಿಯಿಂದ ಮತ್ತೆ ಧ್ವನಿ ಕೇಳಿಸಿತು : "ಅತ್ತಲಿತ್ರ ಹೋಗದಂತೆ ಹೆಳವನ ಮಾಡಯ್ಯ ತಂದೆ! ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ! ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ!" ಅಕ್ಕವ್ವ ದೀಪ ಹಚ್ಚಿ, ಭಯಭಕ್ತಿಯಿಂದ ಅದನ್ನು ತಂದು, ಕೊಠಡಿಯಲ್ಲಿರಿಸಿದಳು. ವೀರಪ್ಪ ಕೇಳಿದ: "ದೀಪ ತಂದಿಟ್ಟರೆ ಮನಸ್ಸನ್ನು ಕವಿದ ಕತ್ತಲೆ ಹೋದಾತಾ ತಾಯಿ?" "ಬೈಗಾಯು, ಅದಕ್ಕೆ ತಂದೆ" ಎಂದಳು ಅಕ್ಕವ್ವ. “నిజ, నిజ.”