ಪುಟ:ಸ್ವಾಮಿ ಅಪರಂಪಾರ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ “ನಾನು ಎಚ್ಚರಾಗಿದೀನಿ ತಾಯಿ. ಹೇಳಿ ಹೋಗೋಣಾಂತ ಕಾದಿದ್ದೆ, ಇನ್ನು ಹೊರಡ ತೀನಿ. ಮಲ್ಲಪ್ಪಣ್ಣನ್ನ ಎಬ್ಬಿಸೋದು ಬಾಡ." "ಚೆನಾಯು!" ಎಂದಳು ಅಕ್ಕವ್ವ. "ಹಿರಿಯಾ, ಹಿರಿಯಾ!" ಎಂದು ಧ್ವನಿ ಏರಿಸಿ ಗಂಡನನ್ನು ಆಕೆ ಕರೆದಳು. ವೀರಪ್ಪ ನಿರುಪಾಯನಾಗಿ ತಾನೇ ಮಲ್ಲಪ್ಪನ ಮೈಮುಟ್ಟಿ ಸೋದರ ವಾತ್ಸಲ್ಯದಿಂದ ಕರೆದ: "ಮಲ್ಲಪ್ಪಣ್ಣ, ಮಲ್ಲಪ್ಪಣ್ಣ..."

ಮಲ್ಲಪ್ಪ ಧಡಕ್ಕನೆದು, "ಬೆಳಗಾಯಾ? ಬೆಳಗಾಯಾ?” ಎಂದು ಕೇಳಿದ.
"ಎದ್ದು ಬನ್ನಿ" ಎಂದು ಅಕ್ಕವ್ವ ಆದೇಶವಿತ್ತಳು.
ವೀರಪ್ಪನೆಂದ:
"ನಾನ ಹೊರಡಬೇಕಲ್ಲ, ಅಣ್ಣ ? ಹೇಳಿ ಹೋಗೋಣ ಅಂತ ಕರೆದೆ.” “ಹೂ !”
ಇಬ್ಬರೂ ಎದ್ದರು. ವೀರಪ್ಪ ಬಹಿರ್ದೆಶೆ-ಮುಖಮಾರ್ಜನಗಳನ್ನು ಮುಗಿಸಿಬಂದು ಸ್ವಲ್ಪ ಹೊತು ಶಿವಧಾನದಲ್ಲಿ ನಿರತನಾದ.
ಒಳಗೆ ಮಡಕೆಯಲ್ಲಿ ಅಕ್ಕಿ ಕೊತಕೊತ ಕುದಿದು ಗಂಜಿಯಾಯಿತು. ಮಲ್ಲಪ್ಪ ಪ್ರಯಾಣದ ಉಡುಪನ್ನು ತೆಗೆದಿರಿಸಿದ.
"ಬನ್ನಿ" ಎಂದು ಅಕ್ಕವ್ವ ಇಬ್ಬರನ್ನೂ ಕರೆದಳು.

...ಗಂಜಿ ಕುಡಿಯುತ್ತ ವೀರಪ್ಪನೆಂದ:

"ಅವ್ವ, ಈ ದೇಹದಲ್ಲಿ ಜೀವ ಇರುವನಕ ನಿನ್ನ ಕೈಯಿಂದ ಅನ್ನ ಉಂಡದ್ದನ್ನ ನೆನಪಿಡಿತೀನಿ."
ಆತ ಉಣುವುದನ್ನು ನೋಡುತ್ತ ಅಕ್ಕವ್ವ ನಿಂತಿದ್ದಳು. ಅರಸುಕುಮಾರನಾಗಿ ಸುಖ ವಾಗಿ ಇರಬಹುದಾಗಿದ್ದವನಿಗೆ ಎಂಥ ದುರ್ಗತಿ ಪ್ರಾಪ್ತವಾಗಿತು! ಯಮಪಾಶದಿಂದ ಬಂಧಿತನಾದ ಮೇಲೂ ಪುರಾತನರ ಪುಣ್ಯವಿಶೇಷದಿಂದ ಈತ ಬದುಕಿ ಉಳಿದಿದ್ದ. ಭವಿಷ್ಯತ್ತಿ ನಲ್ಲಿ ಇನ್ನೇನು ಕಾದಿದೆಯೊ ಇವನಿಗೆ?
ತನ್ನ ಯೋಚನೆಗಳ ಅಲೆಗಳ ಮೇಲೇರಿ ಸಾಗಿದ್ದ ಅಕ್ಕವ್ವನಿಗೆ, ವೀರಪ್ಪ ನುಡಿದ ಕೃತಜ್ಞತೆಯ ಮಾತು ಕೇಳಿಸಿತು. ಆದರೆ ಅದಕ್ಕೆ ಪ್ರತಿಯಾಗಿ ತಾನೇನು ಹೇಳಬೇಕೆಂದು ಅವಳಿಗೆ ತೋಚಲಿಲ್ಲ.
ಆಕೆಯ ಕಣ್ಣುಗಳನ್ನು ಮಂಜು ಕವಿಯಿತು. ಒಸರಿದ ಕಂಬನಿಯನ್ನು ಸೆರಗಿನಿಂದ ಆಕೆ ಒರೆಸಿಕೊಂಡಳು.
ಕೈತೊಳೆದು ಬಂದ ವೀರಪ್ಪ ಮನೆಯ ಮಕ್ಕಳು ಮಲಗಿದ್ದೆಡೆ ಒಂದು ಕ್ಷಣ ನಿಂತ. ಅವರ ಮುಖಗಳನ್ನು ನೋಡಿದ.
“ಮಹಾದೇವ ನಿಮಗೆ ಒಳ್ಳೆದು ಮಾಡಲಿ" ಎಂದ.
ಮಲ್ಲಪ್ಪನ ಎದೆಗುಂಡಿಗೆಯ ಗತಿ ತೀವ್ರವಾಯಿತು. ತಾನು ಆಡಬೇಕಾದ ಮಾತು ಗಳನ್ನು ನೆನಪಿಗೆ ತಂದುಕೊಳ್ಳುತ್ತ ಆತ ಚಡಪಡಿಸಿದ.
"ಇನ್ನು ಹೊರಡಲಾ?” ಎಂದು ಕೇಳಿದ ವೀರಪ್ಪ.