ಪುಟ:ಸ್ವಾಮಿ ಅಪರಂಪಾರ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

ಸಶಸ್ತ್ಯನಾದ ಒಬ್ಬ ಕುದುರೆ ಸವಾರ, ನಾಲ್ವರು ಚಾವಡಿಕಾರರು, ಬರಿದು ಮೇನೆಗಳು ಎರಡು, ಎಂಟು ಜನ ಬೋವಿಗಳು. ಕಡಿದಾದ ದಾರಿಯಲ್ಲಿ ಇವರು ಇಳಿದು ಬಂದಾಗ ಬೆರಗಾಗಿ ನೋಡಿದವರು ಕೆಲವರು : ಭಯದಿಂದ ಓಡಿದವರು ಕೆಲವರು. ಹಳ್ಳಿಯ ಮುಖ್ಯಸ್ಥನಾದ ಗುರಿಕಾರ ಪೊನ್ನಯ್ಯ ಅವರನ್ನು ಇದಿರ್ಗೊಂಡ. ಬಂದವರು, ತಾವು ಸನ್ನಿಧಾನದ ದೂತರು-ಎಂದರು. "జంಬ್ರ ?" ಕುದುರೆಯಿಂದ ಕೆಳಗಿಳಿದ ಮುಖ್ಯಸ್ಥನೆಂದ: "ಮಹಾಸಾಮಿಯೋರ ನಿರೂಪ ತಕಂಡು ಬಂದೀವಿ, ಗಂಗಮ್ಮನವರಿಗೆ." ಮೇನೆಗಳನ್ನು ಕಂಡಾಗಲೇ, ಆ ದೂತರು ಬಂದ ಉದ್ದೇಶವನ್ನು ಪೂನ್ನಯ್ಯ ಊಹಿ ಸಿದ್ದ. "ನಡೀರಿ. ಅವರ ಮನೆ ಕೆಳಮೂಲೆಯಲಾಯು" ಎಂದು ದಾರಿ ತೋರಿಸುತ್ತ, ಗುರಿಕಾರ ಮು೦ದಾದ. ಹಾದಿಯಲ್ಲಿ ಪೊನ್ನಯ್ಯ ಕೇಳಿದ: "ಮಡಕೇರೀಲಿ ಎಲ್ಲಾ ಚಂದ?" "ರಾಜದೂತರ ಮುಖ್ಯಸ್ಥ ಮಾತುಗಾರನಾಗಿರಲಿಲ್ಲ, ನಗೆಯೂ ಸುಳಿಯುತ್ತಿರಲಿಲ್ಲ ಆ ಮುಖದ ಮೇಲೆ, ಆತ ಚುಟುಕಾಗಿ ಉತ್ತರವಿತ್ರ :

“ಚಂದ"

...ದೂತ ಪರಿವಾರ-ಅದಕ್ಕಿಂತಲೂ ವಿಶೇಷವಾಗಿ ಮೇನೆಗಳು–ಬರುತ್ತಿದುದನ್ನು ಕಂಡು ಗಂಗಮ್ಮ ದಿಗ್ರಾಂತಳಾದಳು.

ಆದರೂ ಒಳಗಿನ ಸಂಕಟವನ್ನು ತೋರಗೊಡದೆ ಧೈರ್ಯ ತಳೆದಳು.

ಸ್ಥಿತಿವಂತೆಯಾದ ವಿಧವೆ ಹೆಂಗಸು ಗಂಗಮ್ಮ, ಅವಳು ತಾಯಿಯಾದುದು ತಡವಾಗಿ. ಆ ತಾಯ್ತನವೂ ನಾಲ್ಕು ನಾಲ್ಕೆ ತಿಂಗಳ ಸುಖ.. ಹುಟ್ಟಿದ ಮೂರು ಗಂಡುಮಕ್ಕಳೂ ಹಲ್ಲು ಮನೂಡುವುದಕ್ಕೆ ಮುನ್ನವೇ ಕಣ್ಣು ಮುಚ್ಚಿದುವು. ನಾಲ್ಕನೆಯದು ಹೆಣ್ಣು - ಇದೂ ಅಲಾಯುವಾಗುವುದೆಂದೇ ಅವಳಿಗೆ ಅನಿಸಿತು, ಹಾಗಾಗದೆ ಮಗು ಬದುಕಿ ಉಳಿಯಿತು. ಆದರೆ, ಮಾತು ಬಂದು, 'ಅಪಾ' ಎಂದು ಕರೆಯಲು ಶಕ್ತವಾಗುವುದಕ್ಕೆ ಮೊದಲೇ ತಂದೆಯನ್ನು ಕಳೆದುಕೊಂಡಿತು. ತಾಯಿ ಆ ಕೂಸನ್ನು ಜೋಪಾನದಿಂದ ಸಾಕಿದಳು. ಮಗುವಿನ ಪಾಲನೆಯಷ್ಟೇ ಕಠಿನತರವಾಗಿತು, ಹೊಲ ತೋಟಗಳ ಯಾಜಮಾನ್ಯ. ಅವಳು ಶ್ರೀಮಂಗಲನಾಡಿನ ಹೆಣ್ಣು, ಅಲ್ಲಿ ನಿರ್ಗತಿಕನಾಗಿ ಜೀವಿಸುತ್ತಿದ್ದ ತನ್ನ ಕಿರಿಯ ಸೋದರನನ್ನು ಅವಳು ತನ್ನ ಬಳಿಗೆ ಕರೆಸಿಕೊಂಡಳು. ಆತ ತನ್ನ ಸಂಸಾರದೊಡನೆ ಅಲ್ಲಿಗೆ ಬಂದು ಬೀಡು ಬಿಟ್ಟ. ಅವನ ಕಿರಿಯ ಮಕ್ಕಳು, ಗಂಗಮ್ಮನ ಮಗಳು ಶಾಂತವ್ವನಿಗೆ ಆಟ ವಿನೋದಗಳಿಗೆ ಜತೆಯಾದರು. ಕಲವೇ ತಿಂಗಳ ಹಿಂದಿನ ಮಾತು.ಕೂಡಗು ಸಿಂಹಾಸನಾಧೀಶ ಲಿಂಗರಾಜನ ಗತಿಸಿದ ಅಣ್ಣ ಅಪ್ಪಾಜಿ ಅರಸನ ಹಿರಿಯ ಮಗ ವೀರಪ್ಪಾಜಿಗೆ ಹೆಣ್ಣು ಹುಡುಕಿಕೊಂಡು, ಮಡಕೇರಿ ಯಿಂದ ಕೆಲವರು ಬಂದರು. ಗಂಗಮ್ಮನ ಎಂಟು ವರ್ಷದ ಮಗಳನ್ನು ಕಂಡು ಸಂಧಾನ