ಪುಟ:ಸ್ವಾಮಿ ಅಪರಂಪಾರ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

ನಡೆಸಿದರು. ಗಂಗಮ್ಮ ಒಪ್ಪಲಿಲ್ಲ, ಮಹಾಸ್ವಾಮಿಯವರಿಂದಲೇ ನಿರೂಪ ತರಿಸಿದರು. ಆಕೆ ಆಸಾಯಳಾದಳು.

ಅಪ್ಪಂಗಳಕ್ಕೆ ವಧುವನ್ನೊಯು ಮದುವೆ ನಡೆಯಿತು. ಶಾಂತವ್ವನಿಗೆ ಅದೊಂದು ಕನಸು.. ದೊರೆತ ಜತೆಗಾರನೋ ಆಕೆಗಿಂತ ಹತು-ಹನ್ನೆರಡು ವರ್ಷ ದೊಡ್ಡವ.. ಮಾತಿಲ್ಲ ಕತೆಯಿಲ್ಲ, ಋತುಮತಿಯಾಗುವತನಕ ತವರಿನಲ್ಲೇ ಇರಬೇಕು ತಾನೆ ಹುಡಗಿ ? ರಾಜಮಾಜಿ ಎಂಬ ಹೊಸ ಹೆಸರು ಪಡೆದ ಶಾಂತವ್ವ ತಾಯಿಯೊಡನೆ ಹುಟ್ಟಿದ ಹಳ್ಳಿಗೆ ಹಿಂತಿರುಗಿದಳು.
ಲಿಂಗರಾಜ ಮದುವೆಗೆ ಬಂದಿರಲಿಲ್ಲ, ದೇಹಾಲಸ್ಯ ಎಂದಿದ್ದರು. ಮುಂದೆ ಸ್ವಲ್ಪ ಸಮಯದಲ್ಲೇ ಆತ ನಿಧನಹೊಂದಿದ.
ಪಟ್ಟಕಾಗಿ ಅರಸುಮಕ್ಕಳ ನಡುವೆ ನಡೆಯುವ ಕದನವನ್ನು ಕುರಿತು ಗಂಗಮ್ಮ ಬಲ್ಲಳು. ಮುಂದೇನಾಗುವುದೋ ಎಂದು ಆಕ್ಕೆ ಗಾಬರಿಗೊಂಡಳು. ಹೆಚ್ಚ ತಡವಿಲ್ಲದೆ ವಾರ್ತೆ ಬಂದಿತು. ಪಟ್ಟವನ್ನೇರಿದ ಚಿಕವೀರರಾಜ, ವೀರಪ್ಪನನ್ನೂ ಆತನ ತಮ್ಮನನ್ನೂ ಬಂಧಿಸಿ ಮಡಕೇರಿಗೊಯು ಕೋಟೆಯೊಳಗೆ ಕೈದಿಗಳಾಗಿ ಮಾಡಿದ್ದ.
“ಇನ್ನು ಋಣಾನುಬಂಧ ಹರಿದಂತೆಯೇ. ಮಗೂ ಹಣೇಲಿ ಬರೆದಿತು. ಏನು ಮಾಡೋಕಾಗತದೆ?" ಎಂದು ನಾಲ್ಕು ಜನರೆದುರು ಆಡಿಕೊಂಡು ಗಂಗಮ್ಮ ಅತ್ತಳು. ಇದೊಂದೂ ಅರ್ಥವಾಗದ ಮಗಳು, ಎಂದಿನಂತೆ ಆಟ ವಿನೋದಗಳಲ್ಲಿ ನಿರತಳಾದಳು.
ಬಳಿಕ ಇದುದೊಂದೇ ಭಯ. ಚಿಕವೀರರಾಜ ಧೀರನೆಂದು ಕೇಳಿಬಲ್ಲಳು ಗಂಗಮ್ಮ. ಆದರೆ, ಕ್ರೂರಿಯೂ ಆಗಿರುವನೆಂದರೆ, ತನ್ನ ಮಗಳನ್ನು ಮಡಕೇರಿಗೆ ಹಿಡಿದೊಯ್ಯ ಬಹುದು: ಬಲಾತ್ಕಾರದಿಂದ ಉಪಪತ್ನಿಯಾಗಿ ಮಾಡಿಕೊಳ್ಳಬಹುದು. ಅಂಥ ದುದ್ರಿನ ಬರದಿರಲಿ–ಎಂದು ದೇವರಿಗೆ ಗಂಗಮ್ಮ ಹರಕೆ ಹೊತ್ತಳು.
ಆ ದೇವರು ತನ್ನ ಕೈ ಬಿಟ್ಟನೇ ಹಾಗಾದರೆ? ಕಾಣಿಸುತ್ತಿರುವುದು ಎರಡು ಮೇನೆಗಳು. ಒಂದು ಶಾಂತವ್ವನಿಗೋಸ್ಕರ. ಇನ್ನೊಂದು? ಬೇರೆ ಯಾವಳಾದರೂ ಹರೆಯದ ಹುಡಗಿ ಯನ್ನೂ ಹಿಡಿದೊಯ್ಯವರೋ ಏನೋ...
ಗಂಗಮ್ಮನ ಮನೆ ಸಮಿಾಪಿಸುತ್ತಿದ್ದಂತೆಯೇ ಗುರಿಕಾರ ಪೊನ್ನಯ್ಯ ಕೂಗಿ ನುಡಿದ:
"ಸನ್ನಿಧಾನದಿಂದ ನಿರೂಪ ಬಂದದೆ." 

ಗಂಗಮ್ಮ ಒಳಗಿನ ಅಳುಕನ್ನು ತೋರಗೊಡದೆ, "ಎಲ್ಲರೂ ಬದ್ರಿ, ಕುಂತೊಳ್ಳಿ" ಎಂದಳು. ಆಳುಗಳನ್ನು ಕುರಿತು, "ಇವರಿಗೆಲ್ಲ ಆಸರೆಗೆ ತಂದೊಡ್ರೋ" ಎಂದು ಆದೇಶ ವಿತ್ತಳು.

ಕುದುರೆ ಸವಾರನಿತ್ತ ಕಾಗದದ ಸುರುಳಿಯನ್ನು ಕೈಯಲ್ಲಿ ಹಿಡಿದುಕೊಂಡು ಗಂಗಮ್ಮ ಎಂದಳು :
“ನಮಗೆ ಓದು ಬರದಲ್ಲ, ಇದರೊಳಗೆ ಏನನೆಯೋ ಹೇಳಿ ಗುರಿಕಾರರೇ."
ತನ್ನ ಹಿರಿಮೆಯ ಪ್ರದರ್ಶನಕ್ಕೆ ಆ ಅವಕಾಶ ದೊರೆಯುವುದೆಂದು ಮೊದಲೇ ತಿಳಿದಿದ್ದ ಫೂನ್ನಯ್ಯ, ಕುದುರೆ ಸವಾರನ ಕಡೆಗೊಮ್ಮೆ ದೃಷ್ಟಿಬೀರಿ. ನಿರೂಪವನ್ನು ಗಂಗಮ್ಮನಿಂದ ಸ್ವೀಕರಿಸಿ, ತೆರೆದು ಓದಿದ:
"ಮಾತೋಶ್ರೀ ಗಂಗಮ್ಮನವರಿಗೆ, ಸನ್ನಿಧಾನದಿಂದ ಬರೆದಿರುವದೇನೆಂದರೆ: