ಪುಟ:ಸ್ವಾಮಿ ಅಪರಂಪಾರ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ ಈ ನಿರೂಪ ಕಂಡ ತಕ್ಷಣ ತಂಗಿ ರಾಜಮಾಜಿಯವರೂ ತಾವೂ ಅಪ್ಪಂಗಳ ಅರಮನೆಗೆ ಹೊರಟು ಬರಬೇಕು. ಅಲ್ಲಿ ತಮ್ಮ ವಾಸಕ್ಕೆ ಏರ್ಪಾಟು ಮಾಡಿಯದೆ. ಮೇನೆ ಗಳನ್ನು ಕಳಿಸಿದೇವೆ. ಅಂತಾ–ಮೊಹರುನಿಶಿ ಅಂಕಿತ."

"ಮಡಕೇರಿಗೆ ಅಲ್ಲ ಹಂಗಾರೆ" ಎಂದಳು ಗಂಗಮ್ಮ.
"ಅಲ್ಲ, ಅಪ್ಪಂಗಳಕ್ಕೆ."
ಇದು ಹೊಸ ವಿಚಾರ, ಎಂದುಕೊಂಡಳು ಗಂಗಮ್ಮ. –ತನ್ನನ್ನು 'ಮಾತೋಶ್ರೀ' ಎಂದು ಅರಸು ಸಂಬೋಧಿಸಿದ್ದ . 'ತ೦గి' ಎಂದು ಕರೆದಿದ್ದ ರಾಜಮಾಜಿಯನ್ನು, ಅಪ್ಪಂಗಳಕ್ಕೆ ಬರಬೇಕು-ಎಂದಿದೆ ನಿರೂಪದಲ್ಲಿ, ಪ್ರಾಯಶಃ ತನ್ನ ಅಳಿಯನನ್ನು ಬಿಟ್ಟಿರುವರೇನೊ?ದಾಯಾದಿಗಳ ನಡುವೆ ಸಾಮರಸ್ಯ ಉಂಟಾಯಿತೇನೊ?
ನಿರೂಪವನ್ನು ತನ್ನ ಕೈಗಿತ್ತವನ ಕಡೆಗೆ ತಿರುಗಿ, "ಯಾವತು ಹೊರಡಬೇಕು?" ಎಂದು ಗಂಗಮ್ಮ ಕೇಳಿದಳು.
ಆತನೆಂದ:
"ಇವತ್ತು ರಾತ್ರೆಯೇ."
"ಭಟರೂ ಬೋವಿಗಳೂ ನಡೆದು ಬಂದವರೆ, ವಿಶಾಂತಿ ಬಾಡೇನು?"
"ಅಪ್ಪಂಗಳಕ್ಕೆ ನಿಮ್ಮನ್ನು ಮುಟ್ಟಿಸಿ ಇಸ್ಲಾಂತಿಪಡಿತೇವು." 

"ಹಾಗೋ? ಒಳ್ಳೆದು.. ಶಾಸ್ತ್ರಿಗಳನ್ನು ಕರೆಸಿ ಮುಹೂರ್ತ ನೋಡಿಸತೇವಿ."

"ನೋಡಿಸಿ, ಆದರೆ ಹೊರಡೋದು ಮಾತ್ರ ಇವತು ರಾತ್ರೆಯೇ."
ಇಷ್ಟೇಕೆ ಈತ ಅವಸರಪಡಿಸುತ್ತಿದ್ದಾನೆ? ಅಳಿಯನಿಗೇನಾದರೂ ಅಸ್ವಾಸ್ಥ ಆಗಿರ ಲಾರದಷ್ಟೆ?-ಎಂದು ಗಂಗಮ್ಮ ಚಿಂತಿಸಿದಳು.
ಆದರೂ ಬಾಹ್ಯದ ಗಾಂಭೀರವನ್ನು ಸಡಲಿಸದೆ, "ಆಗಲಿ, ರಾಜಾಜ್ಞೆ ಪಾಲಿಸತೇವೆ; ನೀವೆಲ್ಲ ಮಿಾಯಗೀಯ ಮುಗಿಸಿ, ಉಂಡು, ದಣುವಾರಿಸ್ಕೊಳ್ಳಿ" ಎಂದಳು.
"ಹೊರಡತೀರಿ ನೀವು, ಹೋಗಿಬನ್ನಿರವ್ವ" ಎಂದು ನುಡಿದು, ಗುರಿಕಾರ ತನ್ನ ಮನೆಯ ಹಾದಿಹಿಡಿದ.
ಕುತೂಹಲದಿಂದ ನೆರೆದ ಜನ, ಮಗಳೊಡನೆ ಗಂಗಮ್ಮ ಅಪ್ಪಂಗಳಕ್ಕೆ ಹೊರಡುವ ಸುದ್ದಿಯನ್ನು ಮುಟ್ಟಿಸಲೆಂದು ಚೆದರಿದರು. 

ಒಳಗೆ ತಮ್ಮನನ್ನು ಕರೆದು, "ಅಳಿಯ ಕೋಟೆಮನೆಯಾಗದಾರೋ ಅಪ್ಪಂಗಳದಾಗ ದಾರೋ ತಿಳಕೋ, ಯಾವನಾದರೂ ಚಾವಡಿಕಾರನ್ನ ಗುಟಾಗಿ ಕರೆದು ಕೇಳು" ಎಂದಳು, ಗಂಗಮ್ಮ.

ಅವಳ ಸೋದರ ತಿಳಿಯಲು ಪ್ರಯತ್ನಪಟ್ಟ: ವಿಫಲನಾದ.
"ಒಬ್ಬರೂ ಬಾಯಿ ಬಿಡವಲು ಗೊತ್ತಿಲ್ಲ ಅಂತಾರೆ"-ಅಂದ. 

ಗಂಗವ್ವನ ಹಣೆಯಲ್ಲಿ ನೆರಿಗೆ ಮೂಡಿತು.

'ಬಹುಶಃ ಈ ಜನಕ್ಕೆ ತಿಳೀದೇನೂ ಇರಬಹುದು' ಎಂದು ತನ್ನನ್ನು ತಾನೆ ಆಕೆ ಸಮಾಧಾನಪಡಿಸಿದಳು.
ಪ್ರಯಾಣಕ್ಕೋಸ್ಕರ ಸಿದ್ಧತೆಗಳಾಗುತ್ತಿದ್ದುದನ್ನು ನೋಡಿದ ಮೇಲೆ, ರಾಜದೂತರ ಮುಖ್ಯಸ್ಥ ಮೊದಲಿನಷ್ಟು ಬಿಗಿಯಾಗಿರಲಿಲ್ಲ.