ಪುಟ:ಸ್ವಾಮಿ ಅಪರಂಪಾರ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ಶಾಂತವ್ವ ತಾಯಿಯನ್ನು ಕೇಳಿದಳು : "ಇನ್ನೊಂದ್ಸಾರ್ತಿ ಅಲ್ಲಿಗೇ ಓಗ್ಬೇಕನಮ್ಮ ? ತಿರ್ಗಾ ಮಧುವೆ ಮಡತಾರ ?" "ನಿನ್ನ ತಕಲೆ !" ಎಂದಲು ಗಂಗಮ್ಮ. ಆಕೆಗೆ ನಗೆಯೂ ಬಂತು, ಅಳುವೂ ಬಂತು. -ಸೂರ್ಯೋದಯಕ್ಕೆ ನಾಲ್ಕು ಘಳಿಗೆ ಹೊತ್ತೇರುತ್ತ ಆ ತಾಯಿ ಮಗಲು ಅಪ್ಪಂಗಳಕ್ಕೆಂದು ಹೊರಟರು.

                                                   ೧೩

ಚಿಕವೀರರಾಜನ ತಂಗಿ, ದೇವಮ್ಮಾಜಿ. ಲಿಂಗರಾಜ ತನ್ನ ಮಗನಿಗೆ ಕಟ್ಟುನಿಟ್ಟಾದ ವಿದ್ಯಾಭ್ಯಾಸ_ಶಸ್ತ್ರಾಭ್ಯಾಸಗಳನ್ನುಮಾಡಿಸಿದ. ರಜ್ಯಾಡಳಿತದ ಕಡೆಗೆ ಗಮನವನ್ನು ಸೆಳೆದ. ತಾನು ಅನುಭವದಿಂದ ಕಲಿತ ರಾಜಕಾರಣದ ಮೂಲಸೂತ್ರಗಳನ್ನು ಅವನಿಗೆ ಹೇಳಿಕೊಟ್ಟ.ರಾಜನ ನಿಷ್ಟುರ ರೀತಿನೀತಿಗಳಿಗೆ ರಾಜಕುಮಾರನೂ ಹೊರತಾಗಿರಲಿಲ್ಲ, ದೇವಮಾಜಿಯಾದರೆ ಹಾಗಲ್ಲ, ಅವಳೇನು ತಪ್ಪ ಮಾಡಿದರೂ ಅರಸ ಸಿಟ್ಟಾಗುತ್ತಿರಲಿಲ್ಲ. ಆತ ಅವಳನ್ನು ಮುದ್ದಿಸಿ ಮುದ್ದಿಸಿ ಬೆಳೆಸಿದ. ಹಿಂದೆ ಲಿಂಗರಾಜನ ಹಿರಿಯಣ್ಣ ದೊಡ್ಡವೀರರಾಜ ಗಂಡು ಸಂತಾನವಿಲ್ಲದೆ ಸತ್ತಾಗ ಆತನ ಮಗಳು ರಾಜ್ಯವಾಳತೊಡಗಿದ್ದಳು. ಅದನ್ನು ಲಿಂಗರಾಜನೇ ಮುಕ್ತಾಯಗೊಳಿಸಿದ್ದ. ಆ ಕೆಲಸ ಹೆಣ್ಣಿಗೆ ಹೇಳಿದ್ದಲ್ಲ ಎಂದು ಅವನ ಭಾವನೆ. ತನ್ನ ಮಗಳು ಒಳ್ಳೆಯ ಗೃಹಿಣಿಯಾಗಿ ಬಾಳಬೇಕು, ತನ್ನ ತರುವಾಯ ಪಟ್ಟವೇರುವ ತನ್ನ ಮಗನಿಗೆ ನೆರವಾಗಬಲ್ಲ ಸುಗುಣಿಯೊಬ್ಬನಿಗೆ ಅವಳನ್ನು ಮದುವೆ ಮಾಡಿಕೊಡಬೇಕು, ಆತನನ್ನು ಮನೆಯಳಿಯನನಾಗಿ ಇರಿಸಿಕೊಳ್ಳಬೇಕು–ಇದು ಲಿಂಗ ರಾಜನ ಯೋಚನ. ಅದನ್ನವನು ಕೃತಿಗಿಳಿಸಿದ. ಕೊಡವರಲ್ಲಿ ತಾನು ಮೆಚ್ಚಿದ ಯುವಕ ನೊಬ್ಬನನ್ನು ತಂದು, ಅವನಿಗೆ ಲಿಂಗಧಾರಣೆ ಮಾಡಿಸಿ, ಚನ್ನಬಸಪ್ಪನೆಂದು ಹೆಸರಿಟ್ಟು, ಅಳಿಯನಾಗಿ ಸ್ವೀಕರಿಸಿದ.

        ಚಿಕವೀರರಾಜನಿಗೆ ಚನ್ನಬಸಪ್ಪನೆಂದರೆ ತಾತ್ಸಾರ. ಭಾವನನ್ನು ಸಮಾನತೆಯಿಂದ ಅವನೆಂದೂ ಕಂಡವನಲ್ಲ. ಬಾಲ್ಯದಲ್ಲಿ ತಂಗಿಯನ್ನು 'ಗಿಣಿ' ಎಂದು ಆತ ಕರೆಯುವುದಿತ್ತು. ಈಗ ಅದು ಪರಿಹಾಸ್ಯದ ಮೂದಲಿಕೆಯ ಪದವಾಯಿತು. 'ಗಿಣಿ ಗಂಡ' ಎನ್ನುವುದು ಭಾವನಿಗೆ ಆತ ನೀಡಿದ ಬಿರುದಾಯಿತು.
       ಲಿಂಗರಾಜನ ಮೋಹದ ಮಡದಿ ಸೂಚನೆ ಇತ್ತಳು:
      'ಮಗಳನ್ನೂ ಅಳಿಯನನ್ನೂ ಅಪ್ಪಂಗಳದಲ್ಲಿ ಇರಿಸೋಣ, ಆಗದೆ?'
      ಕಿರಿಯರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಲಿಂಗರಾಜನಿಗೆ, ಅದೇ ಸರಿ ಎನಿಸಿತು.
      ಮತಿಭ್ರಮಣೆಯಾದಾಗ ದೊಡ್ಡವೀರರಾಜ, ಅಪ್ಪಂಗಳದಲ್ಲಿದ್ದ ತನ್ನ ತಮ್ಮ ಅಪಾಜಿಯನ್ನು ಕೊಲೆಮಾಡಿಸಿದನಷ್ಟೆ. ಮುಂದೆ ಆತನಿಗೆ ತಿಳಿವು ಮೂಡಿ ಪಶ್ಚಾತಾಪವಾದಾಗ, ಹಾಲೇರಿಯನ್ನು ಬಿಟ್ಟ ಬಂದು ಅಪ್ಪಂಗಳದಲ್ಲಿ ವಾಸಿಸಬೇಕೆಂದೂ ಅಪ್ಪಾಜಿಯ ಮಕ್ಕಳನ್ನು ಸಲಹಬೇಕೆಂದೂ ಕಿರಿಯ ತಮ್ಮ ಲಿಂಗರಾಜನಿಗೆ ಆಜ್ಞಾಪಿಸಿದನಷ್ಟೆ. ಅಂದಿನಿಂದ ಅರಸನಾದವರೆಗೂ ಲಿಂಗರಾಜ ಅಲ್ಲಿಯೇ ವಾಸಿಸಿದವನು. ಸೊಗಸಾದ ಅರಮನೆ. ಲಿಂಗರಾಜ ದಕ್ಷತೆಯಿಂದ ಊರ್ಜಿತ ಸ್ಥಿತಿಗೆ ತಂದ ಜಹಗೀರು.ಚಿಕವೀರರಾಜನೂ