ಪುಟ:ಸ್ವಾಮಿ ಅಪರಂಪಾರ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪರ

     ವೀರಪ್ಪ ಸತ್ತುದನ್ನು ಇವರು ಅರಿಯರು_ಎಂಬುದು ಆಕೆಗೆ ಕೆಲ ಕ್ಷಣಗಳಲ್ಲೇ ಮನದಟ್ಟಾಯಿತು.
     "ಬನ್ನಿ, ಬಾ ತಂಗಿ" ಎಂದಳು ದೇವಮಾಜಿ.
     ತನಗೆ ನಮಿಸಿದ ಕುದುರೆ ಸವಾರನನ್ನೂ ಚಾವಡಿಕಾರರನ್ನೂ ಆಳುಗಳನ್ನೂ ಉದ್ದೇಶಿಸಿ ಚನ್ನಬಸಪ್ಪ ದರ್ಪದಿಂದ ಅಂದ:
     "ಮಡಕೇರಿಗೆ ಸಂಜೆನಾಗ ಓಗ್ರಿ, ತಿಳಿತಾ?"
     "ಆಗಲಿ ಬುದ್ಧಿ" ಎಂದ ಮುಖ್ಯಸ್ಥ. 
     ಅರಮನೆಯ ದಕ್ಷಿಣ ಮೂಲೆಯ ಎರಡು ಕೋಣೆಗಳನ್ನು ತೆರವು ಮಾಡಲಾಗಿತು. ಅತಿಥಿಗಳನ್ನೂ ಅವರ ಹಡಪ ಗಂಟುಗಳನ್ನೂ ಅಲ್ಲಿಗೆ ದೇವಮಾಜಿ ಸಾಗಿಸಿದಳು. 
     ಯಾವ ರೀತಿಯಲ್ಲೂ ಸುಸಜ್ಜಿತವಲ್ಲದ ಸಾದಾ ಕೊಠಡಿಗಳು. ನಾಲ್ಕು ದಿನಗಳ ಮಟ್ಟಿಗೆ ಬಂದವರಿಗೆ ಹೆಚ್ಚೇನು ಬೇಕು?–ಎನ್ನುವಂತೆ ಗೋಡೆಗಳು ಮೂಕವಾಗಿದ್ದುವು.
     ಗಂಗಮ್ಮನ ಮುಖ ಕೆಂಪೇರಿತು. ಇದು ಅವಮಾನವಲ್ಲದೆ ಇನ್ನೇನು? 
     ಬೀಗರನ್ನು ಕಾಣುವ ಬಗೆಯೆ ಇದು?
     ಕಾಠಿನ್ಯ ಬೆರೆತ ಸ್ವರದಲ್ಲಿ ಅವಳೆಂದಳು : 
    "ಅಳಿಯದೇವರನ್ನು ಕೋಟೆಮನೆಗೆ ಕರಸಿಕೊಂಡರೂಂತ  ಕೇಳಿದ್ದೀವಿ. ವಾಪಸು ಬಂದಿದಾರೇನು?” 
     ಬಾಗಿಲ ಕಡೆ ನೋಡುತ್ತ ನಿಂತಿದ್ದ ದೇವಮ್ಮಾಜಿ ಗತ್ತಿನಿಂದ ಕತು ಹೊರಳಿಸಿ, "ನಿಮಗೆ ಗೊತ್ತಿಲ್ಲ? ನಿಮ್ಮ ಅಳಿಯ ಆಗಲೇ ತೀರೊಂಡ್ರು. ಮಾರಿಬೇನೆಯಂತೆ. ಯಾವ ಬೇನೆಯೋ ಯಾರಿಗೆ ಗೊತು? ನಿಮ್ಮ ಅಳಿಯ ಅವರ ತಮ್ಮ ಇಬ್ರೂ ಹೋದ್ರು" ಎಂದು, ಒಂದೇ ಉಸಿರಿಗೆ ಅಂದಳು.
     ಗಂಗಮ್ಮನಿಗೆ ಸಿಡಿಲೆರಗಿದಂತಾಯಿತು. ಆದರೂ ಮೂರ್ಛಿತಳಾಗಲೊಪ್ಪದೆ;  ದೇಮ್ಮಾಜಿಯ ಕಡೆಗೆ ಆಕೆ ನೆಗೆದಳು. ಅವಳ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಕುಲುಕಿದಳು.
    "ಬಿಡ್ತು ಅನ್ನು ತಂಗಿ! ಬಿಡ್ತು ಅನ್ನು ! ಹಿಂಗೂ ಚ್ಯಾಷ್ಟಿ ಮಾಡತಾರಾ? ಇದೇನ ತಂಗಿ ನೀ ಯೋಳ್ತಿರೋದು?"
     ದೇವಮ್ಮಾಜಿ ಗಂಗಮ್ಮನ ಕೈಗಳನ್ನು ಕೆಳಕ್ಕಿಳಿಸಲು ನಿಷ್ಪಲವಾಗಿ ಯತ್ನಿಸುತ್ತ, ಪ್ರತಿಭಟಿಸಿದಳು:
     "ನಾ ಯಾಕವ್ವ ಸುಳ್ಳೇಳ್ವಿ?" 
     ಮೈಯೆಲ್ಲ ಕಂಪಿಸುತ್ತ ಗಂಗಮ್ಮ ಕೋಪಾವಿಷ್ಟಳಾಗಿ ನುಡಿದಳು: 
     "ಅಯ್ಯೋ ಚಂಡಾಲರಾ ! ಆ ದೂತರು ನನಗೇನೂ ಯೋಳ್ಳೇ ಇಲ್ವಲಾ!"
     "ಯಾಕೆ ಹೇಳಾರು? ಬಾಯಿ ಬಿಟ್ಟರೆ ತಲೆ ಓದಾತು ಅಂತ ಎದರ್ಸಿರ್ಬೆಕು." 
     ದೇವಮ್ಮಾಜಿಯಿಂದ ದೂರ ಸರಿದು ತನ್ನ ಕಾಲುಗಳ ಮೇಲೆಯೇ ನೆಟ್ಟಗೆ ನಿಲ್ಲಲು ಗಂಗಮ್ಮ ಯತ್ನಿಸಿದಳು. ಬವಳಿ ಬಂದಂತಾಯಿತು. 
     ತಾಯಿಯ ಚೀರಾಟ ಕೇಳಿದ ರಾಜಮ್ಮಾಜಿ ಬೆದರಿ ಪಿಳಿಪಿಳಿ ಕಣ್ಣು ಬಿಡುತ್ತ ಗೋಡೆಯ ಬಳಿ ನಿಂತಿದ್ದಳು. ಅವಳು "ಅಮಾ!" ಎಂದು ಕೂಗಿಕೊಳ್ಳುವುದಕ್ಕೂ, ಅರಸುತ್ತ ಬಂದ