ಪುಟ:ಸ್ವಾಮಿ ಅಪರಂಪಾರ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ಆಗ ಸ್ನಾನ ಮಾಡಿ, ಹಣೆಗೆ ವಿಭೂತಿ ಬಳೆದುಕೊಂಡು, ಮುಡಿ ಕಟ್ಟಿಕೊಳ್ಳದೆಯೇ, ಶಿವ ನನ್ನು ಧಾನಿಸುತ್ತ ಕುಳಿತಿದ್ದಳು.

      ಹಿಂದಿನ ರಾತ್ರೆ,  "ಏನಾದರೂ ತೆಗೊಳ್ಳಿ"  ಎಂದು ಪರಿಪರಿಯಿಂದ ದೇವಮಾಜಿ ಕೇಳಿದ್ದರೂ ಗಂಗಮ್ಮ ಕೊಟ್ಟದೊಂದೇ  ಉತ್ತರ:
      “ನನಗೇನೂ ಬ್ಯಾಡ."
      "ರಾಜಮಾಜಿನಾದರೂ ತಗೊಳ್ಳಿ–" ಎಂದಳು ದೇವಮಾಜಿ ಕಡೆಯಲ್ಲಿ.
      ಗಂಗಮ್ಮ ಆಕ್ಷೆಪಿಸಲ್ಲಿಲ.
      "ಕರಕೊಂಡು ಓಗಮ್ಮ. ಶಾಂತೂ, ಓಗು ಅಕ್ಕನ ಜತೆಗೆ."
      ಹಸಿದಿದ್ದ ರಾಜಮಾಜಿ, ಅಪ್ಪಂಗಳದ ಒಡತಿಯನ್ನು ಹಿಂಬಾಲಿಸಿದಳು. 
      ಅರೆಮನಸ್ಸಿನ ಉಣಿಸು.. ಅರ್ಧದಲ್ಲೇ ರಾಜಮಾಜಿ ಅಂದಿದ್ದಳು : 
      "ಸಾಕು." 
      ತಾಯಿ ಇದ್ದೆಡೆಗೆ ಆಕೆ ಮರಳಿದಳು. ಸ್ವಲ್ಪ ಹೊತ್ತಿನಲ್ಲೇ ಅವಳಿಗೆ ನಿದ್ದೆ ಬಂತು. 
      ಬೆಳಿಗ್ಗೆ ಅವಳೂ ಮಿಂದು ಹಣೆಗೆ ವಿಭೂತಿ ಹಚ್ಚಿಕೊಂಡು  ತಾಯಿಗೆ ಮಗ್ಗುಲಲ್ಲಿ ಕುಳಿತಳು. 
      ...ಅಪ್ಪಂಗಳಕ್ಕೆ ಬಂದ ಗೌರಮ್ಮ ದೇವಮಾಜಿಯನ್ನು ಹಿಂಬಾಲಿಸಿ ನೇರವಾಗಿ ತಾಯಿ_ಮಗಳಿದ್ದ ಕೊಠಡಿಯನ್ನು ಹೊಕ್ಕಳು.
      ಸಪ್ಪಳವಾಯಿತೆಂದು ಗಂಗಮ್ಮ ಕಣ್ಣು ಬಿಟ್ಟ ನೋಡಿದಳು. ಯಾರು?-ಎಂಬುದು ಮೊದಲ ನೋಟಕ್ಕೆ ಹೊಳೆಯಲಿಲ್ಲ. ತನ್ನ ಮಗಳ ಮದುವೆಯಲ್ಲಿ ಕಂಡಿದ್ದಳು ಆ ಶೋಭನಾಂಗಿಯನ್ನು.  ಗೌರಮ್ಮ ಅಲ್ಲವೆ? ರಾಣಿ. ತಾನು ಏಳಬೇಕು. 
      ಏಳಲು ಅವಕಾಶವನ್ನೇ ಕೊಡದೆ ಗೌರಮ್ಮ ಬಂದು ಆಕೆಯ ಪಾದಗಳನ್ನು ಹಿಡಿದಳು. 
      "ಬಿಡಿ ತಾಯಿ" ಎಂದಳು ಗಂಗಮ್ಮ.
      ನಮಿಸಿದ ಬಳಿಕ ಗೌರಮ್ಮ, ತಾನೂ ನೆಲದಮೇಲೆ ಕುಳಿತಳು. ಅಲ್ಲಿದ್ದ ಒಂಟಿ ಪಲ್ಲಂಗದ ಮೇಲೆ ದೇವಮ್ಮಾಜಿ ಆಸೀನಳಾದಳು.
      ಗೌರಮ್ಮನ ಆಗಮನ, ನಡುಬಿಸಿಲಲ್ಲಿ ತೂರಿಬಂದ ಬೆಳುದಿಂಗಳಿನ ಹಾಗಿತ್ತು ಗಂಗಮ್ಮನ ಪಾಲಿಗೆ. ಆದರೂ ನಿರ್ವಿಕಾರ ಮುಖಭಾವದಿಂದ ರಾಣಿಯನ್ನು ಅವಳು ದಿಟ್ಟಿಸಿದಳು.
      ಗಂಗಮ್ಮನನ್ನೂ ರಾಜಮಾಜಿಯನ್ನೂ ಒಂದು ಕ್ಷಣ ನೋಡುತ್ತಲಿದ್ದು, ನಿಟುಸಿರು ಬಿಟ್ಟು, ಗೌರಮ್ಮ ಅಂದಳು : 
      "ನೋಡೊಂಡು ಹೋಗಾನ ಅಂತ ಬಂದೆ, ಅತ್ತೆಮ್ಮ."
      ಗಂಗಮ್ಮ ಉತ್ತರವೀಯಲಿಲ್ಲ. ಕ್ಷಣ ಬಿಟ್ಟು ಗೌರಮ್ಮನನ್ನೆ ಅಂದಳು :
      "ರಾಜಮಾಜೀನ ಅರಮನೆಗೆ ಕರೆಸಿಕೋಬೇಕು ಅಂತ ಮನಸ್ಸಿತು. ಆದರೆ ಒಡೆಯರು, ತಾಯಿ-ಮಗಳಿಗೆ  ಅಪ್ಪಂಗಳಾನೆ ಹಿಡಿಸಾತು, ಅಂದರು. ಮೈದುನಂದಿರು ಹುಟ್ಟಿ ಬೆಳೆದ ತಾವು.. ಇದೇ ಪಸಂದಾಗಗ್ತದೆ ಅಂತ ನನಗೂ ಅನಿಸಿತು."
       ರಾಜ ಅಷ್ಟನ್ನೇನೂ ಹೇಳಿರಲಿಲ್ಲ. ರಾಣಿ ಕಲ್ಪಿಸಿಕೊಂಡು ನ್ಯಾಯೋಚಿತವೆನಿಸಿದುದನ್ನು ಅಂದೆದ್ದಳು. 
       ಅದನ್ನು ಕೇಳಿದಮೇಲೆ ಎರಡು ಕ್ಷಣ ಮೌನವಾಗಿದ್ದು ಗಂಗಮ್ಮನೆಂದಳು: