ಪುಟ:ಸ್ವಾಮಿ ಅಪರಂಪಾರ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಏನ ಕೊಟ್ಟ ಎಂತ ಸೌಭಾಗ್ಯ ಕೊಂಡಂತಾಯು, ತಾಯಿ.. ನಮಗೂ ದೊರೆ ಕುಲಕ್ಕೂ ಋಣ ಹರೀತು.” ಕಿರಿಯವಳಾದರೂ ತಿಳಿವಳಿಕೆಯ ಮಾತನ್ನು ಗೌರಮ್ಮ ಆಡಿದಳು. "ಅದು ಹಾಗೆ? ಲೋಕ ಏನಂದಾತು? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ರಾಜಮಾಜಿ ಈಗ ಕೊಡಗು ಅರಮನೆಗೆ ಕಳುಬಳ್ಳಿ, ಒಡವೆ ಇಲ್ಲೇ ಇರಬೇಕು ఆల్లವಾ ?" "ನನಗಿರೋದೂ ಇದೊಂದೇ ಒಡವೆ.ಅದನ್ನ ಬಿಟ್ಟ ನಾ ಇರತೀನಾ?" ಪಲ್ಲಂಗದ ಮೇಲಿಂದ ದೇವಮಾಜಿ ಮಾತು ಸೇರಿಸಿದಳು. "ಆ ಒಡವೇನ ಕೊಟ್ಟಬಿಟ್ಟಿದೀರಿ, ಅಲ್ಲವಾ ಅತ್ತೆ?" ಕೊಟ್ಟಿದು ನಿಜ. ಬಿಟ್ಟದ್ದು ಸುಳ್ಳು, ಹಳ್ಳಿಗೆ ವಾಪಾಸು ಓಗೋದಕ್ಕೆ ನಮಗೆ ಅನುಮತಿ ಕೊಟ್ಟರಾದಾತು. ದೊರೆಯ ಹತ್ತಿರ ನಾವು ಬೇಡೊಳ್ಳೋದು ಇದನ್ನೇ." ಗೌರಮ್ಮ ಮುಖ ಬಾಡಿಸಿ ಕುಳಿತಳು. ಗಂಗಮ್ಮನೇ ಅಂದಳು.:

"ಶಾಂತೂಗೇನು ತಿಳೀತದೆ? ಅದು ಮಗು, ದೊಡೊಳ್ಳೋಳಾಗಿದ್ದಿದ್ದರೆ ಬೇರೆ ಮಾತಾಗ తికెు." ಗೌರಮ್ಮನ ತುಟಿಗಳು ಪ್ರಯಾಸದಿಂದ ತೆರೆದುಕೊಂಡುವು.

"ನಾ ಕೇಳಕೋತೀನಿ, ಅತ್ತೆಮ್ಮ, ಇವತು ಬಾಡ, ಇನ್ನೂ ಸ್ವಲ್ಪ ದಿನ ಬಿಟ್ಟ ಇದರ ಯೋಚನೆ ಮಾಡಾನ, ಸೂತಕ ಕಳೀಲಿ. ಮಡಕೇರಿಗೂ ಒಮ್ಮೆ ಬನ್ನಿ." ತುಸು ಮೆತ್ತಗೆ ಆಕೆಯೇ ಮತ್ತೂ ಅಂದಳು.: "ಇಲ್ಲಿ ನಿಮಗೇನೂ ಕಷ್ಟ ಆಗದಹಾಗೆ ನೋಡಿಕೋತೇನೆ. ಏನು ಬೇಕಿದ್ದರೂ ಹೇಳಿ ಕೆಳಿಸಿ, ” ರಾಣಿಯನ್ನು ದುರದುರನೆ ನೋಡಿ ದೇವಮಾಜಿ ಅಂದಳು :

"ಇಲ್ಲಿ ಎಲಾ ಅದೆ. ಬಂದವರಿಗೆ ನಾವೇನೂ ಕಮ್ಮಿ ಮಾಡೋದಿಲ್ಲ ಅತ್ತಿಗೆ." ಗೌರಮ್ಮ ನೋಂದವಳಂತೆ ದೇವಮಾಜಿಯ ಕಡೆ ನೋಡಿದಳು. "ಕಮ್ಮಿ ಮಾಡತೀರಿ ಅಂದೆನೆ? ಅಪ್ಪಂಗಳದ ಮನೆ ಬೇರೆ ಅಲ್ಲ, ಮಡಕೇರಿ ಮನೆ ಬೇರೆ ಅಲ್ಲ–ಅಂತ ತಿಳಿಸ್ಲೆ, ತಪ್ಪಾಯಿತಾ?” ಗಂಗಮ್ಮನೆಂದಳು.: "ಯಾರದೂ ತಪ್ಪಿಲ್ಲ, ಗಂಡನ ಮನೇಲಿ ಅದರ ಕೊರತೆ ಇದರ ಕೊರತೆ ಅಂತ ಹೆಣ್ಣು ಎಲಾದರೂ ದೂರತದ?ದೇವಮಾಜಿ ಅವಳ ತಂಗಿಗೇನೂ ಕಮ್ಮಿ ಮಾಡಲ್ಲ.”

ದೇವಮಾಜಿ ಎಷ್ಟೆಂದರೂ ಅರಸುಮಗಳು. ಗೌರಮ್ಮ ಕುಲದಿಂದ ಹೊರಗೆ ಬಂದು ರಾಣಿಯಾದವಳು. ಆ ತಾರತಮ್ಮವನ್ನು ದೇವಮಾಜಿ ಮರೆಯಬೇಕು ಹೇಗೆ? ಬಿಗುಮಾನದ ದೃಷ್ಟಿಯಿಂದ ಗೌರಮ್ಮನನ್ನು ಆಕೆ ನೋಡಿದಳು. ಸಹನಶೀಲತೆ ಮೈಗೂಡಿದ್ದ ಗೌರಮ್ಮ ವಿಷಯ ಬದಲಿಸಿ, "ರಾಜಮಾಜಿ, ಇಲ್ಲಿ ಬಾ ತಂಗಿ" ಎಂದು ಕರೆದಳು. "ಓಗು ಶಾಂತೂ" ಎಂದಳು ಗಂಗಮ್ಮ,