ಪುಟ:ಸ್ವಾಮಿ ಅಪರಂಪಾರ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಮ್ಮಾಜಿ ಸಂಕೋಚಪಡುತ್ತ, ಸರಳವಾಗಿಯಾದರೂ ಸಾಲಂಕೃತಳಾಗಿದ್ದ ಗೌರಮ್ಮನ ಬಳಿಗೆ ಬಂದಳು. "ಕೂತ್ಕೋ ರಾಜಮ್ಮಾಜಿ." ಗೌರಮ್ಮನ ಮಗುಲಲ್ಲಿ ಆಕೆ ಕುಳಿತಳು. ತನ್ನ ಬಾಹುವಿನಿಂದ ಅವಳನ್ನು ಗೌರಮ್ಮ ಬಳಸಿದಳು, ಮತ್ತೊಂದು ಕೈಯಿಂದ ಮುಂಗುರುಳನ್ನು ನೇವರಿಸಿದಳು. ಮುಗ್ಗೆ ಬಾಲೆಗೆ ಈ ಪ್ರೀತಿ ಪ್ರದರ್ಶನ ಅಪಾಯ ಮಾನವಾಗಿತ್ತು. ಉಗುಳು ನುಂಗಿ, ತನ್ನ ತೋಳನ್ನು ಸಡಿಲಿಸಿಕೊಂಡಳು. ಕ್ಷಣ ಹೊತು ಮೌನವಾಗಿದ್ದು, "ಬರತೇನೆ, ಅತ್ತೆಮ್ಮ, ನೀವು ಏಳಬೇಡಿ" ಎಂದಳು. ಆದರೂ ಗಂಗಮ್ಮ ಎದು, "ಓಗ್ಟನನ್ನಿ, ತಾಯಿ" ಎಂದು ಗದ್ದದಿತಳಾಗಿ ಅಂದಳು. ...ಗೌರಮ್ಮ ಮೇನೆಯ ಬಳಿಗೆ ನಡೆಯತೊಡಗಿದಾಗ ದೇವಮಾಜಿ ಕೇಳಿದಳು: “ಹಂಗೇ ಒರಡತೀಯಾ ಅತ್ತಿಗೆ?” "ಬಾಳ ಹೊತಾತು. ಇನ್ನೊಂದಾರ್ತಿ ಬರತೀನಿ." - "ಬಂದವರು ಸರಿಯಾಗಿ ನೋಡ್ಕಂಡಿಲ್ಲ, ಹಂಗೆ-ಹಿಂಗೆ ಅಂತ ಅಣ್ಣನಿಗೇನೂ ಹೇಳ ಬಾಡ, ಕಂಡೆಯಾ?" "ಹುಚ್ಚಿ! ಎಂಥೆಂಥಾ ಯೋಚನೆ ಮಾಡತೀಯಮ್ಮ." ಗೌರಮ್ಮ ಮೇನೆಯನ್ನು ಹೋಗುತ್ತಲಿದ್ದಂತೆ ಅವಳನ್ನು ಬೀಳ್ಕೊಡುವ ಔಪಚಾರಿಕ ಮಾತನಾಡಲು ಚನ್ನಬಸಪ್ಪನೂ ಅಲ್ಲಿಗೆ ಬಂದ. ನಂಜರಾಜಪಟ್ಟಣ ಕಾವೇರಿ ನದಿಯ ದಕ್ಷಿಣ ದಂಡೆಯಲ್ಲಿತು, ವೀರಪ್ಪಾಜಿಯೂ ಮಲ್ಲಪ್ಪಗೌಡನೂ ಉತ್ತರದಿಂದ ನದಿಯನ್ನು ಸಮಮಿಪಿಸುತ್ತಲಿದ್ದಂತೆ ಮಧ್ಯ ವಯಸ್ಕ ನಾದ ಒಬ್ಬ ಜಂಗಮನನ್ನು ಕಂಡರು. ವೀರಪ್ಪನೆಂದ: "ಇವರಕೂಡೆ ಮಾವ-ಅಳಿಯ ಸಂಬಂಧದ ಕಥೆ ಬೇಡ, ಮಲ್ಲಪ್ಪಣ್ಣ, ಆಗದಾ?” "ಹೆಂಗೂ ಪಟ್ಟಕ್ಕೆ ಬಂದದಾಯು, ಇನ್ನು ನಿಮ್ಮಿಷ್ಟ" ಎಂದು ಮಲ್ಲಪ್ಪ ಉತ್ತರ ವಿತ್ತ. ಜಂಗಮನೂ ನದಿಯ ಕಡೆಗೇ ಸಾಗಿದ್ದ, ದಾರಿಹೋಕರಿಬ್ಬರನ್ನು ನೋಡಿ ಅವನು ನಡಿಗೆಯನ್ನು ನಿಧಾನಗೊಳಿಸಿದ. ಇವರು ಹತ್ತಿರಬಂದಂತೆ ಜಂಗಮ ಕೇಳಿದ: "ಯಾವೂರಾಯು ?" ವೀರಪ್ಪ ಮಲ್ಲಪ್ಪರಿಬ್ಬರೂ ಆತನಿಗೆ ನಮಸ್ಕರಿಸಿದರು. "ಮಡಕೇರಿ ನಾಡಿನಿಂದ ಬರತಾ ಇದೀವಿ, ಅಯ್ಯನವರೆ" ಎಂದ ವೀರಪ್ಪ, "ಪಟ್ಟಕ್ಕೆ ಹೊಂಟಿದೀರೊ?" "ಹೌದು ಅಯ್ಯನವರೇ, ಶಿವಾಚಾರ್ಯಸಾಮಿಗಳ ದರ್ಶನಕ್ಕೇಂತ ಹೊಂಟಿದೀವಿ."

"ಸಂತೋಷ ಪಟ್ಟಕ್ಕೆ ಹೊಸಬರೊ?"