ಪುಟ:ಸ್ವಾಮಿ ಅಪರಂಪಾರ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಪಾರ

“ಹೌದರೀ" “ಈ ಪಟ್ಟದ ಐತಿಹ್ಯ ಗೊತ್ತಾ?” "ಚೂರುಪಾರು బలవి. ಅಯ್ಯನವರ బాణంుండా శ్వేట్టిJణలడా బెణ్మ అందే్మ్వుత్విచి." "ಶಿವ ಶಿವ ಶಿವ" ಎಂದ ಜಂಗಮ.. ನಿಮಿಷ ಮೌನದಿಂದಿದ್ದು ದಾರಿ ನಡೆಯುತ್ತ ಪಟ್ಟದ ಐತಿಹ್ಯವನ್ನು ಆತ ಹೇಳತೊಡಗಿದ. "ಸುಮಾರು ನೂರು ವರ್ಷಕ್ಕೆ ಹಿಂದೆ ಇಲ್ಲಿ ಪಟ್ಟನೇ ಇರಲಿಲ್ಲ, ಆಗ ಇದೊಂದು ಕುಗ್ರಾಮ. ಹೆಸರು ಹೊಳೆಸಾಲಳ್ಳಿ. ಅದು, ಹಾಲೇರಿ ವಂಶದ ಸಿರಿಬಾಯ ದೊಡ್ಡವೀರಪ್ಪ ಕೊಡಗನ್ನು ಆಳುತ್ತಲಿದ್ದ ಕಾಲ, ಆಗ ಮೈಸೂರು ಸಂಸ್ಥಾನದಲ್ಲಿ ಚಿಕ್ಕದೇವರಾಯ ಒಡೆಯ, ಇಕ್ಕೇರಿ ಸಂಸ್ಥಾನದಲ್ಲಿ ದೊಡ್ಡ ಚನ್ನಮಾಜಿ, ಸಾದೆ ಸಂಸ್ಥಾನದಲ್ಲಿ ಸದಾಶಿವರಾಜ, ಬೇಲೂರು ಸಂಸ್ಥಾನದಲ್ಲಿ ವೆಂಕಟಾದ್ರಿನಾಯಕ, ಚೆರಕಾಲ ಸಂಸ್ಥಾನದಲ್ಲಿ విలరావాచామFరాజ ರಾಜ್ಯಭಾರ ಮಾಡು. ತ್ತಿದ್ದರು. ಪೆರಿಯಾಪಟ್ಟಣ ಪ್ರದೇಶವನ್ನು ಆಗ ದೊಡ್ಡವೀರಪ್ಪನ ಸಂಬಂಧಿಕನಾದ ನಂಜುಂಡ ಅರಸು ಆಳುತ್ತಿದ್ದ .. ಅವನ ಚಾಕರ ಜನ ಕೆಲವರು, "ಫವುಜು ಕಳುಹಿಸಿಕೊಟ!ರೆ ಈ ಕೋಟೆ ನಿಮ್ಮ ಕೈವಶಮಾಡಿಕೊಡುತ್ತೇವೆ" ಎಂದು ಮೈಸೂರಿನ ದೊರೆಯೊಡನೆ 'ಚದಿ ಸಂಧಾನ' ನಡೆಸಿದರು. ಚಿಕ್ಕದೇವರಾಯ ಆ ಕೋಟೆಯನ್ನೂ ಸುತ್ತಲಿನ ಸೀಮೆಯನ್ನೂ ಗೆಲ್ಲಲು ಸಿದ್ಧನಾದ. ಇದು ತಿಳಿದು ನಂಜುಂಡರಸನು ಚಿಂತೆಗೀಡಾದ, ಮಡಕೇರಿಗೆ ಹೋಗಿ ಸಹಾಯ ಪಡೆಯೋಣವೆಂದು, ಪೆರಿಯಾಪಟ್ಟಣದಲ್ಲಿ ತನ್ನ ಮಗ ವೀರರಾಜನನ್ನು'ಮಡಗಿ' ಪ್ರಯಾಣ ಹೊರಟ. ಈ ವಾಲ್ಲೆಯನ್ನು ತಿಳಿದ ಚಿಕ್ಕದೇವರಾಯ ಅವಸರ ಅವಸರವಾಗಿ ಪೆರಿಯಾ ಪಟ್ಟಣಕ್ಕೆ ಸೇನೆಯನ್ನೊಯು ಮುತ್ತಿಗೆ ಹಾಕಿದ, ದೊಡ್ಡವೀರಪ್ಪ ಸಿದ್ದೇಶ್ವರ ಬೆಟ್ಟವನ್ನು ತಲಪುವ ವೇಳೆಗಾಗಲೇ ಪೆರಿಯಾಪಟ್ಟಣದಲ್ಲಿ ನಿಕರದ ಕಾಳಗ ನಡೆದಿತು, ಕಿರಿಯವನಾದ ವೀರರಾಜ, ಶರಣಾಗತಿಗಿಂತ ವೀರ ಮೃತು ಮೇಲೆಂದು, ತನ್ನ ಕುಟುಂಬವನ್ನೆಲ್ಲ ಕೈಯಾರೆ ಕೊಂದು, ತಾನೂ ಹೋರಾಡುತ್ತ ಮಡಿದ. ಇದನ್ನು ಕೇಳಿದ ದೊಡ್ಡವೀರಪ್ಪ, "ದುಡುಕಿದ ರಾಗದು. ಇನ್ನು ಮೈಸೂರವರು ಬಡಾಯಿಸಿ ಕೊಡಗಿನ ಸೀಮೆಯೊಳಕ್ಕೆ ನುಗ್ಗಿ ಬಂದಾರು" ಎಂದು, ಎಲ್ಲೆಗಟ್ಟಿನ ಬಂದೋಬಸ್ತನ್ನಷ್ಟು ಮಾಡಿ, ಮಡಕೇರಿಗೆ ಹಿಂತಿರುಗಿದ. ಅಲ್ಲಿದ್ದ ನಂಜುಂಡರಸ, ನಡೆದ ವೃತಾಂತವನ್ನೆಲ್ಲ ತಿಳಿದಾಗ ಅಪಾರ ವ್ಯಥೆಗೆ ಗುರಿ ಯಾದ. | ಆಗ ದೊಡ್ಡವೀರಪ್ಪ, "ನಿಮ್ಮ ಕುಮಾರರು ತೀರಿಹೋದಾಗ್ಯೂ, ಆ ಮೈಸೂರವರು ಮಾಡಿದ್ದಕ್ಕೆ ಪ್ರತಿ ಜವಾಬು ಕೊಡುವ ಬಗ್ಗೆ ನಿಮ್ಮ ಅಣ್ಣನ ಮಗನಾಗಿ ನಾವು ಹಾಜರು ಇದ್ದೇವೆ. ಇದರಮೇಲೆ ನಮ್ಮ ಅರಮನೆಯಲ್ಲು ಇರುವಂತಹ ಚಿಕ್ಕವರು ದೊಡ್ಡವರು ಸಹ ತಮ್ಮ ಮಕ್ಕಳೋಪಾದಿಯಲ್ಲಿ ಇದ್ದಾರೆ. ತಾವು ಎಲ್ಲಾ ಬಗೆಯಲ್ಲು ನಿಶ್ಚಿಂತರಾಗಿ ಇರಬೇಕು" ಎಂದು ಸಂತೈಸುವ ಮಾತನಾಡಿದ. ಅದಕ್ಕೆ ನಂಜುಂಡರಸನೆಂದ: