ಪುಟ:ಸ್ವಾಮಿ ಅಪರಂಪಾರ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಮ್ಮಿ ಅಪರ೦ಪಾರ

"ಮುಪ್ಪಿನ ವೇಳೆಯಲ್ಲಿ ನೋಡಬಾರದಂಥಾ ಅವಸ್ಥೆ ಮಹಾದೇವನು ತೋರಿಸಿದ. ನಾವಿನ್ನು ಈ ಲೋಕದ ಆಸೆ ತೊರೆದು ಶಿವಧಾನ ಮಾಡಿಕೊಂಡು ಇರತೇವೆ. ನಮ್ಮ ಕೈಯಿಂದ ಬಿಟ್ಟುಹೋದಂಥ ಸೀಮೆಯನ್ನು ನೀವು ಸಾಧಿಸಿಕೊಳ್ಳಬೇಕು. ನಮ್ಮ ಆಯುಷ್ಯ ತೀರುವ ಪರಿಯಂತ ಇರುವ ಬಗ್ಗೆ ಒಂದು ಮನೆ, ನಮ್ಮ ಮನೆ ದೇವರಾದ ವೀರಭದ್ರ ದೇವರಿಗೆ ಒಂದು ದೇವಸ್ಥಾನ ಸಹ, ಕಟ್ಟಿಸಿಕೊಡಬೇಕು. ಇದಲ್ಲದೆ ನಮ್ಮ ಹೆಸರಲ್ಲಿ ಒಂದು ಲಿಂಗಪ್ರತಿಷ್ಮೆ ಮಾಡಬೇಕು ಎಂಬುದಾಗಿ ನಮ್ಮ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಕಾವೇರಿ ಹೊಳೆಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಅದರಲ್ಲಿ ನಮ್ಮ ಹೆಸರಿಂದ ಲಿಂಗಪ್ರತಿಷ್ಟೆ ಮಾಡಿಸಿ, ನಮ್ಮ ಆಯುಷ್ಯ ತೀರಿದಮೇಲೆ ಆ ದೇವಸ್ಥಾನದ ಮುಂದೆ ನಮ್ಮ ಸಮಾಧಿ ಮಾಡಿ ಅದರ ಮೇಲೆ ಕಲ್ಲುಮಂಟಪ ಕಟ್ಟಿಸಿ ಅದರ ಒಳಗೆ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಬೇಕು."


ಕತೆ ಹೇಳುತ್ತಲಿದ್ದ ಜಂಗಮ, ಶ್ರೋತೃಗಳಾಗಿದ್ದ ವೀರಪ್ಪ ಮತು ಮಲ್ಲಪ್ಪ, ಆಗಲೇ ಕಾವೇರಿಯ ದಂಡೆಯನ್ನು ತಲಪಿದ್ದರು. ಮೇಲುಗಡೆಯೆಲ್ಲ ಕುಣಿಯುತ್ತ ಕುಪ್ಪಳಿಸುತ್ತ ಕಾವೇರಿ ಬಂದಿದ್ದರೂ ಅಲ್ಲಿ ಸ್ವಲ್ಪ ದೂರದ ತನಕ ಆಕೆ ಶಾಂತವಾಗಿ ಹರಿಯುತ್ತಿದ್ದಳು. ಜಂಗಮನೆಂದ : "ಇಳೀರಿ. ಇಲ್ಲೆಲಾ ಮೊಣಕಾಲಮಟ ನೀರು.. ನಾವೆಲಾ ಪಾಪಿಗಳೇ! ಇದನ್ನು ದಾಟಿ ಆ ಕಡೆಗೆ ಹೋದಮಾಲೆ ದೇವರ, ಸ್ವಾಮಿಗಳ, ದರ್ಶನವಾಗತದೆ." ಅವರೆಲ್ಲ ನದಿಗಿಳಿದು ದಾಟತೊಡಗಿದಂತೆ, ಜಂಗಮ ಕತೆ ಮುಂದುವರಿಸಿದ : "ಮುಂದೇನಾಯು ಅಂದರೆ...

ನಂಜುಂಡರಸನಿಗೆ ಒಪ್ಪಿಗೆಯಾದ ಹೊಳೆಸಾಲಳ್ಳಿಯಲ್ಲಿ ದೊಡ್ಡವೀರಪ್ಪ ಒಡೆಯ ಒಂದು ಅರಮನೆಯನ್ನು ಕಟ್ಟಿಸಿ, ಅದರ ಸುತ್ತ ಕಂದಕ ತೆಗೆಸಿದ. ನಂಜುಂಡರಸ ಅಲ್ಲಿ ವಾಸಿಸುವಂತೆ ಮಾಡಿ, ಆ ಊರಿಗೆ ನಂಜುಂಡರಾಜಪಟ್ಟಣ ಎಂದು ಹೆಸರಿಟ್ಟ, ಅರಸನ ಮೈಗಾವಲಿಗೆ ಏಳುನೂರ ಜನ ಕೊಡಗರನ್ನು ನೇಮಿಸಿದ, ಹೇರಳ ದ್ರವ್ಯ ವೆಚ್ಚಮಾಡಿ ವೀರಭದ್ರ ದೇವಸ್ಥಾನವನ್ನು ಕಟ್ಟಿಸಿದ. ಇನ್ನೊಂದು ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ, ಅದರಲ್ಲಿ ಲಿಂಗಪ್ರತಿಷ್ಮೆಮಾಡಿ, ಅದನ್ನು ನಂಜುಂಡೇಶ್ವರ ಎಂದು ಕರೆದ. ಕೆಲ ದಿನಗಳಮೇಲೆ ನಂಜುಂಡರಸನು ಶಿವಾಧೀನನಾದ. ದೊಡ್ಡವೀರಪ್ಪ ಆ ದೇವ ಸ್ಥಾನದ ಮುಂದೆ ಸಮಾಧಿಮಾಡಿಸಿ, ಅದರ ಮೇಲೆ ಕಲ್ಲುಮಂಟಪವನ್ನು ಕಟ್ಟಿಸಿ, ಒಳಗೆ ದೊಡ್ಡದಾಗಿ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಿ, ದೇವಸ್ಥಾನದ ವೆಚ್ಚದ ಬಗ್ಗೆ ಆಚಂದ್ರಾರ್ಕಪಠ್ಯಂತ ಧರ್ಮ ನಡೆಯುವುದಕ್ಕೋಸ್ಕರ ಕೆಲ ಭೂಮಿಯನ್ನು 'ಉತ್ತಾರು' ಬಿಟ್ಟ : ದೇವಾಲಯಗಳ ಮೇಲ್ವಿಚಾರಣೆಗಾಗಿ ಅರಸ ಸ್ವಾಮಿಗಳೊಬ್ಬರನ್ನ ನೇಮಿಸಿದ.

- ಆ ಮೂವರೂ ನದಿಯನಾಗಲೇ ದಾಟಿದ್ದರು.

ಜಂಗಮನೆಂದ :