ಪುಟ:ಸ್ವಾಮಿ ಅಪರಂಪಾರ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಮ್ಮಿ ಅಪರಮಪಾರ

"ಇದಿಷ್ಟು ಸ್ವಾಮಿಗಳು ಮೂರನೆಯವರು. ಇಲ್ಲಿ ಕರ ಪಾದ ಮುಖ ಇಷ್ಟು ತೊಳೆದು ಮೇಲಕ್ಕೆ ಹೋಗೋಣ." "ಆಗಲಿ, ಅಯ್ಯನವರೆ" ಎಂದ ವೀರಪ್ಪ, ಅಂಗೈಯಿಂದ ನೀರನ್ನೆತ್ತಿ ಮುಖಕ್ಕೆ ಅಪ್ಪಳಿಸುತ್ತ, "ಮೈ ತೊಳೀಬಹುದು, ಮನಸ್ಸು. ತೊಳಿಯೋದು ಕಷ್ಟ, ಅಲ್ಲವೇನಯಾ?” ಎಂದು ಹೇಳಿ ಜಂಗಮ ನಗೆಯಾಡಿದ. ಮೂವರೂ ಪಾವಟಿಗೆಗಳನ್ನೇರಿದರು. ಪಶ್ಚಿಮದ ಗುಡ್ಡದಾಚೆಗೆ ಸುರ್ಯನಾಗಲೇ ಮರೆಯಾಗಿದ್ಶ . ಎತ್ತರದಲ್ಲಿ ನಿಂತು ಜಂಗಮನೆಂದ: "ಅಕಾ, ಅಲ್ಲಿ ಕಾಣಿರೊದು ನಂಜುಂಡೇಶ್ವರ ದೇವಾಲಯ. ಅದರ ಎದುರಿಗಿದ್ಯಲಾ ಬಸವೇಶ್ವರ ಮಂಟಪ, ಈ ಕಡೆಗಿರೋದು ವೀರಭದ್ರ ದೇವಾಲಯ. ಅರಮನೆ ಯಾವುದು ಅಂತೀರಾ? ತಿರುಪೆಯವನ ದೃಷ್ಟಿ ಗುರುಮನೆ ಕಡೆಗೇ ಜಾಸ್ತಿ, ಹುಂ, ಬಲಕ್ಕೆ ಆ ಕಡೆ ಗಿದೆಯಲಾ ಅದೇ ಅರಮನೆ. ಈಗ ತುಸು ಪಾಳು ಬಿದ್ದದೆ." ಮೂರು ಬೇರೆ ಬೇರೆ ಘಂಟೆಗಳಿಂದ ನಿನಾದ ಕೇಳಿಸತೊಡಗಿತು. ಸಂಜೆಯ ಗಾಳಿಯಲ್ಲಿ ಅಲೆಯಲೆಯಾಗಿ ಬಂದು, ಕಾವೇರಿ ನದಿಯನ್ನು ದಾಟಿ, ಅದು ಉತ್ತರಕ್ಕೆ ಹೋಯಿತು. ಜಂಗಮನೆಂದ "ಬಿದ್ರನೆ ಬನ್ನಿ, ಈಗ ಪೂಜಾ ಸಮಯ." ಪಟ್ಟಣದ ಐತಿಹ್ಯವನ್ನು ಹೇಳಿದ ಜಂಗಮ, ಶಿವಾಚಾರ್ಯಸ್ವಾಮಿಗಳ ಪರಿವಾರದವನೇ ಆಗಿದ್ದ. ಆತನೆಂದ: "ಅರ್ಚಕರ ಕೆಲಸ ಮುಗಿಯಲಿ. ಈ ಭಕಾದಿಗಳು ಪ್ರಸಾದ ತಗೊಂಡು ಭುಕಾದಿ ಗಳಾಗತಾರಲ್ಲ, ಆಗ ನೀವೂ ಕೈಯೊಡ್ಡಿ! ಅದಾದಮೇಲೆ ಗುರುಸನ್ನಿಧಿಗೆ ನಿಮ್ಮನ್ನ ಕರ ಕೊಂಡು ಹೋಗತೇನೆ." ಪೂಜಾಕ್ರಮಗಳು ಮುಗಿಯಲು ಎರಡು ಘಳಿಗೆ ಹಿಡಿಯಿತು. ಕಡಾಯಿಗಳಲ್ಲಿ ಪ್ರಸಾದ ಸಿದ್ಧವಾಗಿತು, ಅದಕ್ಕೆ ಸ್ವಾಮಿಗಳು ಪ್ರೋಕ್ಷಾಳನ ಮಾಡಿ ದರು. ನನೂರಾರು ಜನರಿಗೆ ವಿತರಣೆ ಆರಂಭವಾಯಿತು. ವೀರಪ್ಪ-ಮಲ್ಲಪ್ಪರನ್ನು ಹುಡುಕಿಕೊಂಡು ಜಂಗಮ ಬಂದ: "ಪ್ರಸಾದ ಮುಟ್ಟಿತಾ? ಬೇಗ ಭುಜಿಸಿ, ಮಠದಲ್ಲಿ ಜನ ಸೇರೋದಕ್ಕೆ ಮುಂಚೆ ಸ್ವಾಮಿಗಳ ಹತ್ತಿರಕ್ಕೆ ನಿಮ್ಮನ್ನ ಒಯುತೇನೆ." ...ಕೆಲವೇ ನಿಮಿಷಗಳಲ್ಲಿ ಈ ಮೂವರೂ ಮಠದ ಕಡೆಗೆ ನಡೆದರು. ತಾಳೆಯ ಗರಿ ಗಳನ್ನು ಜೋಡಿಸಿ ಇಡುತ್ತಲಿದ್ದ ಸ್ವಾಮಿಗಳಿಗೆ ಇವರು ಉದ್ದಂಡ ಪ್ರಣಾಮ ಮಾಡಿದರು. ತೂಗು ಕಂದೀಲುಗಳ ಬೆಳಕಿನಲ್ಲಿ, ತೇಜಃಪುಂಜವಾದ ಅವರ ಮುಖವನ್ನು ವೀರಪಾಜಿ ಕಂಡ ವೃದ್ದರು. ಆದರೂ ಹತು ಹನ್ನೆರಡು ವರ್ಷಗಳಿಗೆ ಹಿಂದೆ ಅವರನ್ನು ನೋಡಿ ದಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಂತೆ ವೀರಪ್ಪನಿಗೆ ಕಂಡಿತು.