ಪುಟ:ಸ್ವಾಮಿ ಅಪರಂಪಾರ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಸ್ವಾಮಿ ಅಪರಂಪಾರ

೫೫

ಅಂಗೈ ಆಡಿಸಿ ಆಶೀರ್ವದಿಸುತ ಸ್ವಾಮಿಗಳು, “ಸಂಜೆಗೆ ಬಂದೆಯಾ ಸಿದ್ದಲಿಂಗ ?”
ಎಂದು ಕೇಳಿದರು.
ಜಂಗಮ ಎದ್ದು ನಿಂತು “ಹೂಂ. ಗುರುಗಳೆ” ಎಂದ.
“ಇವರು ?”
“ತಮ್ಮ ದರ್ಶನಕ್ಕೆ ಬರತಾ ಇದ್ದರು. ದಾರಿಯಲ್ಲಿ ಸಿಕ್ಕರು.”
ಸ್ವಾಮಿಗಳ ಕೈ ಸೂಚನೆಯಂತೆ ವೀರಪ್ಪನೂ ಮಲ್ಲಪ್ಪನೂ ಕುಳಿತುಕೊಂಡರು. ಸಿದ್ದಲಿಂಗನೆಂದ: “ಮಡಕೇರಿ ಕಡೆಯಿಂದ ಬಂದಿದಾರೆ.” ವೀರಪ್ಪಾಜಿ ನುಡಿದ : “ನಾನು ವೀರಪ್ಪ: ಈತ ಮಲ್ಲಪ್ಪ.” ಸ್ವಾಮಿಗಳು ಹೇಳಿದರು: “ರೈತವಾರಿ ಮಾಡತಿದೀರಾ ?” “ಇವನು ರೈತ, ಜಮ್ಮ ಕೊಡವ.” “ನೀನು ?”
“ನನ್ನ ಮನೆಗೆ ತಾವೊಮ್ಮೆ ದಾಸೋಹಕ್ಕೆ ಬಂದಿದ್ರಿ. ನಮ್ಮ ತಂದೆ ಪಾದಪೂಜೆ
ಮಾಡಿದ್ರು.”{
“ಹೌದೆ ? ಯಾವೂರಲ್ಲಿ ?”
“ಅಪ್ಪಂಗಳದಲ್ಲಿ.”
“ಅಪ್ಪಂಗಳ !”
ಸ್ವಾಮಿಗಳ ಕಣ್ಣುಗಳು ಪ್ರಭಾಯುತವಾದುವು. ಅವರೆಂದರು :
“ನೀನು ವೀರಪ್ಪಾಜಿ, ಅಲ್ಲವಾ ? ರಾಜೇಂದ್ರನಾಮ ಬರಸೋದಕ್ಕಿಂತ ನಿಮ್ಮ
ದೊಡ್ಡಪ್ಪ ಕರೆಸ್ಕೊಂಡಿದ್ರು. ಆಗ ಅಪ್ಪಂಗಳಕ್ಕೂ ಬಂದಿದ್ವಿ. ನೀನು ಆಗ ಎಂಟು
ಹತ್ತರ ಹುಡುಗನಾಗಿದ್ದೆ ಅನಿಸುತ್ತೆ. ನಿನ್ನ ತಮ್ಮ ಒಬ್ಬ ಇದ್ದ, ಅಲ್ಲವಾ ?”
“ಅವನು ತೀರಿಕೊಂಡ, ಸ್ವಾಮಿಗಳೇ.”
ಸಿದ್ಧಲಿಂಗ ಥಟ್ಟನೆದ್ದು ವೀರಪ್ಪನ ಬಳಿ ಸಾರಿ, ಕಣ್ಣುಗಳನ್ನು ಅಗಲಿಸಿ ಅವನನ್ನು
ನೋಡತೊಡಗಿದ.
“ಮರುಳೆ, ಅದೇನು ಹಾಗೆ ನೊಡತಿದೀಯಾ ?” ಎಂದು ಕೇಳಿದರು ಸ್ವಾಮಿಗಳು.
ಸಿದ್ದಲಿಂಗ ಗೋಗರೆದ:
“ಗುರುಗಳೇ ! ಇದೊಳ್ಳೇ ಪೇಚಾಟವಾಯ್ತಲ್ಲ !”
“ಏನಯಾ ಅದು ?”
“ನಾನು ಬರುತ್ತಾ ಭಾರೀ ಸುದ್ದಿ ತಂದಿದ್ದೆ. ಪರಿವಾರ ಸೇರಿದಾಗ ಎಲ್ಲರ ಮುಂದೆ
ತಮಗೆ ಅದನ್ನ ತಿಳಿಸಬೇಕು ಅಂತ ಇದ್ದೆ. ಇದೇನಾಗೋಯ್ತು !”
“ಏನು ಸುದ್ದಿ ?”

“ಗುರುಪಾದಕ್ಕೆ ಮೊದಲೇ ಅರಿಕೆ ಮಾಡತೀನಿ, ನನ್ನ ಮುಂದೆ ಒಂದು ಸಮಸ್ಯೆ
ಹೆಡೆ ಎತ್ತುತಾ ಅದೆ. ಅದು ಬಗೆ ಹರೀತೋ ನಾ ಬದುಕಿದೆ. ಇಲ್ಲದೇ ಹೋದರೆ