ಸ್ವಾಮಿ ಅಪರಂಪಾರ ಸಿದ್ಧಲಿಂಗನಿಗೆ ಹುಚ್ಚು ಹಿಡೀತದೆ.” ಚ “ಶಿವಮರುಳಿಗಿಂತಲೂ ಮಿಗಿಲಾದ ಹುಚ್ಚು ಅದ್ಯಾವುದೋ ಸಿದ್ಧಲಿಂಗ ? ಏನೋ ಕಥೆ ?” “ಅಪ್ಪಾಜಿ ಅರಸನ ಮಕ್ಕಳು ಮಾರಿ ಬೇನೆಗೆ ತುತ್ತಾದರೂಂತ ಮಹಾರಾಜರೇ ಖುದ್ದಾಗಿ ಸ್ವಲ್ಪ ಸಮಯದ ಹಿಂದೆ ನೆರೆದ ಸಭೆಯಲ್ಲಿ ಅಪ್ಪಣೆ ಕೊಡಿಸಿದರಂತೆ. ಊರಿಗೆ ಹೋಗತಿದ್ದ ಒಬ್ಬ ತಕ್ಕ ಸಿಕ್ಕ. ಆತ ಹೇಳಿದ.” ಸ್ವಾಮಿಗಳು ಮಾತನಾಡಲಿಲ್ಲ. ಯೋಚನಾಪರರಾದಂತೆ ಕಂಡಿತು. ಕ್ಷಣಕಾಲ ಸುಮ್ಮ ನಿದ್ದು, ವೀರಪ್ಪನೆಡೆಗೆ ಅವರು ದೃಷ್ಟಿ ಹೊರಳಿಸಿದರು. ವೀರಪ್ಪ ಅರಿಕೆ ಮಾಡಿದ : “ಜಂಗಮರ ಮಾತು ಒಂದು ರೀತಿಯಲ್ಲಿ ನಿಜ, ಸ್ವಾಮಿಗಳೆ, ಮಾರಿಬೇನೆ ಅನ್ನಲಾರೆ. ಅಂಥದೇ ಬೇರೊಂದು ಬೇನೆ. ನಾನೂ ತಮ್ಮನೂ ಸತ್ತೆವು” ಸಿದ್ಧಲಿಂಗ ಪಿಸುದನಿಯಲ್ಲಿ ಪ್ರಲಾಪಿಸಿದ : “ನಾ ಹೇಳಲಿಲ್ಲವಾ ಸ್ವಾಮಿಗಳೆ ? ಈಗ ಕಾಪಾಡಿ ! ಓ ಗಣನಾಥಾ ! ಶಂಭೋ !” ಸ್ವಾಮಿಗಳು ಗದರಿದರು : “ಶ್ ! ಸುಮ್ಮನಾಗು.” ವೀರಪ್ಪ ಮುಂದುವರಿಸಿದ : “ಶವಗಳನ್ನ ಹೊರ ಹಾಕಿದ್ರು. ನನ್ನೊಬ್ಬನ ದೇಹದ ಕಾವು ಆರಿರಲಿಲ್ಲ. ಒಬ್ಬ ಈ ಮನುಷ್ಯನ ಮನೆಗೆ ನನ್ನನ್ನು ಒಯ್ದು ಮುಟ್ಟಿಸಿದ. ಅಲ್ಲಿ ನಾನು ಪುನರ್ಜನ್ಮ ಪಡೆದೆ, ಅಲ್ಲಿಗೇ ಮುಗಿದುಹೋಗಿದ್ದರೆ ಚೆನ್ನಾಗಿತ್ತು. ಆದರೆ ನನ್ನ ಪಾಪದ ಹೊರೆ ದೊಡ್ಡದು ಅನಿಸತದೆ. ಇನ್ನೂ ಉಳಿದಿದೀನಿ. ಓಂ ಅಂತ ಮತ್ತೆ ಶುರುವಾಗತಾ ಇದೆ.” ಸಿದ್ಧಲಿಂಗ ದಂಗುಬಡಿದವನಂತೆ ಬಿಟ್ಟ ಕಣ್ಣುಗಳನ್ನು ಮುಚ್ಚದೆ ಕುಳಿತ. ಅವನತಶಿರ ರಾಗಿ ಕಣ್ಣು ಮುಚ್ಚಿ ಕೆಲ ಕ್ಷಣಗಳನ್ನು ಸ್ವಾಮಿಗಳು ಕಳೆದರು. ಬಳಿಕ ಮೆಲ್ಲನೆ ತಲೆಯೆತ್ತಿ ವೀರಪ್ಪನನ್ನು ನೋಡುತ್ತ ಅವರೆಂದರು : “ಇದೆಲ್ಲ ಮಹಾದೇವನ ಮಾಯೆ, ವೀರಪ್ಪಾಜಿ. ಆಯುಸ್ಸು ತೀರುವವರೆಗೂ ಭೂಮಿಯ ಮೇಲಿರು ಎನ್ನು ತಾನೆ. ಮುಗಿದಾಗ ತನ್ನ ಪಾದಕ್ಕೆ ಕರೆಸಿಕೊತಾನೆ... ಅರಸೊತ್ತಿಗೆಯ ಮೇಲೆ ನಿನಗೆ ಆಸೆಯೆ ಮಗು ?” ವೀರಪ್ಪ ಮೆಲ್ಲಮೆಲ್ಲನೆ ಅಂದ : “ಗುರುವೆ, ಕರಿಯನಿತ್ತೊಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ. ಹಿರಿದಪ್ಪ ರಾಜ್ಯವನಿ ತೊಡೆ ಒಲ್ಲೆ...” “ಯಾಕೆ ಈ ವಿರಕ್ತಿ, ಮಗು ? ನಿನ್ನ ಹೆಂಡತಿ " “ನನಗೆ ಯಾರೂ ಇಲ್ಲ. ಗತಜನ್ಮದಲ್ಲಿ ಒಬ್ಬಳು ಕೂಸಿನ ಕೈ ಹಿಡಿದಿದ್ದೆ. ಬೇರೇನೂ ನನಗೆ ತಿಳೀದು. ಈಗನಕ ಯಾವ ಮಾಯೆಯೂ ಇಲ್ಲ.” “ವಯಸ್ಸಿಗೆ ಹಿರಿದಾದ ಮಾತು, ಏನಾಗಬೇಕು ಅಂತೀಯ ನೀನು ?” “ಶಿವಭಕ್ತನಾಗಬೇಕು. ತಮ್ಮ ಸೇವೆಯಲ್ಲಿ ಜೀವ ಸವೆಸಬೇಕು ಅಂತ ಮನಸು ಹೇಳತಾ ಅದೆ."
ಪುಟ:ಸ್ವಾಮಿ ಅಪರಂಪಾರ.pdf/೫೮
ಗೋಚರ