ಪುಟ:ಸ್ವಾಮಿ ಅಪರಂಪಾರ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾಮಿ ಅಪರ೦ಪಾರ 舒& "ಅದಕ್ಕೆ ಇಲ್ಲಿರಬೇಕಾ ನೀನು? ಯಾರು ಭಕ್ತನಲ್ಲ? ಅರಸನೂ ಶಿವಭಕ್ತನೇ, ಆಳೂ ಶಿವಭಕ್ತನೇ.” “ಇಹದ ಮೋಹ ನನಗಿಲ್ಲ, ಸಾಮಿಗಳೆ, ಗುರುವನ್ನರಸಿ ಬಂದಿದೇನೆ." "ತನ್ನ ತಾನರಿದವಂಗೆ ಅರಿವೆ ಗುರು, ಮಗು. ಇಲ್ಲಿ ನಿನಗೆ ಸಾನವಿಲ್ಲ." –ಹಾಗೆ ದೃಢ ಸ್ವರದಲ್ಲಿ ಸ್ವಾಮಿಗಳೆಂದರು. ಒಂದು ಕ್ಷಣ ಕಣ್ಣ ಮುಚ್ಚಿದು ವೀರಪ್ಪನೆಂದ: "ಬಟ್ಟೆಯಲ್ಲಿ ಹೋಗುತ್ತಿಪ್ಪ ಮನುಜನೊಬ್ಬನು ಹುಲಿ, ಕಾಡುಗಿಚ್ಚು, ರಕಸಿ, ಕಾಡಾನೆ ಗಳು ನಾಲ್ಕು ದಿಕ್ಕಿನಲ್ಲಿ ಅಟ್ಟಿ ಬರುತ್ತಿರಲು, ಅವರ ಕಂಡು ಭಯದಿಂದ, ಹೋಗಲು ದಿಕು ತೋರದೆ, ಹಾಳುಬಾವಿಯಂ ಕಂಡು ತಲೆಯದೂರಿ ಬೀಳುವಲ್ಲಿ ಹಾವ ಕಂಡು ಬೀಳ ಲಮ್ಮದೆ ಇಲಿ ಕಡಿದ ಬಳ್ಳಿಯಂ ಹಿಡಿದು ನಿಲ್ಲಲು, ಜೇನು ಹುಳು ಮೈನೂರುವಾಗ చేుJగినె లేుదియులందాయ యోని చెుధానిచిందోు బిళిలాగి, ఆ చుధాుచెం రేcడా) &ురి ದಪ್ಪ ದುಃಖವನೆಲ್ಲ ಸೈರಿಸಿ ನಾಲಿಗೆಯಲ್ಲಿ ಆ ಮಧುವ ಸೇವಿಸುವಂತೆ ಈ ಸಂಸಾರ ಸುಖವ ವಿಚಾರಿಸಿ ನೋಡಿದರೆ, ದುಃಖದಾಗರವು..." ಸ್ವಾಮಿಗಳು ವಿಸ್ಮಿತರಾದರು. ತನ್ಮಯತೆಯಿಂದ ವೀರಪ್ಪ ಆಡುತ್ತಿದ್ದ ಮಾತುಗಳು ಅವರನ್ನು ಯೋಚನಾಪರರನಾಗಿ ಮಾಡಿದುವು, ವೀರಪ್ಪನೇ ಮುಂದುವರೆಸಿದ: "ಇಲ್ಲಿ ಸ್ವಾನವಿಲ್ಲ ಅಂದಿರಿ. ಆಗ್ರಹ ತೊಡೆ.. ದೀಕ್ಷೆಕೊಟ್ಟ ನಾಲ್ಕು ದಿನ ಪಾದದ ಬಳಿ ಇಟಕೊಳ್ಳಿ, ಮುಂದೆ ತಿರುಪೆ ಎತುತಾ ದೇಶಾಟನ ಹೊರಡುವೆ." "ನೋಡೋಣ ಮುಗದೂ, ಈತನೋ ?" ಮಲ್ಲಪ್ಪ ಗಂಟಲು ಸರಿಸಿಕೊಂಡು ಕೈಜೋಡಿಸಿ ಅಂದ : "ನನ್ನ ಕೆಲಸ ಮುಗಿಯಿತು. ವೀರಪಾಜಿಯವರಿಗೆ ಅಭಯ ಹಸ್ತ ಕೊಟ್ಟಿರಿ. ನಾಳೆ ನಾ ಮಡಕೇರಿಗೆ ಒರಡತೀನಿ." - ಭಕಾದಿಗಳು ಬರತೊಡಗಿದುದನ್ನು ನೋಡಿ, ಸಾಮಿಗಳೆಂದರು : "ಒಳ್ಳೆದು.. ಸಿದ್ದಲಿಂಗ, ಇಲ್ಲಿ ನಡೆದ ಮಾತುಕತೆ ನೀ ಕೇಳಿಲ್ಲ. ನೆನಪಿನಾಗಿರಲಿ.” ಅರ್ಥವಾಯಿತೆನ್ನುವಂತೆ ಸಿದ್ದಲಿಂಗ ಗೋಣಾಡಿಸುತ್ತ ನುಡಿದ: "ಶಿವ ಶಿವಾ! ಬಾಯಿಬಿಟ್ಟೆನಾ?"

Q& ಪ್ರಸಾದ ಸ್ವೀಕಾರದ ಬಳಿಕ ಭಕಾದಿಗಳು ಒಂದೆರಡು ಘಳಿಗೆ ಶಿವಾಚಾರ್ಯ ಸ್ವಾಮಿಗಳ ಸುತ್ತಲೂ ಕುಳಿತಿದು ಅವರ ವಿವೇಕವಾಣಿಗೆ ಕಿವಿಗೊಟ್ಟ ಚೆದರುವುದು ನಿತ್ಯದ ಪದ್ಧತಿ. ಆ ಭಕ್ತರಲ್ಲಿ ವಿರಕ್ತರಿದ್ದರು, ಸಂಸಾರಿಗಳಿದ್ದರು. ಪ್ರವಚನ, ಷಟ್ ಸ್ಥಲ ಮಹಿಮೆಯ ವರ್ಣನೆ, ಯಾವನಾದರೂ ಶಿಷ್ಯನಿಂದ ಶಿವಕಥೆ, ವಚನಗಳ ಪಠನ-ಏನಾದರೊಂದು ದಿನವೂ ನಡೆಯುತ್ತಿತು. ಒಮ್ಮೊಮ್ಮೆ ಪುರಾಣೇತಿಹಾಸಗಳ ಮಾತುಗಳನ್ನು ಸಾಮಿಗಳು ಆಡುತ್ತಿದ್ದರು. ಇಲ್ಲವೆ, ಭಕಾದಿಗಳ ಸುಖದುಃಖಗಳನ್ನು ವಿಚಾರಿಸಿ ಹಿತೋಪದೇಶ ನೀಡುತ್ತಿದ್ದರು. -