ಪುಟ:ಸ್ವಾಮಿ ಅಪರಂಪಾರ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೫೮

ಸ್ವಾಮಿ ಅಪರಂಪಾರ

Hළු ಸ್ವಾಮಿ అవారంవారె ಈ ರಾತ್ರೆ, ತಮ್ಮ ಪಟ್ಟದ ಶಿಷ್ಯನನ್ನುದ್ದೇಶಿಸಿ ಶಿವಾಚಾರ್ಯಸ್ವಾಮಿಗಳೆಂದರು : “ಷಡಕ್ಷರಿ, ಕೊಡಗಿನಲ್ಲಿ ವೀರಶೈವ ರಾಜವಂಶ ಸ್ಥಾಪನೆಯಾದ ಕಥೆ ಇವತು ಹೇಳ జలకు ఆనిస్త్రిది.” - ** ಷಡಕ್ಷರಿಯೆಂದ: “ಸ್ವಾಮಿಗಳ ಚಿತ್ರ." ಶ್ರೋತೃಗಳನ್ನುದ್ದೇಶಿಸಿ ಅವರೆಂದರು : "ಮರುಳರಿರಾ! ನಮ್ಮ ದೇಶ ಯಾವುದು?" ಕೆಲವರೆಂದರು : "Jতন্তে ১.” “ಹ್ಮ, ಅದರ ಕತೆ ಬಲ್ಲಿರಾ?"... - 米 # 米 ಪೂರ್ವದಲ್ಲಿ ಈ ದೇಶಕ್ಕೆ ಮೂರು ಹೆಸರುಗಳಿದುವು. ಮೊದಲನೆಯದು ಬ್ರಹ್ಮಕ್ಷೇತ್ರ, ಎರಡನೆಯದು ಮತ್ಸದೇಶ, ಮೂರನೆಯದು ಕೊಡ್ತೀಢದೇಶ, ತೀರ್ಥಾಟನ ಮಾಡುತ್ತ ಪಶ್ಚಿಮ ಘಟ್ಟಗಳಿಗೆ ಬಂದ ಬ್ರಹ್ಮದೇವ, ಒಂದೆಡೆ ಸುತ್ತಲಿನ ನಿಸರ್ಗ ರಮಣೀಯತೆಗೆ ಮಾರುಹೋಗಿ, ಕೆಲ ಕಾಲ ಅಲ್ಲಿ ನೆಲೆಸಿದನು. ಆತನಿದ್ದ ಪರ್ವತ ಬ್ರಹ್ಮಗಿರಿ ಎನಿಸಿಕೊಂಡಿತು. ಪ್ರದೇಶ ಬ್ರಹ್ಮಕ್ಷೇತ್ರವಾಯಿತು. ಪುರಾಣಗಳಲ್ಲಿರುವ ಇನ್ನೊಂದು ಕಥೆಯಂತೆ, ಮತ್ಸ ದೇಶದ ರಾಜ ಸಿದ್ದಾರ್ಥನ ಾಲ್ವರು ಗಂಡುಮಕ್ಕಳಲ್ಲಿ ಕಿರಿಯವನಾದ ಚಂದ್ರವರ್ಮ ತೀರ್ಥಯಾತ್ರೆ ಮಾಡುತ್ತಾ ಬ್ರಹ್ಮಗಿರಿಯನ್ನು ತಲಪಿದನು. ತನಗೆ ಪ್ರಸನ್ನಳಾದ ಪಾರ್ವತಿಯ ಸೂಚನೆಯಂತೆ ಆ ರಾಜ್ಯವನಾಳಿದನು. ಅವನು ಮತ್ಸ ದೇಶದಿಂದ ಬಂದವನಾದುದರಿಂದ ಬ್ರಹ್ಮಕ್ಷೇತ್ರವೂ ಮತ್ಸ ದೇಶವೆನ್ನಿಸಿಕೊಂಡಿತು. ಮುಂದಿನ ಅರಸನಾದ ದೇವಕಾಂತನಲ್ಲಿ, ಆಹಾರ ಧಾನ್ಯಗಳನ್ನು ಬೆಳೆಸಲು ಇದ್ದ ಭೂಮಿ ಸಾಲದೇ ಹೋಯಿತು. ಆಗ ರಾಜಕುಮಾರರೂ ಅವರ ಮಕ್ಕಳೂ ತಮ್ಮ ಉದ್ದನೆಯ ನಖಗಳಿಂದ ಬೆಟ್ಟದ ತಪ್ಪಲುಗಳನ್ನು ಸೀಳಿ ಬಯಲಾಗಿ ಮಾರ್ಪಡಿಸಿದರು. ಆ ಕಾರಣದಿಂದ ಅವರು ಕೊಡ್ತೀಢರೆನಿಸಿಕೊಂಡರು. ರಾಜ್ಯ ಕ್ರೋಶ್ರೀಢದೇಶವಾಯಿತು. బెలిచాణాత్రి ఇల్లి లేఫెళిబెణవుడైయూగి జనిసి, రేప్వారన బెుగళాంగి శాపాలరి చంబ ಅಭಿಧಾನದಿಂದ ನದಿಯಾಗಿ ಹರಿದಳು. ಕಲಾಣದ ಕ್ರಾಂತಿಗೆ ಸುಮಾರು ಸಾವಿರ ವರ್ಷಗಳಿಗೆ ಹಿಂದಿನ ತಮಿಳು ಸಾಹಿತ್ಯ, 'ಕುಡಕಮ್' ಎಂಬೊಂದು ರಾಜ್ಯವನ್ನು ಕುರಿತು ಪ್ರಸ್ಥಾಪಿಸಿದೆ. ಆರಂಭದಲ್ಲಿ ಸುಮಾರು ಆರುನೂರು ವರ್ಷಗಳ ಕಾಲ ಕದಂಬರು ಈ ರಾಜ್ಯವನ್ನು ಗೆದು ಆಳಿದರೆಂಬುದಕ್ಕೆ ಆಧಾರಗಳಿವೆ. ಆಗ 'ಮಲೆಪರ ನಂದನವನ' ಎನಿಸಿಕೊಂಡಿತು ಕೊಡಗು, ಮುಂದೆ ಮೂರುನೂರು ವರ್ಷ ಜೈನರಾದ ಗಂಗರಸರು ಈ ರಾಜ್ಯಕ್ಕೆ ಅಧಿಪತಿಗಳಾಗಿದ್ದರು. ಕೆಲ ಭಾಗಗಳು ಚೆಂಗಾಳ್ವರ ವಶದಲ್ಲಿದ್ದುವು, ಚೋಳರು ಗಂಗರನ್ನು ಸೋಲಿಸಿದಾಗ, ಚೆಂಗಾಳ್ವರು ಚೋಳರ ಮಾಂಡಲಿಕರಾದರು, ಬೇರೆ ಕೆಲ ಭಾಗಗಳನ್ನು ಕೊಂಗಾಳ್ವರು ಆಳಿದರು. ಮುಂದೆ ಕೊಡಗು ಹೊಯ್ದಳರ ಅಧೀನವಾಯಿತು.