ಪುಟ:ಸ್ವಾಮಿ ಅಪರಂಪಾರ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಿ ಅಪರ೦ಪಾರ 筑G* ಚಂಚಲೆ ರಾಜ್ಯಲಕ್ಷ್ಮಿ ಎಷ್ಟೊಂದು ಜನಕ್ಕೆ ಒಲಿದಳು! ಅರಸೊತ್ತಿಗೆಯ ದರ್ಪ ಪ್ರತಿಷ್ಟೆಗಳೆಲ್ಲ ಅದೆಷ್ಟು ಕ್ಷಣಭಂಗುರ! ಕೆಲ ಕಾಲದ ಬಳಿಕ ವಿಜಯನಗರ ಸಾಮಾಜ್ಞಕ್ಕೆ ಕೊಡಗು ಒಳಪಟ್ಟಿತು. ವಿಜಯ ನಗರದ ಪತನದ ಅನಂತರ ಕೊಡಗು ಹರಿದು ಹಂಚಿಹೊಳಿಯಿತು, ಹಲವಾರು ಪಾಳೆಯು. ಗಾರರು ಪರಸ್ಪರ ಕಾದಾಡುತ್ತ ಕೊಡಗಿನ ವಿವಿಧ ಭಾಗಗಳ ಗುಡ್ಡಗಳನ್ನೂ ಬಯಲು ಗಳನ್ನೂ ಆಳುತ್ತಿದ್ದರು. - ಶಾಲಿವಾಹನ ಶಕ ಸಾವಿರದ ಐದುನೂರ ನಾಲ್ವತ್ತರ ಸುಮಾರಿಗೆ ಜಂಗಮನೊಬ್ಬ ಕೊಡಗಿನಲ್ಲಿ ಕಾಣಿಸಿಕೊಂಡ, ಇವನು ವೇಷಧಾರಿ, ವಾಸ್ತವವಾಗಿ, ಇಕ್ಕೇರಿ ಮನೆತನದ ಒಬ್ಬ ರಾಜಕುಮಾರ. ಈತ ಊರೂರು ತಿರುಗುತ್ತ, ಮಡಕೇರಿಯಿಂದ ಒಂದೂವರೆ ಹರದಾರಿ ದೂರದ ಹಾಲೇರಿ ಹಳ್ಳಿಯಲ್ಲಿ ನೆಲೆ ನಿಂತ. ಅವನು ಆಡುತ್ತಿದ್ದ ವಚನಗಳೂ ಮಾಡುತ್ತಿದ್ದ ಪ್ರವಚನಗಳೂ ಜನರ ಮನಸ್ಸನ್ನು ಸೆರೆಹಿಡಿದುವು. ಅವರು ಅವನ ಭಕ್ತ * : ರಾದರು. ಕಾಣಿಕೆಯಾಗಿ ಬತ್ರವನ್ನೂ ಹೊನ್ನನ್ನೂ ಜಂಗಮನಿಗೆ ತಂದೊಪ್ಪಿಸಿದರು. ಆತನ ನಿವಾಸವನ್ನು ಬೂದಿ ಚಾವಡಿ ಎಂದು ಕರೆದರು. ನಿವಾಸದ ಪಹರೆಯವರು ಚಾವಡಿಕಾರ ರಾದರು. - ವಿರಕ್ತ ಜಂಗಮ ಸ್ವಲ್ಪವೇ ಸಮಯದಲ್ಲಿ ಧೀರನಾಯಕನಾದ. ಚಾವಡಿಕಾರರೆಂದು ಹೆಸರು ಪಡೆದು ಕೊಡವ ಕಟಾಳುಗಳು ಅವನ ಅನುಯಾಯಿಗಳಾದರು. ಅವನ ಬಾಹು. ಬಲಕ್ಕೆ ಬೆದರಿ ವಿವಿಧ ಪಾಳೆಯಗಾರರು ಆತನಿಗೆ ಕಪ್ಪಕಾಣಿಕೆಯೊಪ್ಪಿಸುವ ಪರಿಸ್ಥಿತಿ. ಯೊದಗಿತು. ನಂಬಿದವರಿಗೆ ಅವನು ಇಂಬು ಕೊಟ್ಟನು. ಇದಿರಾಡಿದವರಿಗೆ ಅಂಬು ತೋರಿದನು. ಹೀಗೆ ಹಾಲೇರಿ ಮನೆತನ ಸಾಪಿತವಾಯಿತು. ಭಿನ್ನವಿಚ್ಛಿನ್ನವಾಗಿದ್ದ ಮJಾವತ್ತೈದು. ನಾಡುಗಳ ಕೊಡಗು ಒಂದು ರಾಜ್ಯ ಎನ್ನಿಸಿತು. - 来 ※ 染 - ಕಥೆಯನ್ನು ಮುಂದುವರಿಸುತ್ತ ಶಿವಾಚಾರ್ಯಸಾಮಿಗಳೆಂದರು : “ಈ ಹಾಲೇರಿ ವಂಶದ ಈವರೆಗಿನ ಎರಡು ನೂರು ವರ್ಷಗಳ ಆಳ್ವಿಕೆಯಲ್ಲಾ ಎಷ್ಟೋ ಏಗುಬೀಳುಗಳು ಕಂಡುಬಂದವಲಾ, ಈ ರಾಜ್ಯವನ್ನು ಕೈವಶಮಾಡಿಕೊಳ್ಳು. ವುದಕ್ಕೆ ಎಷ್ಟು ಜನ ಯತ್ನ ಮಾಡಿದರು! ದಾಳಿ ನಡೆಸಿದರು! ಮುತ್ತಿಗೆ ಹಾಕಿದರು! ರಕ್ರದ ನದಿಗಳು ಏಸೊಂದು ಹರಿದುವು ! ಏಸೊಂದು ಹೆಣ್ಣಮಕ್ಕಳು ವಿಧವೆಯರಾದು. ಏಸೊಂದು ತಾಯಂದಿರು ಮಕ್ಕಳನ್ನು ಕಳಕೊಂಡು, ಆದರೂನೂ ಕಾವೇರಿ ತಾಯಿಯ ಪುಣ್ಯದಿಂದ ಈ ದೇಶ ಉಳಕೊಂಡದೆ.. ಮಹಾದೇವನ ಕೃಪೆಯಿಂದ ಹಾಲೇರಿ ರಾಜವಂಶ ನಿರಾತಂಕವಾಗಿ ರಾಜ್ಯಭಾರ ಮಾಡತಾ ಅದೆ. "ಅಂದರೆ, ಇನ್ನು ಕೊಡಗಿಗೆ ಕಂಟಕವಿಲಾಂತ ತಿಳಕೋಬಾರದು, ಮಹಾದೇವ ತನ್ನ ಭಕ್ತರನ್ನ ಯಾವಾಗಲೂ ಪರೀಕ್ಷೆ ಮಾಡತಾ ಇರತಾನೆ. ಹೊಸ ಕುತು ಪರಧರ್ಮಿಾಯ ರಿಂದ ಬರತದೆ. ನಮ್ಮ ಕಣ್ಣೆದುರಲ್ಲೇ ನಾವು ಏನೇನು ಪರಿವರ್ತಾನಾ ಕಂಡ್ವಿ! ಖಡ್ಡ &ండిడా ಕೈಯಲ್ಲಿಗ బందాJణరేదో. నేఁగిలు ఎటింటిve యేణలరిగాళు ఫిరాంగి ఎళ్వికెపా. ಸಾವು ಸಹಸ್ರ ಮುಖದ ರೂಪ ತಳೆದದೆ. ಆಳಿದ ಮಹಾಸ್ವಾಮಿಯವರಾದ ದೊಡ್ಡ