ಪುಟ:ಸ್ವಾಮಿ ಅಪರಂಪಾರ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ವೀರಪ್ಪನವರ ಕಾಲದಲ್ಲಿ ಮಿತ್ರರಂತೆ ನಟಿಸಿದ ಆಂಗ್ರೇಜಿಯವರು ಟೀಪೂ ಸತ್ತಮೇಲೆ ಕೊಡಗಿಗೂ ನಾವೇ ಒಡೇರು ಅಂತ ಹೇಳಲಿಲ್ಲವಾ? ಅವರ ಕೈಕೆಳಗಿನ ಮಾಂಡಲೀಕತನ ನಮ್ಮ ಪಾಲಿಗೆ ಉಚ್ಚಿಷ್ಟ, ನಮ್ಮ ಜನ ಅದನ್ನು ಮುಟ್ಟಿಲ್ಲ. ಲಿಂಗರಾಜನ ಕಾಲದಲ್ಲಾ ಅವರ ಆಟ ನಡೀಲಿಲ್ಲ. ಈಗಲಾದರೂ ಅದು ನಡೀಲಾರದು. ಆದರೂ ಒಂದು ಮಾತು ನಮ್ಮ ನೆಪ್ಪಿನಲ್ಲಿರಬೇಕು. ದಾಯಾದಿ ಕಲಹದಿಂದ ಯಾವ ದೇಶವೂ ಏಳ್ಳೆ ಹೊಂದಿಲ್ಲ. ನಮ್ಮಲ್ಲಿ ಆ ತಾಪ ಹಬ್ಬಿತೋ ಕೊಡಗಿನ ಗಿಡಮರಗಳು ಕಮರಿಹೋಗ್ರವೆ. ಸ್ವಾಭಿಮಾನ ಸ್ವದೇಶಪ್ರೇಮ, ನಾಯನಿಷ್ಟೆ ನಮ್ಮಲ್ಲಿ ಕುಗ್ಗಿತೋ ನಾವು ಬೀಳುತ್ತೇವೆ, ಹೌದಾ?"

   ನಿಶ್ಯಬ್ದವಾಗಿ ಸ್ವಾಮಿಗಳಿಗೆ ಕಿವಿಗೊಡುತ್ತಿದ್ದ ಶ್ರೋತೃಗಳು ಏನನ್ನೂ ಹೇಳಲಿಲ್ಲ.
   ಸ್ವಾಮಿಗಳು ಮುಂದುವರಿಸಿದರು:
"ಕೇಳಿರಿ. ಕಾಯುಧರಿಸಿದವ ನವನೀತರೋಮದಂತಿರಬೇಕು. ಮುಕುರದಲ್ಲಿಯ ಪ್ರತಿ ಬಿಂಬದಂತಿರಬೇಕು. ಬೆಟ್ಟದಲ್ಲಿಯ ಕಾಡುಗಿಚ್ಚಿನಂತಿರಬೇಕು. ಆಷಾಢದಲ್ಲಿಯ ಚಂಡ ಮಾರುತನಂತಿರಬೇಕು. :ಸವ೯ರಂತಾಗಿರಬೇಕು. . . . . ಅರ್ಥವಾಯಾ ? ಹು೦, ಇವತ್ತಿಗೆ ಸಾಕು ಹೊರಡಿರಿನ್ನು."
ಶ್ರೋತೃಗಳು ಎದ್ದರು. ಸ್ವಾಮಿಗಳಿಗೆ ನಮಿಸಿ ನಮಿಸಿ ಹೊರಟರು. 

"ಸಿದ್ಧಲಿಂಗ" ಎಂದು ಕರೆದರು, ಸ್ವಾಮಿಗಳ. ಸಿದ್ದಲಿಂಗ ಅವರೆದುರು ನಿಂತ. ವೀರಪ್ಪ ಮಲ್ಲಪ್ಪರ ಕಡೆ ದೃಷ್ಟಿಹಾಯಿಸಿ ಸ್ವಾಮಿಗಳೆಂದರು :

"ಇವರ ಶಯನಕ್ಕೆ ವ್ಯವಸ್ಥೆಮಾಡು."
ಸಿದ್ಧಲಿಂಗ ಮಾತಿಲ್ಲದೆಯೇ ಸ್ವಾಮಿಗಳ ಅಪ್ಪಣೆಯನ್ನು ಶಿರಸಾವಹಿಸಿ, ಕೈಸನ್ನೆಯಿಂದ ಅತಿಥಿಗಳನ್ನು ಬರಹೇಳಿ, ಕರೆದೊಯ್ದ, 

'ಬಾಯಿ ಬಿಟ್ಟೇನಾ? ಎಂದು ಆತ ಹೇಳಿದ್ದ ಘಳಿಗೆಯಿಂದ ತುಟಿಪಿಟಕ್ಕೆಂದಿರಲಿಲ್ಲ!

ಅವನ ಮೆದುಳು ಮಾತ್ರ ಯೋಚನೆಯಿಂದ ತಪ್ತವಾಗಿತು.
ಗುರುಗಳಿವತು ಕೊಡಗಿನ ಕಥೆಯನ್ನೇಕೆ ಹೇಳಿದರು? ಬೂದಿ ಚಾವಡಿಯ ಜಂಗಮ ವೇಷಧಾರಿಯ ಪ್ರಕರಣವಂತೂ ಸೊಗಸಾಗಿತು.
ಸಿದ್ಧಲಿಂಗ ಒಮ್ಮೆಲೆ ಹೊರಳಿ ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ವೀರಪ್ಪಾಜಿಯನ್ನು ನೋಡಿದ. ತನ್ನನ್ನು ಕಾಡಿದ್ದ ಪ್ರಶ್ನೆಗೆ ಅಲ್ಲಿ ಆತ ಉತ್ತರವನ್ನು ಕಂಡ.
                      ೧೮
ನಸುಕಿನಲ್ಲೆದು ಕಾವೇರಿ ನದಿಯಲ್ಲಿ ಮಿಂದು ಮಠದಲ್ಲಿ ಶಿವಪೂಜೆಯಲ್ಲಿ ನಿರತರಾಗಿ ದ್ದರು, ಸ್ವಾಮಿಗಳು. ಊರಿಗೆ ಮರಳಲು ಅಣಿಯಾಗುತ್ತಿದ್ದ ಮಲ್ಲಪ್ಪಗೌಡನನ್ನು ಕಂಡು ಸಿದ್ದಲಿಂಗನೆಂದ: 

"ಸಾಮಿಗಳಿಗೆ ಹೇಳಿಹೋಗಬೇಕು, ಅಲ್ಲವಾ? ಒಸಿ ತಾಳು, ಗೌಡ, ಇಗ ಸುది ಹಾಗೆ ತಿಳಿಸಲಿ? ಪೂಜೆಯ ವೇಳೆ, ನಡುವೆ ನುಗ್ಗಿ ಕರಡಿಯಾಗಲಾ ?” "ಡಿ, ಅಯ್ಯನವರೆ. ನಾ ಕಾದಿರುತೀನಿ. ನನಗೇನವಸರ?”

ನದೀ ದಡದ ಪಾವಟಿಗೆಗಳ ಮೇಲೆ ವೀರಪ್ಪಾಜಿಯೂ ಮಲ್ಲಪ್ಪಗೌಡನೂ ಕುಳಿತರು.