ಪುಟ:ಸ್ವಾಮಿ ಅಪರಂಪಾರ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾಮಿ ಅಪರಂಪಾರ ೬೧

ಸೂರ್ಯನ ಹೊಂಗಿರಣಗಳು ಮಲೆಗಳನ್ನು ದಾಟಿ ವೃಕ್ಷರಾಶಿಗಳೆಡೆಯಿಂದ ತೂರಿ ನದಿಯ నిలరిನ ಮೇಲೆ ಕುಣಿಯುತ್ತಿದ್ದುವು. ದಡದ ಮೇಲ್ಗಡೆ, ನಂಜರಾಜಪಟ್ಟಣದ ಸ್ತ್ರೀಪುರುಷರು ಬಂದು ದೇವಾಲಯಗಳಲ್ಲಾ ಬಸವಮಂಟಪದಲ್ಲಾ ಘಂಟೆಗಳನ್ನು ಬಾರಿಸು ತ್ತಿದ್ದರು. ನದಿಯುದ್ದಕ್ಕೆ ಕೆಳಗಡೆ ಸಾನಘಟ್ಟವಿತ್ತು. ಹಲವರು ಅಲ್ಲಿ ಮಿಾಯುತ್ತಿದ್ದರು. ಮಹಾದೇವನನ್ನು ಧೇನಿಸುತ್ತ ಮುಳುಗೇಳುತ್ತಿದ್ದರು.

ಈ ಪ್ರಶಾಂತತೆ ವೀರಪ್ಪಾಜಿಯನ್ನು ಬಹಳ ಮಟ್ಟಿಗೆ ಪ್ರಸನ್ನಗೊಳಿಸಿತು. ಆದರೂ ಹೃದಯದ ತಳದಲ್ಲಿ ಬಿಸಿನೀರಿನ ಬುಗ್ಗೆಗಳು ಪುಟಿಯುತ್ತಿದ್ದುವು. ಮನಸ್ಸು ಯೋಚನೆಗಳ ಕುಸ್ತಿಮನೆಯಾಗಿತ್ತು.
ಹಿಂದಿನ ರಾತ್ರೆ ಶಿವಾಚಾರ್ಯ ಸ್ವಾಮಿಗಳಾಡಿದ ನುಡಿಗಳು ಅವರಿಬ್ಬರ ಮೇಲೂ ಪ್ರಭಾವ ಬೀರಿದುವು. ಒಬ್ಬೊಬ್ಬರ ಮೇಲೆ ಒಂದೂ೦ದು. ಪಾವಟಿಗೆಯ ಮೇಲೆ ಕುಳಿತು ಆ ಮಾತುಗಳನ್ನು ಮೆಲುಕು ಹಾಕುತ್ತಿದ್ದ ಮಲ್ಲಪ್ಪನೆಂದ:
“ಮಠದ ಸಾವಿಂಗಳು ದೊಡ್ಡ ಮನಿಸಾರು, ಅಲ್ಲವರಾ?"
"ಹೃ–ಮಲ್ಲಪ್ಪಣ್ಣ."
"ಊರಿನಿಂದ ಮೈಕಾವಲಿಗೆ ಅಂತ ನಿಮ್ಮ ಸಂಗಾತ ಬಂದ್ನಿ. ಇಲ್ಲಿ ಸೋಮಿಗಳ ಅಮೃತದಂಥಾ ಮಾತು ಕೇಳೋ ಯೋಗ ಇತು."
"ನೀ ಬಂದದು ಒಳ್ಳೆದಾಯು, ಮಲ್ಲಪ್ಪಣ್ಣ."
"ನಮ್ಮ ಹೊಲ, ಹಾರೆ, ಅರಸ ಕರೆದರೆ ಸೇವೆ. ಬಾಳ್ವೆ ಅಂದರೆ ಇಷ್ಟೇ ಅಂತಿದ್ರಿ. ಸೋಮಿಗಳು ಯೋಳಿದು ಕೇಳಿದ ಮ್ಯಕೆ, ನಾವು ದೊಡ್ಡ ದೇಶದ ಮಕ್ಕಳು ಅನ್ನೋ ಹೆಮ್ಮೆ ಉಟ್ಟಿತು."
"ಏಳು-ಬೀಳುಗಳನ್ನ ಅನುಭವಿಸಿರೋ ದೊಡ್ಡ ದೇಶ, ಮಲ್ಲಪ್ಪಣ್ಣ." "ನಾ ಇನ್ನು ಹೊಸ ಮನಿಸ್ಕನಾಗಿ ನನ್ನ ಹಳ್ಳಿಗೆ ಓಗತೀನಿ, ಸೋಮಿಯೋರೆ.". ಪಾವಟಿಗೆಯ ಮೇಲಿದ್ದ ಕೆಲ ಹರಳುಗಳನಾಯು, ಮೌನವಾಗಿ, ಒಂದೊಂದನ್ನೇ ವೀರಪ್ಫಾಜಿ ನೀರಿಗೆಸೆದ. 

ಕೈಯಲ್ಲಿದ್ದ ಹರಳುಗಳು ಮುಗಿದ ಮೇಲೆ ವೀರಪ್ಪಾಜಿಯೆಂದ:

"ನೀ ಒಂದು ದಾರಿ ಹಿಡಿತೀಯಾ ; ನಾ ಒಂದು ದಾರಿ ಹಿಡಿತೀನಿ."
"ಮಹಾದೇವ ನಿಮಗೆ ಈ ಕಸ್ಟ ಕೊಡಬಾರದಾಗಿತು."
"ಕಷ್ಟ ಕೊಟ್ಟಿಲ್ಲ, ಮಲ್ಲಪ್ಪಣ್ಣ, ಪರೀಕ್ಷೆ ಮಾಡತಾ ಇದಾನೆ. ಬದುಕಿ ಉಳಿದೆ ಅಂತ ಈಗ ನನಗೆ ದುಕ್ಕ ಇಲ್ಲ. ಉಳಿದ ಬದುಕನ್ನ ಸಾರ್ಥಕವಾಗಿ ಬಾಳಬೇಕು ಅನ್ನೋ ಹಂಬಲ ಇದೆ."
"ನಿಜ, ಸೋಮಿಯೋರೆ. ನಂಬಿದವರನ್ನ ಶಿವ ನಾನಾ ಬಗೆಯಾಗಿ ಪರೀಕ್ಷೆ ಮಾಡತಾನೆ.” 

ಅಷ್ಟರಲ್ಲಿ. "ಇಲ್ಲಿ ಕುಂತಿದೀರಾ? ಬದ್ರಿ"-ಎಂದು, ಮೇಲುಗಡೆಯಿಂದ ಸಿದ್ಧಲಿಂಗ ಕರೆದುದು ಕೇಳಿಸಿತು. ವೀರಪ್ಪಾಜಿಯೂ ಮಲ್ಲಪ್ಪನೂ ಎದ್ದು ಮೆಟ್ಟಲುಗಳನ್ನು ಹತ್ತಿ ಅವನೆಡೆಗೆ ಬಂದರು. ಸಿದ್ಧಲಿಂಗನೆಂದ: “ಸ್ವಾಮಿಗಳು ಬರಹೇಳಿದರು." - ...ಶಿವಾಚಾರ್ಯಸ್ವಾಮಿಗಳು ಹೊರಬಂದು ಮಠದ ಅಂಗಳಕ್ಕಿಳಿದಿದ್ದರು.