ಪುಟ:ಸ್ವಾಮಿ ಅಪರಂಪಾರ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೪ ಸ್ವಾಮಿ ಅಪರಂಪಾರ ವರ್ಷಗಳ ಕಾಲ, ಮಗಳೊಡನೆ ಹಳ್ಳಿಗೆ ಹಿಂತಿರುಗುವ ಕನಸನ್ನೇ ಗಂಗಮ್ಮ ಕಾಣುತ್ತಿದ್ದಳು. ರಾಣಿ ಗೌರಮ್ಮ ಬಾಣಂತಿಯಾಗಿದ್ದಾ ಗಲೊಮ್ಮೆ, ಮಗಳನ್ನು ಕರೆದುಕೊಂಡು ಮಡಕೇರಿಗೆ ಅವಳು ಹೋಗಿದ್ದಳು. ಕೋಟೆಮನೆಯತ್ತ ಆಕೆಯ ದೃಷ್ಟಿ ಅಲೆದಿತು. ಅಳಿಯ ಬಂದಿ ಯಾಗಿ ತೀರಿಕೊಂಡಿದ್ದ ತಾಣ. ಸತ್ತವನನ್ನು ಎಲ್ಲಾದರೂ ಮಣ್ಣು ಮಾಡಿರಬೇಕಲ್ಲ? ಅದನ್ನು ನೋಡಿದರಾಗುತ್ತಿತ್ತು ತಾನು...ಆದರೆ ಆ ಅಪೇಕ್ಷೆಗಳನ್ನು ಆಕೆ ಯಾರಲ್ಲಿ ಹೇಳಿ ಕೊಳ್ಳಬೇಕು ? ಸುಮ್ಮನಿದ್ದಳು. ತಾನು ಊರಿಗೆ ಮರಳಲು ಅನುಮತಿ ದೊರೆಯದೆ?– ಎಂದು ರಾಣಿಯನ್ನು ಕೇಳಿದ್ದಳು.

 ಈಕೆ ನೀಡಿದ ಉತ್ತರ:
“ರಾಜಮ್ಮಾಜಿ ಜತೆಯಲ್ಲೇ ಇರಿ, ಅತ್ತೆಮ್ಮ: ನಿಮಗೆ ಊರಾದರೇನು? ಅಪ್ಪಂಗಳ

ವಾದರೇನು?”

 ಅರಮನೆಗೆ ಸಮಿಾಪದ ಸಂಬಂಧವಾದ ರಾಜಮ್ಮಾಜಿ ಹಳ್ಳಿಗೆ ಹೋಗಲು ಅರಸನ

ಒಪ್ಪಿಗೆ ದೊರೆಯದೆಂಬುದು ಸ್ಪಷ್ಟವಾಗಿತು. ಮಗಳನ್ನು ಬಿಟ್ಟು ತನಗೆ ಬೇರೆ ಯಾರಿದ್ದರು? ಅವಳ ಮೈಗಾವಲಾಗಿ ಇಲ್ಲಿಯೇ ಇರುವುದಲ್ಲವೆ ಒಳಿತು?

 ಗಂಗಮ್ಮನ ಮೌನ ಕಂಡು ದೇವಮಾಜಿಯೇ ಅಂದಳು :
 "ಬೇಕಿದ್ದರೆ ಹೇಳಿ. ನಾಲ್ಕುನಾಡು ಅರಮನೆಯಲ್ಲಿ ಇರುವಿರಂತೆ, ಮಹಾಸ್ವಾಮಿಯನ್ನು

ಒಪ್ಪಿಸ್ಸುತ್ತೇನೆ."

 ಆ ಕುರಿತು ಯೋಚಿಸಿ ಗಂಗಮ್ಮನೆಂದಳು :
"ಬ್ಯಾಡ. ನನ್ನ ಮಗಳಿಗೆ ಅಪ್ಪಂಗಳವೇ ಅಲ್ಲವೆ ಗಂಡನ ಮನೆ?"
ತಾನೂ ಮಗಳೊಡನೆ ಉಳಿಯುವೆನೆಂಬ ನಿರ್ಧಾರವಿತ್ತು ಧ್ವನಿಯಲ್ಲಿ.
ಮುಂದೆ. ವೀರಪ್ಪಾಜಿ ಸತ್ತಿಲ್ಲವೆಂಬ ಕಿಂವದಂತಿ ಹುಟ್ಟಿದಾಗ ಗಂಗಮ್ಮ ಗೆಲುವಾದಳು. ಯುವತಿಯಾಗಿ ಮಾರ್ಪಟ್ಟಿದ್ದ ಮಗಳ ಮುಖವನ್ನು, ಬರಿ ಹಣೆಯನ್ನು, ಮಾಂಗಲ್ಯ ಸೂತ್ರವಿಲ್ಲದ ಕೊರಳನ್ನು ನೋಡುತ್ತ, ಇವಳ ಬದುಕಿನಲ್ಲಿ ಮುಂದೆ ಹೊಸ ಬೆಳಗು 

ಮೂಡಿದರೂ ಮೂಡಬಹುದೇನೋ ಎಂಬ ಆಸೆ ತಾಯಿಯಲ್ಲಿ ಮೊಳೆಯಿತು.

                              ೨೩
 ಐಹಿಕ ಆಸೆಗಳ ಎಲ್ಲ ಕೊಂಡಿಗಳನ್ನೂ ಕಳಚಿ ವಿಮುಕ್ತನೂ ವಿರಕ್ತನೂ ಆದ ವೀರಪ್ಪಾಜಿ ಅಪರಂಪಾರನಾಗಿ, ದಕ್ಷಿಣ ಭಾರತದ ಶೈವ ಕ್ಷೇತ್ರಗಳನ್ನು ಸಂದರ್ಶಿಸಿದ. ಪಾರಮಾರ್ಥಿಕ ಚಿಂತನೆಯಲ್ಲಿ ಮಾಸಗಳನ್ನು-ವರ್ಷಗಳನ್ನು-ಕಳೆದ,
 ಅವನ ಇಚ್ಚಾಶಕ್ತಿ ಉಕ್ಕಾಯಿತಾದರೂ ಹೃದಯ ಪರಿಪೂರ್ಣ ನೆಮ್ಮದಿಯ ಆವಾಸ ವಾಗಲಿಲ್ಲ. 
 ತನ್ನನ್ನು ತಾನೇ ಬಾರಿಬಾರಿಗೆ ಆತ ಕೇಳುತ್ತಲಿದ್ದ: 
  "ಯಾಕೆ ಈ ತಳಮಳ? ಯಾಕೆ?ಯಾಕೆ?”
 ಪ್ರಜಾಸುಖದ ಪ್ರಶ್ನೆಗಳು, ಕೊಡಗು ಮೈಸೂರು ಮತ್ತಿತರ ರಾಜ್ಯಗಳ ಆಗುಹೋಗು 

ಗಳು, ಅವನ ಆಸಕ್ತಿಯನ್ನು ಕೆರಳಿಸುತ್ತಿದ್ದುವು.

 ಅಂತರ್ಮುಖಿಯಾಗಿ ಆತ ಉದ್ಗರಿಸುತ್ತಿದ್ದ.