ಪುಟ:ಸ್ವಾಮಿ ಅಪರಂಪಾರ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೭೫

    “ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೆ? ಸಮುದ್ರವ ದಾಟುವಂಗೆ ಹರಿಗೋಲ         ಹಂಗೇಕೆ? ಸೀಮೆಯ ಮಿಾರಿದ ನಿಸ್ಸೀಮಂಗೆ ಸೀಮೆಯ ಹಂಗೇಕೆ?"
  ಉದ್ಗಾ ರಗಳಷ್ಟೇ ಪ್ರತಿಧ್ವನಿಸುತ್ತಿದ್ದುವು. ನೆಮ್ಮದಿ ದೊರೆಯುತ್ತಿರಲಿಲ್ಲ.
  ಬಸವಕಲ್ಯಾಣದಿಂದ ಮರಳಿ ಹೊರಟ ಅಪರಂಪಾರ ಕಿತ್ತೂರಿನ ದಾರಿಯಾಗಿ ಬಂದ. 
  ಎತ್ತರದ ನಿಲುವಿನ, ದಿಟ್ಟ ನಡಿಗೆಯ, ಗಡ್ಡಮಿಾಸೆಗಳ, ಕಾವಿ ನಿಲುವಂಗಿಯ, ತೇಜಃ                             ಪುಂಜ ಕಣ್ಣುಗಳ, ಸ್ಪುರದ್ರೂಪಿ ವಿರಕ್ತನನ್ನು, ಮೊದಲ ನೋಟಕ್ಕೆ ಮುಸಲ್ಮಾನ ಸಂತ

ನೆಂದು ಹಲವರು ಭಾವಿಸಿದರು ; 'ಫಕೀರ ಬಾಬಾ' ಎಂದು ಕರೆದರು. ಜಂಗಮನೆರೆದ ವಚನಾಮೃತವನ್ನು ಸವಿದಾಗ ಅವನನ್ನು ಆರಾಧಿಸಿದರು.

 ಕಿತ್ತೂರು ಸಂಪದ್ಭರಿತವಾಗಿತ್ತು, ಪ್ರಜಾನುರಾಗಿಯಾದ ರಾಣಿ, ದಕ್ಷ ಆಡಳಿತವರ್ಗ,

ಧೀರ ಸೈನಿಕರು-ಕಿತ್ತೂರಿನ ಸುಖಶಾಂತಿಗೆ ಎಂದೂ ಚ್ಯುತಿ ಇರದು ಎಂಬ ಭಾವನೆ ಯನ್ನು ಹುಟ್ಟಿಸುತ್ತಿದ್ದರು. ಆದರೆ ಮಾರಿ ಮನೆ ಬಾಗಿಲಿನ ಹೊರಗೆ ಹೊಂಚು ಹಾಕು ತ್ತಿತು. ದಖ್ಯಣದ ಪೀಠಭೂಮಿಯ ಮೂಲೆ ಮೂಲೆಗಳಿಗೂ ಆಂಗ್ಲರ ಅಧಿಕಾರ ಹಸ್ತ ಚಾಚತೊಡಗಿತ್ತು. ಟೀಪೂವಿನ ಕಾಲದಲ್ಲಿ ಮೈಸೂರಿನ ಒಂದಂಗವಾಗಿದ್ದ ಧಾರವಾಡದಲ್ಲಿ ಆಂಗ್ಲ ಅಧಿಕಾರಿಯೊಬ್ಬ ತನ್ನ ಠಾಣ್ಯ ಸಾಪಿಸಿದ್ದ. ಇಂಥದರಲ್ಲಿ ಕಿತ್ತೂರು ತನ್ನ ಸ್ವಾತಂತ್ರ್ಯವನ್ನು ಎಷ್ಟು ದಿನ ಕಾಯುಕೊಳ್ಳುವುದು ಸಾಧ್ಯವಿತು?

 ಅಪರಂಪಾರನಿಗೆ ಅರಿಯದಂತೆಯೇ ಆ ಚಿಂತೆ ಅವನನ್ನು ಕಾಡುತ್ತಿತು. ಅಂಥ ಘಳಿಗೆ ಯಲ್ಲಿ ನೆರೆದವರೆದುರು ಅವನು ನುಡಿಯುತ್ತಿದ್ದ:
 "ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ! ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ! ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ!"
 ಇಹದ ಚಿಂತನೆಯನ್ನು ಮಾಡಬೇಕೆ ಜನಸಾಮಾನ್ಯರು?-ಪರದ ಚಿಂತನೆಯನ್ನೆ ? ಅಪರಂಪಾರನೆನ್ನುತ್ತಿದ್ದ:
“ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ಭೋ. ಸತ್ಯವ ನುಡಿವುದೇ ದೇವಲೋಕ. ಮಿಥ್ಯವ ನುಡಿವುದೇ ಮರ್ತ್ಯಲೋಕ. ಆಚಾರವೇ ಸ್ವರ್ಗ. ಅನಾಚಾರವೇ

ನರಕ..."

 ಅಸಾಧಾರಣ ಜಂಗಮನೊಬ್ಬ ತಮ್ಮ ರಾಜ್ಯಕ್ಕೆ ಬಂದಿರುವ ಸುದ್ದಿ ಕಿತ್ತೂರಿನ ಅರಮನೆಗೆ ಮುಟ್ಟಿತು. ಅಲ್ಲಿಂದ ಆಮಂತ್ರಣ ಬರಲಿದೆ ಎಂದು ತಿಳಿದ ಅಪರಂಪಾರ ಅದನ್ನು

ಸ್ವೀಕರಿಸಲು ಇಷ್ಟಪಡದೆ, ಆ ಕ್ಷಣವೇ ಕಿತ್ತೂರನ್ನು ತೊರೆದು ದಕ್ಷಿಣಾಭಿಮುಖವಾಗಿ ಪಯಣ ಬೆಳೆಸಿದ.

 ಮುಂದೆ ಕೆಲ ತಿಂಗಳಲ್ಲೇ ಏನಾಗಿಹೋಯಿತು! ಅಪರಂಪಾರ ಶ್ರೀರಂಗಪಟ್ಟಣವನ್ನು ತಲುಪಿದ್ದನಷ್ಟೆ. ಅಲ್ಲಿ ಆಂಗ್ಲರ ವಲಯದಲ್ಲಿ ಸಂತೋಷ ಸಮಾರಂಭಗಳು ನಡೆಯು 

ತ್ತಿದ್ದುವು. ಕಿತ್ತೂರು ಅವರ ಅಧೀನವಾಗಿತು. ಅದು, ಶಾಲಿವಾಹನ ಶಕ ೧೬೮೬ರ ತರನ ಸಂವತ್ಸರ.

  ಆ ಘಟನೆ ಅಪರಂಪಾರನ ಚಿತ್ರದ ಏಕಾಗ್ರತೆಯನ್ನು ಕದಡಿತು.
  ಕಾವೇರೀತಟದಿಂದ ಅಪರಂಪಾರ ಮೈಸೂರಿಗೆ ಹೋದ. ಯುವಕ ಮುಮ್ಮಡಿ ಕೃಷ್ಣ 
ರಾಜ ಒಡೆಯ ರಾಜ್ಯವಾಳುತ್ತಿದ್ದ ಕಾಲ. ಆತ ಆಳುತ್ತಿದ್ದ ಎನ್ನುವುದಕ್ಕಿಂತಲೂ ಅವನನ್ನು