ಪುಟ:ಸ್ವಾಮಿ ಅಪರಂಪಾರ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೬ ಸ್ವಾಮಿ ಅಪರಂಪಾರ ಮುಂದುವರಿಸಿ ಆಂಗ್ಲರೇ ರಾಜ್ಯಭಾರ ಮಾಡುತ್ತಿದ್ದರೆನ್ನಬೇಕು.ತಾನೇ ಪುರುಷಶ್ರೇಷ್ಟ ರೆನ್ನುವಂತೆ ಪರಕೀಯರು ಓಡಾಡುತ್ತಲಿದ್ದ ಆ ವಾತಾವರಣ ಅಪರಂಪಾರನನ್ನು ಉಸಿರು ಕಟ್ಟಿಸಿತು.

  ಆತ ಇಕ್ಕೇರಿಯ ಕಡೆಗೆ ನಡೆದ.
  ಇಕ್ಕೇರಿ! ಎಷ್ಟೊಂದು ಭಾವನೆಗಳನ್ನು ಬಡಿದೆಬ್ಬಿಸುತ್ತಿತ್ತು ಆ ಪದ!ವೀರರಾದ ರಾಜ ರಾಣಿಯರು ಆಳಿದ ರಾಜ್ಯ.ಮೊಘಲ ಬಾದಶಹನಿಗೂ ಮಣಿದಿರಲಿಲ್ಲಅದು. ಮೈಸೂರಿನ ರಾಜಮನೆತನದ ಬಗೆಗಂತೂ ಆ ಜನರಿಗೆ ತಿರಸ್ಕಾರ. "ಇಕ್ಕೇರಿ ಗಂಡ ಮೈಸೂರ ಮಿಂಡ" ಎಂಬ ಮಾತು ತಲೆತಲಾಂತರಗಳಿಂದ ಅಲ್ಲಿ ಬಳಕೆಯಲ್ಲಿತು. ಅಂಥ ಬಲಾಢ್ಯ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ರಣಾಗ್ರೇಸರ ಹೈದರನೊಬ್ಬನೇ ಸಮರ್ಥನಾಗಿದ್ದ.
 ಈಗ? ವಿದೇಶೀಯರ ಕಾಲ್ತುಳಿತಕ್ಕೆ ಅದು ಸಿಲುಕಿತು.
 ಎಷ್ಟು ಬೇಡವೆಂದರೂ ಒಂದು ನೆನಪು ಅಪರಂಪಾರನನ್ನು ಕಾಡುತ್ತಿತು.                   ಹಿಂದೆ ಇಕ್ಕೇರಿಯ ರಾಜಕುಮಾರನೊಬ್ಬ ಜಂಗಮವೇಷಧಾರಿಯಾಗಿ ಕೊಡಗಿಗೆ ಹೋಗಿದ್ದ; ಅಲ್ಲಿ ಹಾಲೇರಿ ವಂಶವನ್ನು ಸ್ಥಾಪಿಸಿದ್ದ...
 ಆ ಕೊಡಗಿನ್ನೂ ಪಾರತಂತ್ರ್ಯದ ನೊಗಕ್ಕೆ ಹೆಗಲು ಕೊಟ್ಟಿರಲಿಲ್ಲ.
 ದಾರಿಯಲ್ಲಿ ಯಾರೋ ಅಂದರು :
 "ಸೋಮಿಯೋರೆ. ಚಂಜೆಯಾಗಿದೆ. ನಮ್ಮಲ್ಲಿ ತಂಗಿ."
 ಉತ್ಕಟ ಭಾವೋದ್ವೇಗಕ್ಕೆ ಸಿಲುಕಿ ಅಪರಂಪಾರನ ಮೈ ಮನಗಳು ತಪ್ತವಾಗಿದ್ದುವು. ಆತನೆಂದ:
   ಉದಯ, ಮಧಾಹ್ನ, ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ  ಕೇಳಾ.ಉದಯವೆಂದೇನೋ ಶರಣಂಗೆ? ಮಧಾಹ್ನವೆಂದೇನೋ ಶರಣಂಗೆ? ಅಸ್ತಮಾನವೆಂ ದೇನೋ ಶರನಂಗೆ ?"
 ಅಪರಂಪಾರ ಮುಂದುವರಿದ. ಕಾಡು ದಾರಿ, ಕತ್ತಲು, ಕಾಲುಗಳು ಸೋತುವು. ಮರದ ಕೆಳಗಿನ ಪೊದೆಗಳ ನಡುವೆ ಹಸುರಿನ ಮೇಲೆ ಆತ ಮಲಗಿದ.
 ಬೆಳಗ್ಗೆ ಅರಣ್ಯದ ಉದಯರಾಗ ಕೇಳಿ ಅವನಿಗೆ ಎಚ್ಚರವಾಯಿತು. 
 ...ಇಕ್ಕೇರಿಯಿಂದ ಮಂಜರಾಬಾದಿಗೆ, ಅಲೆಯುವ ದೇಹ, ಅಲೆಯುವ ಮನ.
 ಅಪರಂಪಾರ ಹೋದಲ್ಲೆಲ್ಲ ಆತನ ವ್ಯಕ್ತಿತ್ವದಿಂದ ಆಕರ್ಷಿತರಾದ ಜನ    ಅಂದರು:
 "ಸೋಮಿಯೋರು ನಮ್ಮ ಹಳ್ಳಿಲೇ ನಿಂತುಬಿಡಬಾರದಾ? ಮನೆಯೋ ಮಠವೋ ಕಟ್ಟಿಸಿ ಕೊಡತೀವಿ."
 ಅಂತಹ ಹಲವಾರು ಪ್ರಾರ್ಥನೆಗಳನ್ನು ಕೇಳಿ ಬೇಸತ್ತ ಅಪರಂಪಾರ  ಕಟ್ಟಕಡೆಗೊಮ್ಮೆ "ಹೂ೦" ಎ೦ದ.
  "ಒಂದಷ್ಟು ದಿವಸ ಇಲ್ಲಿರತೀವಿ" ಎಂದು ನುಡಿದ.
ಅದೊಂದು ಹಳ್ಳಿ. ಹೆಸರು ಆವರ್ತಿ. ಅಲ್ಲಿ ವಾಸಿಸತೊಡಗಿದ ಅಪರಂಪಾರ ಸ್ವಲ್ಪ ಕಾಲದಲ್ಲೇ ಪ್ರಖ್ಯಾತನಾದ. ಜನ ಆತನ ದರ್ಶನಕ್ಕಾಗಿ ಮೈಸೂರು  ಕಡೆಯಿಂದಲೂ ಬಂದರು, ಕೊಡಗಿನಿಂದಲೂ ಬರತೊಡಗಿದರು.

...ಕಿಂವದಂತಿಯ ತಿದಿಯನ್ನು ಯಾರೋ ಒತ್ತಿದರು.