ಪುಟ:ಸ್ವಾಮಿ ಅಪರಂಪಾರ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ೭೭

“ದಿವಂಗತ ಅಪ್ಪಾಜಿ ಅರಸರ ಹಿರಿಯ ಮಗ ವೀರಪ್ಪನ ಹಾಗಿದ್ದಾನೆ, ಈ  ಸ್ವಾಮಿ.” ಎರಡು ಮೂರು ಕಿವಿಗಳನ್ನು ಅದು ದಾಟುವುದರೊಳಗೆ ಬೇಹಿನವರು ಹಾಗೆ ನುಡಿದ ಜನರನ್ನು ಹಿಡಿದರು. ರಾಜಸಮ್ಮುಖಕ್ಕೆ ಅವರನ್ನೊಯ್ದರು.

ಆಡಿದ ಮಾತಿಗೆ ಆಧಾರವೇನಾದರೂ ಇತ್ತೆ ?

"ಇಲ್ಲರಾ ಮಾಸಾಮಿಯೋರೆ ಅಂಗೇಂತ ತಮಾಷಿಗೆ ಅಂದ್ವಿ."
ಕಾರ್ಯಕಾರ ಐಯಣ್ಣ ಗದರಿದ :
"ಇನ್ನೊಂದ್ಸಾರ್ತಿ ಹಿಂಗ್ಮಾಡಿದಿರೋ, ನಾವೂ ತಮಾಷಿಗೇ ನಿಮ್ಮ ನಾಲಿಗೆ ಕತ್ತರಿಸಿ ಬಿಟ್ಟೇವು!"
ತುಸು ಯೋಚನೆಗೀಡಾದ ಅರಸ ಅಪ್ಪಣೆ ಕೊಡಿಸಿದ.
"ಐಯಣ್ಣ, ಆ ಸ್ವಾಮಿ ಯಾರೇ ಇರಲಿ, ಇಲ್ಲಿಗೆ ಒಮ್ಮೆ ಕರೆಸಿಬಿಡುವಾ." ಐಯಣ್ಣನೆಂದ:
“ಹೆಣಗಳನ್ನ ಕಾಡಲ್ಲಿ ಎಸೆದು ಬಂದೋನು, ನಾನು. ನನಗೆ ತಿಳೀದಾ ಪ್ರಭುಗಳೇ?" ಬಸವನೆಂದ :
"ಅದಕ್ಕಲ್ಲವೋ! ಆ ಜಂಗಮ ಪವಾಡ ಗಿವಾಡ ಬಲ್ಲ ಅಂತ ಹೇಳತಾರೆ. ಕರಕೊಂಡು ಬಂದು ಭಕ್ತಿಯಿಂದ ಕಾಣಬೇಕಾದ್ದು ಧರ್ಮ."
  "ಅಪ್ಪಣೆ"
                    ೨೪
ಮೈಸೂರು ರಾಜ್ಯದ ಮಂಜರಾಬಾದು ಪ್ರವೇಶ, ಕೊಡಗಿನ ಗಡಿಸೀಮೆ. ಅದರೊಳಗಣ ಆವರ್ತಿಹಳ್ಳಿಗೆ ಅಪರಂಪಾರ ಸ್ವಾಮಿಗೋಸ್ಕರ ಆಮಂತ್ರಣವನ್ನು ಹೊತ್ತು ಮಡಕೇರಿಯ ಅರಮನೆಯಿಂದ ರಾಜದೂತರು ಬಂದರು. ಬೇಹಿನ ಚಾವಡಿಯ ಶಂಕರಪ್ಪ ಆ ತಂಡಕ್ಕೆ ಮುಖ್ಯಸ್ಥನಾಗಿದ್ದ.
 ಕಿಂವದಂತಿಯ ಕಥೆಯನ್ನರಿತಿದ್ದ ಶಂಕರಪ್ಪ, ಸ್ವಾಮಿಯನ್ನು ಕರೆತರುವ ಕೆಲಸಕ್ಕೆ ನಿಯೋಜಿತನಾದಾಗ ತುಸು ಅಳುಕಿದ. ಆತ ವೀರಪ್ಪಾಜಿ ಎಂಬುದೇ ನಿಜವಾದರೆ ಮುಂದೇ ನಾಗುವುದೊ ? ವಿಧಿ ಮತ್ತೆ ತನ್ನನ್ನೆ ಆಟಿಗೆಯಾಗಿ ಬಳಸುತ್ತಿದೆಯಲ್ಲ?
 ಆತ ಚಿತಿಸಿದ:
 ತಂದೆ ಈಗಿದ್ದಿದ್ದರೆ ಏನು ಮಾಡುತ್ತಿದ್ದರು?
–ರಾಜಾಜ್ಞೆಯನ್ನು ಪಾಲಿಸುತ್ತಿದ್ದರು.
ಸ್ವಾಮಿನಿಷ್ಟನಾದ ತಾನಾದರೂ ದೊರೆಯ ಅನುಜ್ಞೆಯಂತೆ ನಡೆಯುವವನೇ. ಅಷ್ಟಕ್ಕೂ ತಾನು ಹೋಗುತ್ತಿರುವುದು ಕರೆಯುವ ದೂತನಾಗಿ ತಾನೆ? ಕಟುಕನಾಗಿ ಅಲ್ಲವಲ್ಲ?
 ಆ ಹತ್ತು ವರ್ಷಗಳ ಅಂತರದಲ್ಲಿ ಹೊಸಳ್ಳಿಯ ತನ್ನ ಬಂಧು ಮಲ್ಲಪ್ಪಗೌಡನನ್ನು ಎರಡು ಮೂರು ಸಾರೆ ಶಂಕರಪ್ಪ ಕಂಡಿದ್ದ.ಮೊದಲ ಸಲ, ನಂಜರಾಜಪಟ್ಣಕ್ಕೆ ತಾನು ಹೋದುದನ್ನು ಕುರಿತು ಮಲ್ಲಪ್ಪ ಹೇಳಿದ್ದ:
 "ದೊರೆ ಮಗ ದೊಡ್ಡ ಮನಿಸ್ಯ ಕಣಪ್ಪ."
 "ಅಯ್ಯನಾಗಿ ಈಕಡೆಗೇನೂ ಬರಲಾರರು ಅನ್ನು."