ಪುಟ:ಸ್ವಾಮಿ ಅಪರಂಪಾರ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೮೭

       "ನಿಮಗೆ ಯಾವ ಆಸೆಗಳೂ ಇಲ್ಲವೆ?
       "ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗೆ ಉಂಟೆ?"
       "ಅದೇನೋ ನಿಜ. ಅಸೆಯೋ ಆರಸರಿಗೆ ; ಚಿಂತೆಯೋ ಅರಸರಿಗೆ...ನವು ಒಂದು

ದೇವಸ್ಥಾನಕ್ಕೆ ನಿಮ್ಮನ್ನು ಅರ್ಚಕರಾಗಿ ಮಾಡತೀವಿ. ಅಲ್ಲಿ ಇರತೀರಾ?"

     "ದೇಹದೊಳಗೆ ದೇವಾಲಯವಿರ್ದು ಮತ್ತೆ ಬೇರೆ ದೇವಾಲಯವೇಕೆ?"
     "ಹೊ..ಯಾರ ಅಂಜಿಕೆಯೂ ನಿಮಗೆ ಇಲ್ಲವೇ?"
    "ಅಂಜಿಕೆ ? ಹರಿವ ಹಾವಿಂಗಂಜೆ,ಉರಿಯ ನಾಲಗೆಂಗಂಜೆ, ಸುರಗಿಯ ಮೊನೆಗಂಜೆ..." 
    "ಸ್ವಾಮಿಗಳೆ, ನೀವು ಆಡಿದ್ದರಲ್ಲಿ ಸಟೆಯೊಂದೂ ಇಲ್ಲವಷ್ಟೆ?"  
    "ಹುಸಿ ಎಂಬುದು ಹೊಲೆ, ಅರಸ. ಶಿವಭಕ್ತಂಗೆ ಹುಸಿ ಎಂಬುದುಂಟೆ?"
    ತನ್ನನ್ನು ಕಾಡಿದ್ದ ಸಂದೇಹಗಳು ದೂರವಾದಂತೆ ಚಿಕವೀರರಾಜನಿಗೆ ಕಂಡಿತು. ಈ

ಧೀಮಂತ ವ್ಯಕ್ತಿಗೆ ತಾನಿನ್ನು ಪ್ರಣಾಮ ಮಾಡುವುದಲ್ಲವೆ ಲೇಸು?-ಎಂದು ಆತ ಚಿಂತಿಸಿದ.

   ತೆರೆಯಾಚೆಗೆ ತನ್ಮಯತೆಯಿಂದ ಅಪರಂಪಾರನ ನುಡಿಗಳನ್ನು ಕೇಳುತ್ತಲಿದ್ದ ರಾಣಿ,

ಹೊರಗೆ ಬರಲು ತವಕಿಸಿದಳು.

    ತಾನು ಕಾಡಿಗೆಸೆದು ಬಂದಿದ್ದ ಶವಗಳಲ್ಲೊಂದು ಜೀವತಳೆಯಿತೆಂಬ ಕುಹಕದ ಕಥೆ

ಸುಳ್ಳೆಂಬುದು ಸಿದ್ಧವಾಯಿತಲ್ಲಾ--ಎಂದು ಐಯಣ್ಣ ಸಂತುಷ್ಟನಾದ.

  ಶಂಕರಪ್ಪನೊಬ್ಬನೇ ವಿವಂಚನೆಯ ಚಕ್ರವ್ಯೂಹದೊಳಗಿಂದ ಹೊರಬರದಾದ. ಸ್ವಾಮಿ

ಮಹಾನುಭಾವ ಎಂಬುದರಲ್ಲಿ ಸಂಶಯವಿರಲಿಲ್ಲ. ಆದರೆ ಮಲ್ಲಪ್ಪ ಆಡಿದ್ದನಲ್ಲ, ವೀರಪ್ಪಾಜಿಗೆ ಶಿವ ಮರಳು ಎಂದು? ಮಲ್ಲಪ್ಪ ಇಲ್ಲಿ ಇದ್ದಿದ್ದರೆ ನಿಜ ಸಂಗತಿ ತಿಳಿಯಲು ಸಹಾಯವಾಗುತ್ತಿತ್ತು. ಅದೇನಿದ್ದರೂ ಸ್ವಾಮಿಯವರು ಇಲ್ಲಿ ತಂಗಿದಷ್ಟು ದಿನ ಅವರ ಸೇವೆಯನ್ನು ತಾನು ಮಾಡಬೇಕು...ಪುಣ್ಯ ಗಳಿಸಬೇಕು...

  ಪ್ರತಿಯೊಬ್ಬರನ್ನೂ ಒಂದೊಂದು ಬಗೆಯ ಯೋಚನೆಯಲ್ಲಿ ಸಿಲುಕಿಸಿದ ಅಪರಂಪಾರ,

ಆ ಭೇಟಿಗೆ ಭರತವಾಕ್ಯವೆನ್ನುವಂತೆ ಅಂದ:

  "ಪರೀಕ್ಷೆಯಾಯಿತಲ್ಲ, ಮಹಾರಾಜ? ಮಹಾದೇವ ನಿನ್ನನ್ನು ಕಾಪಾಡಲಿ. ನಾವಿನ್ನು

ಬರುತೇವೆ. ಶಿವ, ಶಿವ, ಶಿವ !"

  ಮಾತು ಮುಗಿಯುವುದರೊಳಗೇ ದಿವಾಣಖಾನೆಯ ಬಾಗಿಲನ್ನು ಅಪರಂಪಾರ

ದಾಟಿದ್ದ. ಐಯಣ್ಣನೂ ಶಂಕರಪ್ಪನೂ ದಿದಿಗ್ಮೊಢರಾಗಿ ಬದಿಗೆ ಸರಿದಿದ್ದರು. ರಾಣಿಯೂ ಮಗಳೂ ಹೊರಗೆ ಬಂದಿದ್ದರು.

   ಸ್ವಾಮಿಗಳು ಇದ್ದಕ್ಕಿದ್ದಂತೆ ಹೊರಟುಹೋದರಲ್ಲಾ ಎಂದು ಎಲ್ಲರೂ ಆತಂಕ

ಪತಟ್ಟರು.

   ಅಪರಂಪಾರ ತೆರಳಿದೊಡನೆ ಮಾಂತ್ರಿಕ ಪರವಶತೆಯಿಂದ ಮುಕ್ತನಾದವನಂತೆ,ಚಿಕವೀರ

ರಾಜನ ಕಣ್ಣುಗಳು ಮಿನುಗಿದುವು. ಆತ ಬಾಗಿಲಿನತ್ತ ಧಾವಿಸಿದ.

    "ಸ್ವಾಮಿಯವರೆ, ಸ್ವಾಮಿಯವರೆ!"

ಅಪರಂಪಾರನ ಹಾವುಗೆಗಳ ಸದು ಅಡಗಿತ್ತು, ಅವನಾಗಲೇ ಮುಖಮಂಟಪವನ್ನು ಮುಟ್ಟಿದ್ದ.