ಪುಟ:ಸ್ವಾಮಿ ಅಪರಂಪಾರ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೮೯

  ಚಿಕವೀರರಾಜ, ರಾಜ್ಯದ ಸುತ್ತಲೂ ನಿಶಾನಿ ಕಲ್ಲುಗಳನ್ನು ನೆಟ್ಟು ಗಡಿಗಳನ್ನು ಭದ್ರ

ಗೊಳಿಸಿದ್ದ. ಅಪ್ಪಣೆ ಚೀಟಿ ಇಲ್ಲದೆ ಒಳಗಾಗಲೀ ಹೊರಗಾಗಲೀ ಯಾರೂ ದಾಟು ವಂತಿರಲಿಲ್ಲ, ಮೈಸೂರಿನ ಅರಸನನ್ನು ಇಂಗ್ಲಿಷರು ಗದ್ದುಗೆಯಿಂದ ಇಳಿಸಿದ ಮೇಲಂತೂ ಕೊಡಗಿನ ಗಡಿಗಳ ಪಹರೆ ಬಿಗಿಯಾಯಿತು.

    ಕೊಡಗು ರಾಜ್ಯಕ್ಕೆ ಗಂಡಾಂತರದ ದಿನಗಳು ಪ್ರಾಪ್ತವಾಗಲಿವೆ ಎಂದು ಜ್ಯೋತಿಷ್ಕರು

ನುಡಿದಿದ್ದರು. ವಾಸ್ತವವಾಗಿ, ಜ್ಯೋತಿಷ್ಕರೇ ಏತಕ್ಕೆ, ಯಾವ ರಾಜಕೀಯ ಮುತ್ಸದ್ದಿಯೂ ಅದನ್ನು ಹೇಳಬಹುದಾಗಿತ್ತು. ಈ ತಿಳಿವಳಿಕೆ ಸಹಜವಾಗಿಯೇ ಪಿತೂರಿ ಗರಿಗೆದರಲು ಕಾರಣವಾಯಿತು.

   ದಿವಾನ ಬೋಪಣ್ಣನಿಗೆ, ಕೊಡಗನಾದ ತಾನು ರಾಜ್ಯವಾಳಬೇಕೆಂಬ ಅಪೇಕ್ಷೆ ಇರಲಿಲ್ಲ.

ಪ್ರಜೆಗಳು ರಾಜವಂಶದವರಿಗಷ್ಟೇ ನಿಷ್ಟರಾಗಿರುತ್ತಾರೆ ಎಂಬುದನ್ನು ಆತ ಅರಿತಿದ್ದ. ಆದರೆ, ತನಗಿಷ್ಟವಿಲ್ಲದವರನ್ನು ಇಳಿಸಿ ತಾನು ಇಚ್ಚಿಸಿದವರನ್ನು ಪಟ್ಟಕ್ಕೇರಿಸುವ ಸಾಮರ್ಥವುಳ್ಳ ಅಮಾತ್ಯ ತಾನಾಗಬೇಕೆಂಬ ಹಂಬಲ ಅವನಿಗಿತ್ತು, ಚಿಕವೀರರಾಜನ ಆಳ್ವಿಕೆಯನ್ನು ಮುಕ್ತಾಯಗೊಳಿಸಲು ತಾನು ಶಕ್ತನಾದೆ ಎಂದರೆ, ಮುಂದೆ ಯಾರನ್ನು ಅದರ ಮೇಲೆ ಕೂಡಿಸಬೇಕು ? ಚಿಕ್ಕವಳಾದ ಅವನ ಮಗಳನ್ನೆ ? ಅಪ್ಪಂಗಳದಲ್ಲಿರುವ ಅವನ ತಂಗಿ ಯನ್ನೆ ? ಬದಲು, ಮೈಸೂರಿನಲ್ಲಿರುವಂತೆ ಇಂಗ್ಲಿಷರಿಗೇ ರಾಜ್ಯವನ್ನು ವಹಿಸಿಕೊಟ್ಟರೆ? ಯಾವುದಾದರೂ ಸರಿಯೆ, ತನ್ನ ಹಿರಿಮೆ ಹೆಚ್ಚುತ್ತದೆ, ದಿವಾನಪದವಿ ಅಬಾಧಿತವಾಗಿ

ಸಾಗುತ್ತದೆ...
 ಇನ್ನೊಬ್ಬನಿದ್ದ. ಚೆಪ್ಪುಡೀರ ಪೊನ್ನಪ್ಪ. ಮಾಜಿ ದಿವಾನ. ಆಂಗ್ಲ ಅಧಿಕಾರಿಗಳು

ಕೊಡಗಿಗೆ ವಿಹಾರಾರ್ಥವಾಗಿ ಹಿಂದೆ ಬರುತ್ತಲಿದ್ದಾಗ ಅವರ ಸಖ್ಯವನ್ನು ಸಂಪಾದಿಸಿದ್ದ ಮನುಷ್ಯ. ಆತನೂ ರಾಜ್ಯವಂಶದ ಬದ್ಧ ವೈರಿ. ವಯಸ್ಸಾಗುತ್ತ ಬಂದಿದ್ದರೂ ಸದಾ ಚುರುಕಾಗಿದ್ದ ಬುದ್ಧಿ. ಈಗ ತಾಳ್ಮೆಯಿಂದ ಸಂಧಿ ಕಾಯುತ್ತಿದ್ದ,

  ಅಂತಹ ಸಹನೆ ಸಾಧ್ಯವಾಗದೆ ಕುದಿಯುತ್ತಿದ್ದವನೆಂದರೆ ಚನ್ನಬಸಪ್ಪ, "ದುಡುಕಬೇಡ"

ಎಂದು ಬೋಪಣ್ಣ ಹಿತವಚನ ನುಡಿದರೂ ಅವನಿಗೆ ಸಮಾಧಾನವಿಲ್ಲ. ದಿನದಿಂದ ದಿನಕ್ಕೆ ಅವನ ಸಿಡುಕು ಹೆಚ್ಚುತ್ತಿತ್ತು.

 ಆ ವರ್ಷ ಕೊಡಗನ್ನು ಕವಿದ ಕಾರ್ಮೋಡಗಳು ಎಂದಿಗಿಂತ ಹೆಚ್ಚು ದಟ್ಟವಾಗಿದ್ದುವು.
                         ೨೮
 ಧೋ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲೇ, ದಿವಾನರಾದ ಬೋಪಣ್ಣ ಹಾಗೂ

ಲಕ್ಷ್ಮಿನಾರಾಯಣರಿಗೆ ಅರಸನಿಂದ ಕರೆಬಂದಿತು.

 ಲಕ್ಷ್ಮಿನಾರಾಯಣ ಬಂದು ಮುಟ್ಟಿದ ಅರ್ಧ ಘಳಿಗೆಯ ಬಳಿಕ ಬೋಪಣ್ಣನನ್ನು

ಹೊತ್ತ ಮೇನೆ ಅರಮನೆಯನ್ನು ತಲಪಿತು.

 ರಾಜನ ಅಂತಃಪುರದ ಕೊಠಡಿಯಲ್ಲಿ ಲಕ್ಷ್ಮಿನಾರಾಯಣನಾಗಲೇ ಉಪಸ್ಥಿತನಾಗಿದ್ದ.

ಸಹೋದ್ಯೋಗಿ ಒಳಬಂದೊಡನೆ ಎದ್ದು ಗೌರವ ಸೂಚಿಸಿದ.

 ತಲೆಯಾಡಿಸಿದ ಬೋಪಣ್ಣನ ವಂದನೆಯನ್ನು ಸ್ವೀಕರಿಸಿ, ಅರಸನೆಂದ:
“ಕೂತುಕೊಳ್ಳಿ."