ಪುಟ:ಸ್ವಾಮಿ ಅಪರಂಪಾರ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

ರಾಜನ ಮಗುಲಲ್ಲಿ ಲಕ್ಷ್ಮಿನಾರಾಯಣನಿಗೆ ಎದುರು ಬದುರಾಗಿ ಬೋಪಣ್ಣ ಕುಳಿತ.

ಚಿಕವೀರರಾಜ ತನ್ನೆದುರಿಗಿದ್ದ ಬಂಗಾರದ ತಟ್ಟೆಯತ್ತ ಬೊಟ್ಟಮಾಡಿ, "ರಾಜೇಂದ್ರ ನಾಮೆಯ ತಾಡವೋಲೆಯ ಪ್ರತಿ. ಭಂಡಾರದಿಂದ ತರಿಸಿದೇವೆ. ಒಂದೆರಡು ವಿಷಯ ಓದಿ ತಿಳಿಯಬೇಕು ಅನಿಸಿತು. ಲಕ್ಷ್ಮಿನಾರಾಯಣಪ್ಪನವರು ಮೊದಲು ಬಂದರು. ಕುಶಲ ಸಂಭಾಷಣೆ ಮಾಡತಾ. ಇದ್ದೇವೆ" ಎಂದ.
ಗಹನವಾದ ಬೇರೇನನ್ನೂ ಮಾತನಾಡಿಲ್ಲವಷ್ಟೆ-ಎಂದು, ತನ್ನ ಸಮಾಧಾನಕ್ಕಾಗಿ ಸೂಕ್ಷ್ಮ ನೋಟದಿಂದ ಲಕ್ಷ್ಮಿನಾರಾಯಣನನ್ನು ಬೋಪಣ್ಣ ದಿಟ್ಟಿಸಿದ ಮಳೆ ತೊಳೆದ ಗಾಜಿನಂತೆ ಸ್ವಚ್ಛವಾಗಿತ್ತು ಆ ಮುಖ.
ಚಿಕವೀರರಾಜನೆಂದ :
"ಏಳು ವರ್ಷ ಆಯಿತಲ್ಲವೆ ಕಾಸಾಮೇಜರ್ ಇಲ್ಲಿಗೆ ಬಂದು ಹೋಗಿ? ಆವತ್ತು ನನ್ನ ಮನಸ್ಸಿನಲ್ಲಿ ಉತ್ಪನ್ನವಾದ ಶಂಕೆಯ ವಿಷಯ ಹೇಳಿದ್ದೆ, ದಿನ ಕಳೆದ ಹಾಗೆ ಅದು ಬಲ ವಾಗುತ್ತಾ ಬಂದಿದೆಯೆ ಹೊರತು ಕಮ್ಮಿಯಾಗಿಲ್ಲ, ಕಿತ್ತೂರನ್ನು ಇಂಗ್ರೇಜಿಯವರು ವಶಪಡಿಸಿಕೊಂಡದು, ಮೈಸೂರಿನ ರಾಜನನ್ನು ಪದಚ್ಯುತಮಾಡಿದ್ದು, ಇವೆಲ್ಲಾ ಪರಿಸ್ಥಿತಿ ವಿಷಮಿಸತಾ ಇದೆ ಅಂತ ತೋರಿಸ್ತವೆ. ನೀವೇನಂತೀರಿ ಬೋಪಣ್ಣನವರೆ?" 

ಸ್ವಲ್ಪ ಅನುಮಾನಿಸಿ, ಬೋಪಣ್ಣ ಉತ್ತರವಿತ್ರ :

"ಕೊಡಗು ಸ್ವತಂತ್ರ ರಾಜ್ಯ, ನಾವೂ ಇಂಗ್ರೇಜಿಯವರೂ ದೋಸ್ತರು. ಅದರ ಹೊರ ತಾಗಿ ಈಗ ಬೇರೇನದೆ ?"
"ಈ ಮಾತು ಇಷ್ಟೊಂದು ಸ್ಪಷ್ಟವಾಗಿದ್ದರೆ ನಾನು ಚಿಂತಿಸತಾ ಇರಲಿಲ್ಲ, ಕೊಡಗು ಆಶ್ರಿತ ರಾಜ್ಯ, ಇಂಗ್ರೇಜಿಯವರು ನಮ್ಮ ಮೇಲೆ ನಿಗಾ ಮಡಗಬೇಕು ಅಂತ ಇಲ್ಲಿಂದ ಯಾರೋ ತಳ್ಳಿ ಅರ್ಜಿ ಕಳಿಸಿದ ವಿಷಯ ಬೇಹುಗಾರರು ತಿಳಿಸಿದಾರೆ. ಅದನ್ನು ನೀವು బల్లిరి..." 

"ಯಾರೋ ಕ್ಷುದ್ರ ಜನರ ಕೆಲಸ" ಎಂದ ಲಕ್ಷ್ಮಿನಾರಾಯಣ.

"ಮಹಾಸ್ವಾಮಿಗಳು ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೋಬಾರದು" ಎಂದ ಬೋಪಣ್ಣ.
"ನಮ್ಮ ನಮ್ಮಲ್ಲಿ ಒಂದೆರಡು ವಿಷಯ ಸ್ಪಷ್ಟವಾಗಿರಲಿ ಅಂತ ಆ ಪ್ರಸ್ತಾಪ ಮಾಡಿ ದೆವು, ನಮ್ಮ ತೀರ್ಥರೂಪರ ಕಾಲದಲ್ಲಿ ಈ ಮಾತು ಬಂದಿರಲಿಲ್ಲ, ಈಗ ಬಂದದೆ."
ಬೋಪಣ್ಣ ಮಾತನಾಡಲಿಲ್ಲ.
ಚಿಕವೀರಜನೇ ಅ೦ದ: 

"ಲಕ್ಷ್ಮಿನಾರಣಪ್ಪನವರೆ, ಹಾಲೇರಿ ಸಂಸ್ಥಾನ ಹಾಗೂ ಇಂಗ್ರೇಜಿಯವರ ನಡುವೆ ಆದ ಒಪ್ಪಂದದ ವಿಷಯ ಸ್ವಲ್ಪ ಓದತೀರಾ?"

ಅಷ್ಟು ಹೇಳಿ, ಕೈತಟ್ಟಿ ಸೇವಕನನ್ನು ಕರೆದು, ರಾಜ ಆಜ್ಞಾಪಿಸಿದ:
"ಈ ಪೀಟವನ್ನು ದಿವಾನರ ಮುಂದಿಡು."
-ಲಕ್ಷ್ಮಿನಾರಾಯಣ ರೇಶಿಮೆಯ ಹೊದಿಕೆಯನ್ನು ಬಿಚ್ಚಿ, ಕ್ರಮಸಂಖ್ಯೆಯನ್ನು ಪರಿ ಗಣಿಸಿ, ಮೂರನೆಯ ಕಟನ್ನು ತೆರೆದ, ತಾನು ಉಲ್ಲೇಖಿಸಬೇಕಾದ ಭಾಗ ಸರಿಯಾದುದೇ ಎಂಬುದನ್ನೊಮ್ಮೆ ಪರಾಂಬರಿಸಿ, ಆತ ಓದತೊಡಗಿದ.
"ವೀರರಾಜೇಂದ್ರ ಒಡೆಯರವರು, ಸರ್ವ ಬಗೆಯಲ್ಲು ಕಂಪನಿ ಇಂಗ್ರೇಜ ಬಹಾದ್ದರ