ಪುಟ:ಸ್ವಾಮಿ ಅಪರಂಪಾರ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

ಸರಕಾರ ನಂಬಿ, ಕಪಿತಾನ್ ಬ್ರೋನ್ ಸಾಹೇಬರ ಸಂಗಡ, ಇದೇ ಆಶ್ವಿಜ ಶುದ್ಧ ವಿಜಯ ದಶಮಿಯ ದಿವಸ ಕೊಡಗಿನಿಂದ ಹೊರಟು, ತಲಚೇರಿ ಕೋಟೆಗೆ ಹೋಗಿ, ದೊಡ್ಡ ದೊಡ್ಡ ಸರದಾರರ ಯಾವತು ಕಂಡು, ಭೇಟಿ ಆಗಿ, ದೋಸ್ತಿ ಪ್ರಸ್ತಾಪವನ್ನು ಮಾಡಿ, ಭಾಷಾ ಪತ್ರಿಕೆ ಪೂರ್ವೊತ್ರರವಾಗಿ ಮಾತನಾಡಿ, ಒಪ್ಪಿ, ಉಭಯ ಕಡೆಯಿಂದಲೂ ಭಾಷಾಪತ್ರಿಕೆ ಬರೆಸಿದ ಕ್ರಮವೆಂತೆಂದರೆ-" ಲಕ್ಷ್ಮಿನಾರಾಯಣ ತಲೆ ಎತ್ತಿ ಅರಸನ ಕಡೆ ನೋಡಿದ. "ಮುಂದುವರಿಸಿ"ಎ೦ದ ಚಿಕವೀರರಾಜ. "ಶ್ರೀಃ ಇಂಡ್ಯಪ್ರಾಂತ್ಯಕ್ಕೆ ಬಹುಮಾನಪಟ್ಟ ಇಂಗ್ರೇಜಿ ಕಂಪನಿ ಹೆಸರಿಗೆ ತಲಚೇರಿ ಕೋಟೆ ಮೇಜರ್ ರಾಬರ್ಟ್ ಟೇಲರು, ಸೇಂಗುಂದಮಾರು ಕೊಡಗಿನ ಹಾಲೇರಿ ವೀರರಾಜ ಅರಸುಗಳು, ತಮ್ಮ ಒಳಗೆ ಒಪ್ಪಿಗೆ ಆಗಿ, ಬರೆದುಕೊಟ್ಟ ನಂಬಿಕೆ ಕಾಗದದ ವಿವರ: ಒಂದನೇ ಕಲಂ : ಸೂರ, ಚಂದ್ರ ಇರುವ ಪಠ್ಯಂತರಕ್ಕೂ ಇಕ್ಕರ್ತರ ಕಡೆ ವಿಶ್ವಾಸಕ್ಕೂ ಹೆಚ್ಚು ಕಡಮೆ ಬಾರದಂತೆ ನಡೆದು ಬರುವಂಥಾದ್ದಕ್ಕೆ ಹೆಚ್ಚು ಕಡಮೆ ಬರಲಿಕ್ಕೆ ಇಲಾ, ಎರಡನೇ ಕಲಂ : ಟೀಪುಸುಲಾನನಿಗೂ ಅವನ ಕಡೆ ಇರುವ ಯಾವತ್ತೂ ಪಕ್ಷದವರಿಗೂ, ಎರಡೂ ಕಡೆಯ ವರು ಅವರು ನಮಗೆ ಶತು ಎಂತ ಭಾವಿಸಿಕೊಂಡು ಬರಬೇಕು. ಇಂಗ್ರೇಜರಿಗೂ ಅವನಿಗೂ ನಡೆದು ಬರುವಂತ ಲಡಾಯಿಯಲ್ಲು, ಅರಸುಗಳಿಗೆ ಸಮಯ ಸಿಕ್ಕಿದರೆ, ಶತುವಿಗೆ ತಮ್ಮಿಂದ ಆಗುವಷ್ಟು ನಾಶಮಾಡುವುದಕ್ಕೆ ಹಾಜರಾಗಿ ಇರಬೇಕು. ಬೇರೆ, ಕೊಡಗುಮಲೆ ದಾರಿ ಇಂಗ್ರೇಜರ ಪಾಳ್ಯ ಒಂದು ಸಮಯಕ್ಕೆ ಹೋಗುವಾಗ್ಗೆ ಸನ್ಮತ ಇರಬೇಕು. ಯಾತ ರಿಂದ ಎಂದರೆ, ಟೀಪುಸುಲ್ತಾನನ ಕಡೆಗೆ ಹೋಗುವ ಸಮಯ ಬಂದರೆ, ಆವಾಗ್ಗೆ ನಮ್ಮ ಪಾಳ್ಯದವರಿಗೆ ರಾತೀಪು, ಜೀನಸು, ನಿಮ್ಮ ಊರಿನಲ್ಲಿರುವಂಥಾದು ಸಕಾಯ ಕ್ರಯಕ್ಕೆ ಕೊಡಿಸಿ ಸಹಾಯ ಮಾಡಬೇಕು, ಘಟ್ಟದ ಮೇಲೆ ಟೀಪು ಊರಲ್ಲು ನಮಗೂ ಆತಗೂ ಲಡಾಯಿ ಆಗುವಾಗ್ಗೆ, ರಾಜರು ತಮಗೆ ಕೂಡಿದಷ್ಟು ಬಲ ತೆಗೆದುಕೊಂಡು, ಇಂಗ್ರೇಜರ ಕಡೆಯಲ್ಲು ಕೂಡಿ ಇರಬೇಕು. ಮೂರನೆ ಕಲಂ: ನಮ್ಮ ರಾಜ್ಯದಲ್ಲು ಕಂಪೆನಿಗೆ ಆಗುವಂಥ ಸರಕು ಮಾರ್ಯಾದೆಯ ಪ್ರಕಾರ ಸಕಾಯಕ್ರಯಕ್ಕೆ ಕಂಪೆನಿಗೆ ಕೊಡುವ ಬಗ್ಗೆ, ಒಪ್ಪಿಗೆ ಆಗಿ ಇದ್ದೇವೆ. ಬೇರೆ ಟೋಪಿಕಾರ ಜಾತಿಗೆ ಯಾರಿಗೂ ವಾಪಾರ ಮಾಡುವುದಕ್ಕೆ ಒಪ್ಪಿಗೆ ಇಲಾ, ನಾಲ್ಕನೇ ಕಲಂ: ಕಂಪೆನಿಗೆ ಅನ್ಯೋನ್ಯವಿಡಿದು ನಡೆದು ಬರುವಂಥ ಅರಸುಗಳ ಪ್ರಕಾರಕ್ಕೆ, ಟೀಪುಸುಲ್ತಾನನ ಒಂದು ಹುಕುಂ ನಿಮ್ಮ ಮೇಲೆ ನಡೆಯದಂತೆ ಕಂಪೆನಿಯಿಂದ ಆಗುವಂಥ ಪ್ರಯತ್ನಮಾಡಿ, ನಿಮ್ಮನ್ನು ಇರಿಸಿಕೊಳ್ಳುತ್ತೇವೆ, ಟೀಪಗೂ ನಮಗೂ ಒಂದು ವೇಳೆ ಒಳ್ಳಿತಾಗಿ ಹೋಗುತ್ತದೆಯಾದರೆ, ತಹನಾಮೆ ಬರೆದು ಇಡುವಾಗ್ಗೆ ಅದರಲ್ಲು, ಕೊಡಗಿನ ರಾಜರು ಕಂಪೆನಿಗೆ ಅನ್ಯೋನ್ಯವಿಡಿದು ನಡೆದು ಬರುವಂಥಾದ್ದು ಅವರ ಮೇಲೆ ಆತನು ಬಂದು ಜೋರಾವರಿಯು ನಡೆಸದಂತೆ ಅದರಲ್ಲು ಬರಸಿಯೇವು, ಐದನೇ ಕಲಂ: ರಾಜರಿಗೆ ಒಂದು ಸಮಯಕ್ಕೆ ಇಲ್ಲಿಗೆ ಬರಬೇಕಾದರೆ, ಅವರ ಕುಟುಂಬ ಮುಂತಾಗಿ, ಆ ಊರಲ್ಲಿರುವ ರೈತರ ಕುಟುಂಬ ಮುಂತಾಗಿ ಘಟ್ಟದ ಕೆಳಗೆ ಬಂದಲ್ಲಿ, ಇಲ್ಲಿಂದ ಒಂದು ಗಾಡದಿ ಸಿಪಾಯಿಗಳ ಕಳುಹಿಸಿಕೊಟ್ಟು, ದಾರಿಮಾರ್ಗದಲ್ಲಿ ಒಂದು ಅಟಕ ಆಗದಂತೆ ತಂದು, ತಲಚೇರಿಯಲ್ಲು ಒಂದು ಮನೆ ಸಹ ಬಿಡಿಸಿಕೊಟ್ಟ, ರಾಜಸ್ಥಿತಿ ಸೌಖ್ಯವಾಗುವ ಪರಿಯಂತರ ರಕ್ಷಣೆಯಮಾಡಿ, ನಿಲ್ಲಿಸಿಕೊಳ್ಳುತ್ತಾ ಇದೆ. ಪುನಃ ರಾಜಸ್ಥಿತಿ ಸೌಖ್ಯವಾಗುತ್ತಲೆ,