ಪುಟ:ಸ್ವಾಮಿ ಅಪರಂಪಾರ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

ನಿಮ್ಮ ಊರಿಗೆ ಸಂಗಡ ಮನುಷ್ಯರ ಕೂಡಿಸಿ, ಚನಾಗಿ ಕಳುಹಿಕೊಡುವಲ್ಲಿ ಅಂತರವಿಲ್ಲಾ, ಈ ಕಾರಕ್ಕೆ ಅನ್ಯೋನ್ಯ ನಡೆದುಬರುವಲ್ಲಿ, ಎಂದಿಗೂ ಹೆಚ್ಚು ಕಡಿಮೆ ಬಾರದಂತೆ, ಇಕ್ಕರ್ತರಿಗೂ ಅಂತರ ಬರಲಿಕ್ಕಿಲಾ, ಈ ಕಾರಕ್ಕೆ ಎರಡು ಕಡೆಯವರಿಗೂ ಸಾಕ್ಷಿ: ల్చిద్వచారు, ಸೂರ, ಚಂದ್ರ, ಭೂಮಿ ಸಾಕ್ಷಿ. ಸಾಧಾರಣ ಸಂವತ್ಸರ ಆಶ್ವಿಜ ಬಹುಳ ೫ರಲ್ಲು, ತಲಚೇರಿಯಲ್ಲಿ ಇರುವಂಥ ಮೇಜರ್ ರಾಬರ್ಟ್ ಟೇಲರೂ ಕೊಡಗಿನ ಹಾಲೇರಿ ವೀರರಾಜೇಂದ್ರ ರಾಜರೂ ಒಂದು ಮನಸಾಗಿ ಈ ವರ್ಷ ಈ ತಿಂಗಳು ಈ ದಿನದಲ್ಲು ಬರೆದು ಇಟ್ಟ ನಿಶ್ಚಯ ಕಾಗದಕ್ಕೆ ನಮ್ಮ ಹೆಸರಲ್ಲು ಗುರ್ತುಹಾಕಿ, ಕಂಪೆನಿ ಮೋಹರ ಮಾಡಿ, ಎರಡು ಕಡೆಗೂ ಬರೆದುಕೊಟ್ಟ ಇದ್ದೇವೆ. ಶ್ರೀ ಶ್ರೀ ಶ್ರೀ ಶ್ರೀ ಶ್ರೀ"

ಲಕ್ಷ್ಮಿನಾರಾಯಣನ ಓದಿನುದ್ದಕ್ಕೂ ಬೋಪಣ್ಣ ಮಡಿಲಲ್ಲಿ ಅಂಗೈಗಳನ್ನಿರಿಸಿ ಗಂಭೀರ ವದನನಾಗಿ ಕುಳಿತ.. ಒಡಂಬಡಿಕೆಯ ದಾಖಲೆಯನ್ನು ತನ್ನ ಸಹೋದ್ಯೋಗಿ ಓದಿ ಮುಗಿಸಿದ ಮೇಲೂ ಆತ ಮುಖಭಾವವನ್ನು ಬದಲಿಸಲಿಲ್ಲ.
ಒಮ್ಮೆ ಅರಸನ ಮುಖವನ್ನೂ ಒಮ್ಮೆ ಬೋಪಣ್ಣನ ಮುಖವನ್ನೂ ಲಕ್ಷ್ಮಿನಾರಾಯಣ ನೋಡಿದ.
ದೀರ್ಘವಾಗಿ ಉಸಿರೆಳೆದು ಬಿಟ್ಟ ಚಿಕವೀರರಾಜನೆಂದ:
"ಸಾಧಾರಣ ಸಂವತ್ಸರ ಅಂದರೆ ಇವತ್ತಿಗೆ ಸುಮಾರು ನಾಲ್ವತು ನಾಲ್ವತ್ತೆರಡು ವರ್ಷ ಆಯಿತು. ನಮ್ಮ ದೊಡ್ಡಪ್ಪನವರಿಗೂ ಇಂಗ್ರೇಜಿಯವರಿಗೂ ಆದ ಆ ಒಪ್ಪಂದಕ್ಕೆ ಶ್ರೀದೇವರು, ಸೂರ, ಚಂದ್ರ, ಭೂಮಿ ಸಾಕ್ಷಿ ಅಂತ ಹೇಳಲಿಲ್ಲ? ಶ್ರೀದೇವರನ್ನಿನ್ನೂ ಅವರು ಪದಚುತಿ ಮಾಡಿಲ್ಲ.. ಸೂರಗೋಲ ಉರೀತಾನೇ ಅದೆ, ಕೃಷ್ಣಪಕ್ಷ ಶುಕ್ಲಪಕ್ಷಗಳು ಈಗಲೂ ಅವೆ. ಭೂಮಿ ಮುಳುಗಿಲ್ಲ, ಅಂದ ಮೇಲೆ ಸಾಕ್ಷಿದಾರರೆಲ್ಲ ಅದಾರೆ ಅಂತಾಯು ಅಲ್ಲವ ಲಕ್ಷ್ಮಿನಾರಾಣಪ್ಪನವರೆ?”
"నిజ ಮಹಾಸ್ವಾಮಿ."
- "ಆದರೆ ಈ ನಲ್ವತು ವರ್ಷಗಳಲ್ಲಿ ನಮ್ಮ ಅವರ ಸಖ್ಯ ಯಾವ ಜಾಡು ಹಿಡಿದಿದೆ? ನಾವದನ್ನ ನೋಡಿರೋದಕ್ಕಿಂತಲೂ ಹೆಚ್ಚು ವರ್ಷ ನೀವು ಕಂಡಿದೀರಿ, ಟೀಪೂನ ಸೋಲಿ ಸೋದಕ್ಕೆ ನಮ್ಮ ದೊಡ್ಡಪ್ಪ ಇಂಗ್ರೇಜಿಯವರಿಗೆ ಬಾಳ ಸಹಾಯ ಮಾಡಿದರಂತಲ್ಲ? ಒಂದು ದಮಡಿ ಕೂಡಾ ತಕ್ಕೊಳ್ಳದೆ ಕರಾರು ಮಾಡಿದ್ದಕ್ಕಿಂತ ಹತು ಪಾಲು ಅಕ್ಕಿ ಜಮಾ ಯಿಸಿ ಕೊಟ್ಟರಂತಲ್ಲ? ಹಲವು ಸಹಸ್ರ ಹೋರಿ ಕುರಿ ಒದಗಿಸಿದರಂತಲ್ಲ? ಘಟ್ಟದ ಕೆಳಗಿನ ಮಲೆಯಾಳದಿಂದ ಪೆರಿಯಾಪಟ್ಟಣದ ಮಾರ್ಗವಾಗಿ ಮೈಸೂರಿಗೆ ಹೋಗೋಕೆ ದಾರಿ ಬಿಟ್ಟರಂತಲ್ಲ? ತಾವೂ ದಂಡು ತಕ್ಕೊಂಡು ಮೈಸೂರು ಸೀಮೆಯ ಮೇಲೆ ಬಿದ್ದರಂತಲ್ಲ ? ಇದಕ್ಕೆಲ್ಲ ಪ್ರತಿಫಲವಾಗಿ ಇಂಗ್ರೇಜಿಯವರು ನೀಡಿದ್ದೇನು?"
ಲಕ್ಷ್ಮಿನಾರಾಯಣನೆಂದ:
"ಟೀಪೂ ಸೋತ ಮೇಲೆ, 'ನೀವು ಆತಗೆ ಕಪ್ಪಕೊಡತಿದ್ದಿರಂತೆ. ಈಗ ವರ್ಷಕ್ಕೆ ಇಪ್ಪತ್ತನಾಲ್ಕು ಸಾವಿರ ರೂಪಾಯಿ ನಮಗೆ ಕೊಡಿರಿ'-ಅಂದರು."
"ಹ್ಯ, ದೊಡ್ಡಪ್ಪ ಪ್ರತಿಭಟಿಸಿದ್ದರಿಂದ, ಹಣ ಬೇಡ–ಅದರ ಬದಲು ಒಂದು ಆನೆ ಸಾಕೂಂತಾಯು, ಮುಂದೆ ಆನೆ ಕೊಡೋದೂ ನಿಂತುಹೋಯು."
ಬೋಪಣ್ಣ ತನ್ನ ಸಹೋದ್ಯೋಗಿಯ ಕಡೆ ನೋಡಿ ಅಂದ: