ಪುಟ:ಸ್ವಾಮಿ ಅಪರಂಪಾರ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

"ಇಂಗ್ರೇಜಿಯವರು ಹಾಗೆ ಕೇಳಿದ್ದು ತಪ್ಪ ತಿಳಿವಳಿಕೆಯಿಂದ ಅನ್ನಿ." ಚಿಕವೀರರಾಜ ವ್ಯಂಗ್ಯ ಬೆರೆತ ಧనియుల్లి ಅ೦ದ :

"ನೀವು ಅವರ ಕಡೆ ವಾದಿಸತಾ ಅದೀರಲ್ಲ ಬೋಪಣ್ಣನವರೆ!" 

"ಅಂಥಾದ್ದೇನಿಲ್ಲ. ಇದ್ದ ಸಂಗತಿ ಹೇಳ್ವೆ,"

 “ನಾವು ಇಲ್ಲದ ಸಂಗತಿ ಆಡತಾ ಇಲ್ಲವಲ್ಲ?ಶ್ರೀದೇವರು ಸೂರ್ಯ, ಚಂದ್ರ, ಭೂಮಿ ಸಾಕ್ಷಿಯಾಗಿ ಒಡಂಬಡಿಕೆ ಮಾಡಿಕೊಂಡವರು ಅದನ್ನು ಪಾಲಿಸಬೇಕು. ಸ್ವತಂತ್ರ ರಾಜ್ಯ ಇದ್ದದು ಬೆಳಗಾಗೋದರೊಳಗೆ ಆಶ್ರಿತ ರಾಜ್ಯ ಹಾಗಾಗತದೆ? ಅವರೇನು ದೌಡು ಮಾಡಿ ಗೆದ್ದ ಸೀಮೇನಾ ಇದು ? ಕಾಪ್ರನ್ ಮಾಂಕ್, ಇಮಾನುಅಲ್ ಪೆರೀರಾ, ಸಾಮುಅಲ್ ಜೋಸೆಫ್–ಅವರೆಲ್ಲ ಬಂದು ಹೋದರಲ್ಲ? ಯಾಕೆ? ರಾಜ್ಯ ವ್ಯವಸ್ಥೆ ಹಾಗೆ ನಡದದೇಂತ ತಿಳಕೊಂಡು ಬನ್ನಿ-ಅಂದರಂತೆ. ನಮ್ಮದು ಹಾಗೇ ನಡೀಲಿ, ಆವರಿಗೇನು ?"
ಬೋಪಣ್ಣನೆಂದ:
"ಮಹಾಸ್ವಾಮಿಗಳ ಮನಸ್ಸು ತಿಳೀಲಿಲ್ಲ. ಏನು ಮಾಡಬೇಕು ಅಂತೀರಿ ?"
"ಹೇಳತೀನಿ. ತುಸ ಬಗ್ಗಿದರೆ ಸಾಕು, ಬೆನ್ನ ಮೇಲೆ ಕೂತೇವು ಅಂತಾರೆ. ಇಂಥಾದು ನಡೀಲಿಕ್ಕಿಲ್ಲ: ಸರಿಸಮಾನರೊಳಗೆ ಸಖ್ಯ-ಅಂತ ಸ್ಪಷ್ಟವಾಗಿ ಅನ್ನಬೇಕು. ಅರಮನೆ ಅಳಿಯ ಚನ್ನಬಸಪ್ಪ ಆ ಹೊರಗಿನವರ ಕೂಡೆ ಪತ್ರ ವ್ಯವಹಾರ ಮಡಗಿದ್ದಾರೆ ಅಂತ ನಮಗೆ ಸಂಶಯ, ಬೋಪಣ್ಣನವರು ಅವರಿಗೆ ಬುದ್ಧಿವಾದ ಹೇಳಬೇಕು. ಆ ಮೇಲೆ ಹಾಗಾಯಿತು ಹೀಗಾಯಿತು ಅಂತ ದೂರಬಾರದು."
ಬೋಪಣ್ಣನನ್ನು ಕೆಣಕಿದಂತಾಯಿತು.
"ಆತ ಪೂರ್ವಾಶ್ರಮದಲ್ಲಿ ಕೊಡವ ಅಂತ ನನಗೆ ಈ ಮಾತು ಹೇಳೋಣಾಗತದೆಯೊ?"
"ಛೆ! ಛೆ! ನೀವು ಅಂದರೆ ಅವನಿಗೆ ಗೌರವ. ಅರಮನೆಗೆ ಬರದಿದ್ದರೂ ನಿಮ್ಮಲ್ಲಿಗೆ ಬಂದು ಹೋಗತಾನೆ. ಒಂದು ಮಾತು ಹೇಳಿ ನೋಡಿ. ಆತ ಕೇಳಲಿಲ್ಲ ಅಂದರೆ ಮುಂದಿನದು ನಮಗೆ ಸೇರಿದ್ದು."
 ಮೌನವೇ ಸಮ್ಮತಿ ಎನ್ನುವಂತೆ ಬೋಪಣ್ಣನೂ ಲಕ್ಷ್ಮಿನಾರಾಯಣನೂ ಕುಳಿತರು. ಅರಸನೆಂದ :
"ಕಡೆಯದಾಗಿ ಒಂದು ವಿಷಯ. ನಮ್ಮನ್ನು ಎದುರು ಹಾಕಿಕೊಳ್ಳೋ ಮೂರ್ಖತನ ಇಂಗ್ರೇಜಿಯವರು ಮಾಡಲಾರರು. ಒಂದು ಪಕ್ಷಕ್ಕೆ ಆ ದುರ್ಬುದ್ಧಿ ಅವರಿಗೆ ಉಂಟಾದ್ದೇ ಆದರೆ ನಮ್ಮ ರಾಜ್ಯದ ರಕ್ಷಣೆ ನಾವು ಮಾಡೋದಕ್ಕೆ ಶಕ್ತರಾಗಬೇಕು. ಈ ಮಾತು ಎಲ್ಲ ತಕ್ಕರಿಗೆ ಕಾರ್ಯಕಾರರಿಗೆ ಮುಟ್ಟಬೇಕು."
"ಸರಿ, ಅಷ್ಟೇ ಅಲ್ಲವಾ?" ಎಂದ ಬೋಪಣ್ಣ, ಏಳಲು ಸಿದ್ಧನಾಗಿ.
"ಅಷ್ಟೇ, ನೀವಿನ್ನು ಹೊರಡಬಹುದು. ಮಳೆಯೂ ನಿಂತಿದೆ." ಲಕ್ಷ್ಮಿನಾರಾಯಣ ತಾಳೆಗರಿಯ ಕಟ್ಟುಗಳನ್ನು ಮೊದಲಿದ್ದಂತೆ ಜೋಡಿಸಿ, ರೇಶಿಮೆಯ ಗಂಟುಕಟ್ಟಿ ಎದ್ದು, ಬೋಪಣ್ಣನನ್ನು ಹಿಂಬಾಲಿಸಿದ. ಮುಖಮಂಟಪದವರೆಗೂ ಚಿಕವೀರ ರಾಜ ಅವರ ಜತೆಗೆ ಬಂದ.
ಮಳೆ ನಿಂತು, ಕೆಳಗೆ ಚರಂಡಿಗಳಲ್ಲವೂ ಗುಡ್ಡದ ತಪ್ಪಲುಗಳಲ್ಲಾ ಜುಳುಜುಳು ನೀರು