ಪುಟ:ಸ್ವಾಮಿ ಅಪರಂಪಾರ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

ಹರಿಯುತ್ತಿತ್ತು ಮನೆ ಮಾಡಗಳ ಮೇಲಿಂದ ಉಗಿ ಏಳುತ್ತಿತು, ಮೈ ತೊಳೆದುಕೊಂಡ ಹಸಿರು ಕಣ್ಣಿಗೆ ಹಬ್ಬವಾಗಿತು. ಚಿಕವೀರರಾಜನೆಂದ :

"ಗುಡುಗು, ಮಿಂಚು, ಮಸಲಧಾರೆ-ಯಾವುದಕ್ಕೂ ನಾವು ಹೆದರೋದಿಲ್ಲ. ಯಾಕೆ ? ಸ್ವಲ್ಪ ಹೊತ್ತಿನಲ್ಲೇ ಎಲ್ಲಾ ಶಾಂತವಾಗತದೆ ಅಂತ ನಾವು ಬಲ್ಲೆವು. ಹಾಗೆಯೇ, ಯಾವ ಗಂಡಾಂತರ ಒದಗಿದರೂ ನಾವು ರ್ಯದಿಂದ ಇರತೇವೆ. ಆ ಗಂಡಾಂತರ ಖಂಡಿತವಾಗಿ ಕಳೀತದೆ–ಅಂತ ನಮಗೆ ಗೊತ್ತದೆ."


ಅಬ್ಬಾಸ್ ಅಲಿ, ಅಪ್ಪಂಗಳದ ಅರಮನೆಯ ಸುತ್ತಲೂ ಪಹರೆ ಇಡುವುದು ಮೇಲುಎಂದು ಅರಸನಿಗೆ ಸಲಹೆ ಮಾಡಿದ ಆ ಸಂಬಂಧದ ಆಜ್ಞೆಯನ್ನು ಕೃತಿಗಿಳಿಸಲು ಬಸವ ಉದ್ಯುಕ್ತನಾದ.

ಆದರೆ ಕಾರ್ಯ ಮಿಂಚಿತು, ಚನ್ನಬಸಪ್ಪನಾಗಲೀ ದೇವಮಾಜಿಯಾಗಲೀ ಅರಮನೆ ಯಲ್ಲಿ ಇರಲಿಲ್ಲ. ಇಬ್ಬರು ಆಪ್ತ ಸೇವಕರನ್ನು ಸಂಗಡ ಕರೆದುಕೊಂಡು ಕುದುರೆಗಳನ್ನೇರಿ ಅವರು ಓಡಿಹೋಗಿದ್ದರು. ಅದು ಸಂಭವಿಸಿದು ಹೀಗೆ :

ಅರಸನ ಭೇಟಿಯಿಂದ ಬೋಪಣ್ಣ ಮನೆಗೆ ಮರಳಿದನಷ್ಟೆ, ಆ ರಾತ್ರೆ ಚನ್ನಬಸಪ್ಪ ಅಲ್ಲಿಗೆ ಬಂದ.
"ದೊರೆಗೆ ನಿನ್ನ ಮೇಲೆ ಸಂಶಯ. ನೀನು ಹುಷಾರಾಗಿರಬೇಕು" ಎಂದ ಬೋಪಣ್ಣ 

"ನನ್ನನ್ನು ಹಿಡಿದು ಕೋಟೆಮನೆಯಲ್ಲಿ ಕೂಡಹಾಕಬಹುದು ಅಂತಿರಾ?"

"ಹಾಗೂ ಮಾಡಬಹುದು, ತೋಫಿನ ಬಾಯಿಗಿಟ್ಟ ಸುಡಲೂಬಹುದು. ಯಾರು ಕಂಡ: ”
"ಒಳ್ಳೇದು. ಹಂಗಾರೆ ಸದ್ಯಕ್ಕೆ ಇದು ನಮ್ಮ-ನಿಮ್ಮ ಕಡೇ ಭೇಟಿ, ಇವತು ರಾತ್ರೆಯೇ ಮೈಸೂರು ಸೀಮೆಗೆ ಹೊರಟುಹೋಗತೇವೆ."
"ದುಡುಕಬೇಡ-ಆಂತಷ್ಟೇ ನಾ ಹೇಳೋದು."
"ಹೇಳೋಕೆ ಹೊಸದೇನೂ ಇಲ್ಲ, ಅನ್ನಿ, ಸರಿ, ಇಂಗ್ರೇಜಿ ದಂಡಿನ ಜತೆ ಬರತೀನಿ. ಆಗ ಕಾಣೂಣ."
"ಹೋಗಿ ಬಾ" ಎಂದ ಬೋಪಣ್ಣ,
ಅಪ್ಪಂಗಳವನ್ನು ಚನ್ನಬಸಪ್ಪ ತಲಪಿದ ಒಂದೆರಡು ಘಳಿಗೆಯಲ್ಲೇ, ನಾಲ್ಕು ಕುದುರೆ ಗಳು ಪೆರಿಯಾಪಟ್ಟಣದ ಕಡೆಗೆ ಹೊರಟುವು.
ಬೆಳಗ್ಗೆ ಅಪ್ಪಂಗಳಕ್ಕೆ ಬಂದ ರಾಜಭಟರಿಗೆ ಗಂಗಮ್ಮನೆಂದಳು :
"ನಮಗೆ ಒಂದೂ ತಿಳಿದು. ಅವರಿಲ್ಲ ಅನ್ನೋದು ಈಗಷ್ಟೇ ಗೊತಾಯು." 

ಭಟರು ತಡವಿಲ್ಲದೆ ಮಡಕೇರಿಗೆ ಸುದ್ದಿ ತಲಪಿಸಿದರು.

ಚನ್ನಬಸಪ್ಪ ಪತ್ನಿಯೊಡನೆ ಇಂಗ್ಲೀಷರ ಸೀಮೆಗೇ ಓಡಿರಬೇಕೆಂಬ ಬಗೆಗೆ ಎಲ್ಲರದೂ