ಪುಟ:ಸ್ವಾಮಿ ಅಪರಂಪಾರ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂವಾರ ೯೫

 ಒಮ್ಮತವೇ. ಆದರೆ ಅದರು ಹಿಡಿದದ್ದು ಯಾವ ದಾರಿ? ಅಪ್ಪಂಗಳಕ್ಕೆ ಹತ್ತಿರದ ಸಂಪಾಜೆ   
 ಗಡಿಗೋ? ಪೆರಿಯಾಪಟ್ಟಣಕ್ಕೊ ?
    ಸಶಸ್ತ್ರ ಕುದುರೆ ಸವಾರರು ಎರಡು ದಿಕ್ಕುಗಳಿಗೂ ಧಾವಿಸಿದರು.
    ಸಂಪಾಜೆಯ ಗಡಿಯತ್ತ ಅವರು ಬಂದಿರಲಿಲ್ಲ.
    ಪೆರಿಯಾಪಟ್ಟಣದ ಕಡೆಯ ಉಕ್ಕಡದಲ್ಲಿ ಪಹರೆಯವರಿಬ್ಬರು ಅಸಾಮಾನ್ಯ ಗುರಿ 
 ಕಾರನಾದ ಚನ್ನಬಸಪ್ಪನ ಗುಂಡಿಗೆ ಮಟ ಮಟ ಮಧ್ಯಾಹ್ನ ಬಲಿಯಾಗಿದ್ದರು. ಸಂಜೆ
 ಬಂದು ಸೇರಿದ ರಾಜಭಟರು ಆ ಶವಗಳನ್ನು ಕಂಡರು.
    ಇದನ್ನು ತಿಳಿದ ಚಿಕವೀರರಾಜ ಕಿಡಿಕಿಡಿಯಾದ. ಈ ಪಲಾಯನದ ಹಿಂದೆ ಬೋಪಣ್ಣನ
 ಕೈವಾಡವಿರಬಹುದೇ ಎಂಬ ಸಂದೇಹ ಅವನಿಗೆ. ಆದರೆ, ಸಾಕಷ್ಟು ಆಧಾರಗಳಿಲ್ಲದೆ,
 ಬಹಿರಂಗವಾಗಿ ಅವನೇನನ್ನೂ ಆಡಲಾರ.
   "ಇರಲಿ. ಇದನ್ನು ಸರಿಪಡಿಸುತ್ತೇನೆ" ಎಂದುಕೊಂಡ ಮನಸ್ಸಿನಲ್ಲೆ.
   ದಿವಾನ ಲಕ್ಷ್ಮೀನಾರಾಯಣನನ್ನು ಬರಹೇಳಿ, ನಡೆದುದನ್ನು ತಿಳಿಸಿ, "ಮೈಸೂರಿನ
 ರೆಸಿಡೆಂಟನಿಗೆ ಒಂದು ಪತ್ರ ಬರೆಯಬೇಕಲ್ಲ" ಎಂದ.
    ಲಕ್ಷ್ಮೀನಾರಾಯಣ ವಿನಂತಿ ಮಾಡಿದ:
    "ಬೋಪಣ್ಣನವರನ್ನೂ ಒಂದು ಮಾತು ಕೇಳೋಣ__ಆಗದೆ?”
    "ಇದು ಚಿಲ್ಲರೆ ವಿಷಯ. ಇಷ್ಟಕ್ಕೆ ಇಬ್ಬರು ಬೇಕೆ? ಇದೇನೂ ಸಲಹೆ ತಕ್ಕೊಳ್ಳುವಂಥಾ
 ಗಹನ ರಾಜಕಾರ್ಯ ಅಲ್ಲವಲ್ಲ?”
   "ತಮ್ಮ ಚಿತ್ರ."
   ಪತ್ರ ಸಿದ್ಧವಾಯಿತು. ಒಕ್ಕಣೆಯಲ್ಲಿ ವಿನಯವಿತು.
   "ನಮ್ಮ ತಂಗಿ ದೇವಮಮ್ಮಾಜಿ ಹಾಗೂ ಆಕೆಯ ಗಂಡ ಚನ್ನಬಸಪ್ಪ ನಮ್ಮ ವಿರುದ್ಧ
 ವಾಗಿ ವರ್ತಿಸಿ ತಮ್ಮ ಸೀಮೆಗೆ ಬಂದಿದ್ದಾರೆ. ಅತಃ ಪ್ರಾಕು ನಡೆದುಕೊಂಡು ಬಂದಿರುವ
 ನಮ್ಮ ನಿಮ್ಮ ಸಖ್ಯವನ್ನು ಲಕ್ಷ್ಯದಲ್ಲಿಟ್ಟ ಅವರಿಬ್ಬರನ್ನೂ ಯಾವ ಕಾರಣದಿಂದಲೂ ತಡ
 ಮಾಡದೆ ನಮ್ಮ ರಾಜಧಾನಿಗೆ ಸಶಸ್ತ್ರ ಕಾವಲಿನಲ್ಲಿ ರವಾನೆ ಮಾಡಬೇಕಾಗಿ ಕೋರುತ್ತೇವೆ.
 ಮಹಾದೇವನ ಅನುಗ್ರಹದಿಂದ ನಾವೆಲ್ಲರೂ ಕ್ಷೇಮ. ನಮ್ಮ ದೋಸ್ತರಾದ ಖಾವಂದರ
 ಕ್ಷೇಮಸಮಾಚಾರಕ್ಕೆ ಆಗಾಗ್ಗೆ ಬರೆಸುತ್ತಾ ಇರಬೇಕಾಗಿ ನಮ್ಮ ವಿನಂತಿ."
   ಸಹಿ ಮೊಹರಿನ ಕೆಳಗೆ ವಿಶದವಾಗಿ ಬರೆಯಲಾಗಿತು :
   'ಕೊಡಗು ಸಿಂಹಾಸನಾಧೀಶ್ವರ ಹಾಲೇರಿ ಸಂಸ್ಥಾನದ ಚಿಕವೀರರಾಜೇಂದ್ರ ಒಡೆಯರ್.'
   ಅರಸ ಕುದುರೆ ಸವಾರರಾದ ಇಬ್ಬರು ಓಲೆಕಾರರೊಡನೆ ಪತ್ರವನ್ನು ಶ್ರೀರಂಗಪಟ್ಟಣಕ್ಕೆ
 ಕಳುಹಿಸಿಕೋಟ್ಟ.
                            ೩೦
   ಶ್ರೀರಂಗಪಟ್ಟಣವನ್ನು ತಲಪಿದ ಚನ್ನಬಸಪ್ಪ, ಕಾಸ್ಸಾಮೇಜರನೆದುರು."ಶರಣಾರ್ಥಿ
 ಗಳಾಗಿ ಬಂದಿದೇವೆ. ಕೈಹಿಡಿದು ಉದಾರ ಮಾಡಬೇಕು" ಎಂದು ಹಿಂದೂಸ್ಥಾನಿಯಲ್ಲಿ
 ಪ್ರಾರ್ಥಿಸಿದ.
   ರೋಗಿ ಬಯಸಿದ್ದೇ ಇಂಥ ಹಾಲನ್ನವನ್ನು. ಅಲ್ಲದೆ, ದೇವಮ್ಮಾಜಿಯೂ ಆಕೆಯ