188 ಹನುಮದ್ರಾಮಾಯಣ. ಅದರಿಂದತಿಭೀತಿಯೋಳಂ | ಬೆದರುತೆ ಬಳಲುತ್ತೆ ಬಾಧೆಯಿಂ ಬಸವಳಿದಂ || ದೊದರ್ದ ದಾನವನಾಗಳ್ | ಸದಯಾ ಸುಗ್ರೀವ ರಕ್ಷಿಸೆನ್ನನೆನುತ್ತಂ || ೯೦ || ರಾವಣನನುಚರನೆಂ ಸು | ಗ್ರೀವನೆ ನಿನ್ನಣ್ಣನಾತಗಂ ಭ್ರಾತೃ ಗಡಾ | ಆ ವಿಬುಧೇಶನ ಸುತನೊಳ | ತೀವಸ್ಸೇಹದೊಳಗಾಯ್ತು ಗಡ ಸಂಬಂಧಂ | ೯೧ || ಅವನನುಜಂ ನೀನಾಗಿರ | ಲವನಿಂದೆಮಗಧಿಕನ ಮನುಜಗೆ ಸಾಹಾ | ಯೌವನೆಸಗೆನೇಡಮೆಂಬೀ | ವಿವರಮನೊರೆ ನಿನ್ನೊಳೆಂದು ಕಳಿಸಿದನೆನ್ನಂ || ೯೨ || ಅಸುರೇಶನೆಂದ ವಿವರಮ್ || ನುಸಿರಿಯ್ತಂದ ದೂತನಂ ಕಪಿಗಳ್ಳಾ ! ತಿಸುವೊಡದೇನಪರಾಧಮ | ನೆಸಗಿದೆನಯ್ ಬಿಡಿಸು ರಾಮ ಕೃಪೆಯಿಂದೆನ್ನ !! ೯೩ || ಕರುಣಿಯಲಾ ರಾಘವ ವಾ | ನರರುಪಹತಿಯಿಂದೆ ನೊಂದೆನೆಂದಾಗಸದೊಳ್ | ಮೊರೆಯಿಡೆ ಕೇಳುತ್ಯಂ ರಘು | ವರನಿನಜಂಗೊರೆದು ಬಿಡಿಸಿದಂ ತತ್ಸಳನಂ || ೯೪ | ಅಲಸದೆ ತದ್ದನುಜಂ ದಶ | ಗಳನೊಳ್ ತಾನೇನನೊರೆಗುಮೆನೆಯವನಂ ತಾಂ || ಮುಳಿಸಿಂ ರವಿಚಂ ಬಂಧನ | ದೊಳಗಿರಿಸಿದನಲ್ಲಿಗೆಯ್ದಿ ದಂ ಶಾರ್ದೂಲಂ | ೯೫ || ತನುವಂ ಮರೆಗೊಂಡುಂ ವಂ | ಚನೆಯಿಂ ಬಂದಮಿತಬಲಮನೀಕ್ಷಿಸಿ ಮಗುಳ್ಳುಂ || ದನುಜಂ ಬಿತ್ತರಿಸಲ್ಕಂ | ಮನದೊಳಿಂತಿಸುತುಮಿರ್ದ್ದನಾ ದಶಕ೦ರಂ || ೯೬ || ಇತ್ತಲ್ ಕಡಲಂ ಕಟ್ಟಲ್ | ವೊತ್ತಿಕ್ಕಿದರಂದು ಪಿರಿಯ ಗಿರಿಯಂ ಗಿರಿಯಂ |
ಪುಟ:ಹನುಮದ್ದ್ರಾಮಾಯಣಂ.djvu/೧೪೬
ಗೋಚರ