ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ಹನುಮದ್ರಾಮಾಯಣ. ಪುನರುದ್ಭವಿಸಿದೆನೆನುತಂ | ಮನಗುಂದುತೆ ಬಂದು ಗೋಪುರದೊಳಿರೆ ದನುಜೇ || ಶನನೀಕ್ಷಿಸಿ ಕಂಪಿಸುತಂ | ವಿನಮಿಸಿ ಕಯ್ಯುಗಿದು ಪೇಳನಾ ವೃತ್ತ ಮನುಂ | ೧೨೦ | ಅವಧರಿಪುದರಸ ನೀನಾ | ರವಿಸಂಭವನೆಡೆಗೆ ಕಳಿಸೆ ವಾನರಸೇನಾ || ನಿವಹದೊಳೆಯ್ಲ್ ಕಪಿಗಳ್ | ತಿವಿತಿವಿದೆಳೆದು ರೆನ್ನನದನೇವೇಳ್ತಂ || ೧೨೧ || ತಂತಮಗೆ ಬಂದು ಕಪಿಗಳ | ತಿಂತಿಣಿ ನಖದಂಷ್ಟದಿಂದ ಘಾತಿಸೆ ಸೀತಾ || ಕಾಂತಗೆ ಮೊರೆಯಿಡೆ ಕರುಣಾ | ಸ್ವಾಂತದೆ ತಲೆಗಾಯನೆನ್ನನಸುರೋತ್ತಂಸಾ || ೧೨೨ || ನೀನೆಂದುದನಾ ಭಾಸ್ಕರ | ಸೂನುಗೆ ಪೇಳಿ ಕೇಳು ಬಂಧಿಸಲೆನ್ನಂ |! ವಾನರಶೌರ್ಯೋನ್ನತಿಯನ | ಹೀನಂಗಂ ಪೇಳಲರಿದದಂ ದಶಕಂಠಾ || ೧೨೩ || ನಿನ್ನನುಜಂ ಬರೆ ಕೃಪೆಯಿಂ | ಮನ್ನಿಸಿ ಲಂಕಾಧಿಪತ್ಯಮಂ ಕರುಣಿಸಿದಂ || ಮುನ್ನೀರು ಬಂಧಿಸಿ ಬಳಿ | ಕನ್ನಡೆತಂದಂ ಸರಾಗದಿಂದಂ ರಾಮಂ || ೧೨೪ li. ಚಾರುಸುವೇಲಾಚಲದೊಳ್ | ಸೂರಾತ್ಮಜಮುಖ್ಯ ವಾನರೇಂದ್ರರ್ವೆರಸಾ | ಶ್ರೀರಾಘವನೊಪ್ಪಿರ್ಪ್ಪo | ವೀರಾರ್ಭಟೆಗೊಂಡು ಕಪಿಗಳವನಂ ಬಳಸಲ್ | ೧೨೫ || ಕರುಣದೆ ರಾಘವನೆನ್ನಂ || ಕರೆಯಿಸಿ ದನುಜೇಂದ್ರಗೆಮ್ಮ ಸೈನಿಕಮಂ ಬಿ || ತರಿಸೆಂದು ಪೇಟೆ ಬಂದಂ 1 ಪರಮದಯಾಪರನುಮಲೈ ರಾಘವನದಟಿಂ || ೧೨೬ || ಅವರವರಾಕಾರಂಗಳ | ನವರ ಮಹಾಸತ್ಯಶೌರ್ಯಸಾಹಸಗಳನುಂ |