ಸಪ್ತಮಾಶ್ವಾಸ. 141 ವನಜಾಕ್ಷಂ ಮನ್ನಿಸಿ ಹನು | ಮನ ಸೆಗಲೇದ್ದು ೯೦ ನಡೆಯಿಸಿದ ಮುಂಬಲಮಂ || ೧೧೨ || ಅಂಗದನನೇರ್ದ್ದು ವಾನರ | ಪುಂಗವನಂ ಕೂಡಿಕೊಳುತೆ ಸೌಮಿತ್ರಿ ಕೃಪಾ | ಪಾಂಗನ ಸೀತಾನಾಥನ | ಸಂಗಡಮೆಯ್ತಂದನಧಿಕಸಂತೋಷದೊಳಂ || ೧೧೩ || ಶ್ರೀರಾಮಂ ಬಲವೆರಸುಂ | ವಾರಿಧಿಯಂ ದಾಂಟಿ ದಕ್ಷಿಣದ ಕೂಲದೊಳಂ || ಚಾರುಸುವೇಲಾಶೈಲಮ | ನೇರಿರ್ದ್ದ ರಾತ್ರಿಯಲ್ಲಿ ಚಂದ್ರಪ್ರಭೆಯಿಂ 1 m೪ || ಆ ಮರುದೆವಸಂ ರತ್ನ | ಸೋಮಮಹಾಕಾಂತಿಯಿಂದ ಶೋಭಿಪ ಲಂಕಾ | ನಾಮಾಂಕಿತವುರಮಂ ರಘು | ರಾಮಂ ನೋಡುತ್ತಮಿರ್ದ್ದನಚ್ಚರಿಯೆಂದುಂ || ಉ೫ | ಈ ನಗರಮನೊಳವುಗೆ ಗಿರಿ | ಜಾನಾಥಂಗಮದಸಾಧ್ಯಮಕ್ಕೆ ಪವನಜಂ || ತಾನೊರ್ವನೆ ನಡೆದುಂ ದನು | ಜಾನೀಕಮನರೆದು ಬಂದುದತ್ಯಾಶ್ಚರ್ಯ೦. 11 ೧೬ || ಎನುತಂ ರಾಘವನನಿಲನ | ತನುಜಾತನನ್ನೆದೆ ಪೊಗಳುತಿರೆ ನೋಡುತಮಂ || ದಿನಜವಿಭೀಷಣಮುಖ್ಯರ್ | ರ್ಬಿನದದೆ ಕೊಂಡಾಡುತಿರ್ದ್ದರದನೇವೇಳೆಂ || ೧೭ || ಇನಸುತ ನೀನಂದುಂ ಬಂ ! ಧನದೊಳಗಿರಿಸಿದನನಿಂದು ಬೀಳ್ಳುಡಲವನಾ | ದನುಜೇಂದ್ರನ ಪೊರೆಗೆಯ್ಯುಗೆ | ಎನುತಂ ನಿಯಮಿಸಿದನಬ್ಬಲೋಚನನಾಗಳ್ || nmಲೆ | ಸುರಪಜನಂ ಕೊಂದೊಲ್ ದಶ | ಶಿರನಂ ತತ್ಪುತ್ರಮಿತ್ರಬಾಂಧವರಂ ಸಂ || ಹರಿಸುವನೀ ರಾಘವನಿದ ! ನೊರೆಯೆಂದಿನಸೂನು ಶುಕನನುರೆ ಬೀಳ್ಕೊಟ್ಟಂ | mm | 39
ಪುಟ:ಹನುಮದ್ದ್ರಾಮಾಯಣಂ.djvu/೧೪೯
ಗೋಚರ