ಪುಟ:ಹನುಮದ್ದ್ರಾಮಾಯಣಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪ್ತಮಾಶ್ವಾಸ. 145 ವರನನುಜನಿವನ ಸತ್ತಮ | ನೊರೆವೊಡೆ ಫಣಿನಾಥನೊರೆಯೆ ದನುಜೋತ್ತಂಸಾ || ೧೪9 | ಶತಮಖಕಮಲಜಗಿರಿಜಾ | ಪತಿನುತನಂ ವೇದವೇದ್ಯನಂ ನಿರುಪಮನಂ || ವಿತತಸುಸೇನಾಮಧ್ಯ || ತನಂ ಶ್ರೀರಾಮಚಂದ್ರನಂ ನೋಡರಸಾ || ೧೪೩ | ಪರಿತೋಷದೊಳಂ ಸರಮಾ | ವರನಂ ನೋಡುತ್ತುಮಿರ್ಷ್ಪನಾತನೆ ರಾಮಂ || ಧರಣಿಯನುರೆ ಪಾಲಿಸಲವ || ತರಿಸಿದ ಪರಮಾತ್ಮನೆಂದುಮಿಳೆ ತಿಳಿಗಿವನಂ 11 ೪೪ | ಈತನಲಾ ಮಧುಮಥನಂ | ಸೀತೆಯಲಾ ಲೋಕಮಾತೆ ತಿಳಿಯದೆ ನೀನೀ || ಪಾತಕಕೊಳಗಾದೆಯಲಾ | ಭೂತಳದೊಳ್ ಬ್ರಹ್ಮಕುಲದೊಳುದಯಂಗೆಯ್ಯುಂ || ೧೪೫ | ಧರಣೀಸುತೆಯಂ ಶ್ರೀರಘು | ವರಗೊಪ್ಪಿಸಿ ಕಾವುದೆಂದು ಮರೆವುಗಲಾತಂ || ಕರುಣಿಸುವಂ ಮೇಣ್ ನಿನಗಿಹ | ಪರದೊಳಗತ್ಯಂತಸುಖಮನಿತ್ತಪನರಸಾ ||೧೪೬ | ಶುಕನಿಂತೆನೆ ಕೇಳುಂ ದಶ | ಮುಖನ ಕೋಪದೊಳೆ ಪೇಳ್ಳನೆಲವೋ ನೀನೀ || ಯುಕುತಿಯನೆನ್ನೋಳ್‌ ಪೇಳ್ವೆಡೆ | ಸಕುತಿಯುಮೆನಿತಿರ್ಕ್ಕುಮಧಮ ನೀಚ ದುರಾತ್ಮಾ || ೧೪೭ || ನಿರ್ಜರರೆನಗನುಚರರಾ | ಧೂರ್ಜಟಿ ಮದ್ಯಹದೊಳಿರ್ಪ್ಪನೀ ಕಪಿನರರಂ || ತರ್ಜಿಪುದೇಂ ಘನಮೆನುತಂ | ಗರ್ಜಿಸಿ ಜಳಪಿಸಿದನಂದು ಶಶಿಹಾಸಮನುಂ | ೧೪ಲೆ | ಪೋಷಿಸಿದಾತಂ ನೀನೆಂ | ದೀಸೊರೆದೊಡೆ ಕೋಪವಾಯ್ತು ಪತ್ಥಂ ನಿನಗಾಂ | ಭಾಪಿಸಿದುದಪ್ಪುದೇನೆನು | ತಾ ಸಭೆಯಿಂ ಪೊರಟನಂದು ಶುಕನುಂ ವ್ಯಥೆಯಿಂ | ೧೪೯ |